ICC Men's odi Batting rankings: ಇಂದು ಚಾಂಪಿಯನ್ಸ್ ಟ್ರೋಫಿ 2025ರ ಮೊದಲ ದಿನ. ಇಂದು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿವೆ. ಈಗಾಗಲೇ ಮೊದಲು ಬ್ಯಾಟಿಂಗ್ ಮಾಡಿರುವ ನ್ಯೂಜಿಲ್ಯಾಂಡ್ ತಂಡವು ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ಗಳನ್ನ ಕಳೆದುಕೊಂಡು 320 ರನ್ಗಳ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಿದೆ. ಚಾಂಪಿಯನ್ಸ್ ಟ್ರೋಫಿಯ ಮೊದಲ ದಿನವೇ ಪಾಕ್ ತಂಡದ ಮಾಜಿ ನಾಯಕ ಬಾಬರ್ ಅಜಮ್ ಐಸಿಸಿ ಶ್ರೇಯಾಂಕದಲ್ಲಿ ನಂ.1 ಸ್ಥಾನ ಕಳೆದುಕೊಂಡಿದ್ದಾರೆ. ಈ ಬಾರಿ ಶ್ರೇಯಾಂಕದಲ್ಲಿ ಅವರು ಜಾರಿದ್ದು, ಭಾರತದ ಸ್ಟಾರ್ ಓಪನಿಂಗ್ ಬ್ಯಾಟ್ಸ್ಮನ್ ಶುಭಮನ್ ಗಿಲ್ ನಂ.1 ಸ್ಥಾನವನ್ನ ಅಲಂಕರಿಸಿದ್ದಾರೆ.
ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಶುಭಮನ್ ಗಿಲ್ ನಂ.1 ಬ್ಯಾಟ್ಸ್ಮನ್!
ಐಸಿಸಿ ಹೊಸ ಏಕದಿನ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈಗ ಶುಭಮನ್ ಗಿಲ್ ಏಕದಿನ ಕ್ರಿಕೆಟ್ನಲ್ಲಿ ನಂ.1 ಬ್ಯಾಟ್ಸ್ಮನ್ ಆಗಿದ್ದಾರೆ. ಅವರ ರೇಟಿಂಗ್ ಈಗ 796ಕ್ಕೆ ಏರಿದೆ. ಇದಕ್ಕೂ ಮೊದಲು 2023ರಲ್ಲಿ ಶುಭಮನ್ ಗಿಲ್ ಸ್ವಲ್ಪ ಸಮಯದವರೆಗೆ ನಂ.1 ಸ್ಥಾನವನ್ನು ಅಲಂಕರಿಸಿದ್ದರು. ಆದರೆ ನಂತರ ಬಾಬರ್ ಅಜಮ್ ಅದನ್ನು ಆಕ್ರಮಿಸಿಕೊಂಡಿದ್ದರು. ಬಹಳ ದಿನಗಳ ನಂತರ ಇದೀಗ ಬಾಬರ್ ಅಜಮ್ ತಮ್ಮ ನಂ.1 ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು. ಏತನ್ಮಧ್ಯೆ, ಬಾಬರ್ ಅಜಮ್ ಈಗ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಒಂದು ಸ್ಥಾನವನ್ನು ಕಳೆದುಕೊಂಡಿರುವ ಅವರ ರೇಟಿಂಗ್ 773 ಆಗಿದೆ. ಮೊದಲ ಮತ್ತು ಎರಡನೇ ಸ್ಥಾನಗಳ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ, ಹೀಗಾಗಿ ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ ಇನ್ನೂ ಕೆಲವು ಏರಿಳಿತಗಳನ್ನು ಕಾಣಬಹುದಾಗಿದೆ.
ಇದನ್ನೂ ಓದಿ: ಚಾಂಪಿಯನ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಿದ್ರೆ ತೆಂಡೂಲ್ಕರ್ & ಪಾಟಿಂಗ್ ದಾಖಲೆಗಳು ಧೂಳಿಪಟವಾಗಲಿವೆ!!
India’s prolific batter and Sri Lanka’s ace spinner the big winners in the latest ICC Men’s Player Rankings ahead of the #ChampionsTrophy 🏏https://t.co/rUB3vR3dxh
— ICC (@ICC) February 19, 2025
ರೋಹಿತ್ ಶರ್ಮಾಗೆ ಮೂರನೇ ಸ್ಥಾನ, ಹೆನ್ರಿಕ್ ಕ್ಲಾಸೆನ್ ಜಿಗಿತ!
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಇನ್ನೂ ಮೂರನೇ ಸ್ಥಾನದಲ್ಲಿದ್ದಾರೆ. ಅವರ ಪ್ರಸ್ತುತ ರೇಟಿಂಗ್ 761 ಆಗಿದೆ. ಏತನ್ಮಧ್ಯೆ, ದಕ್ಷಿಣ ಆಫ್ರಿಕಾದ ಹೆನ್ರಿಕ್ ಕ್ಲಾಸೆನ್ ಕೂಡ ಒಂದು ಸ್ಥಾನ ಜಿಗಿದಿದ್ದಾರೆ. ಅವರು ಈಗ 756 ರೇಟಿಂಗ್ನೊಂದಿಗೆ ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ. ನ್ಯೂಜಿಲೆಂಡ್ನ ಡ್ಯಾರಿಲ್ ಮಿಚೆಲ್ ಕೂಡ ಎರಡು ಸ್ಥಾನ ಏರಿಕೆ ಕಂಡಿದ್ದು, 740 ರೇಟಿಂಗ್ನೊಂದಿಗೆ 5ನೇ ಸ್ಥಾನವನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.
ವಿರಾಟ್ ಕೊಹ್ಲಿಗೆ 6ನೇ ಸ್ಥಾನ, ಶ್ರೇಯಸ್ ಅಯ್ಯರ್ ಸಾಧನೆ!
ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 6ನೇ ಸ್ಥಾನವನ್ನು ಉಳಿಸಿಕೊಂಡಿದ್ದು, ಅವರು ಈಗ 727 ರೇಟಿಂಗ್ ಹೊಂದಿದ್ದಾರೆ. ಐರ್ಲೆಂಡ್ನ ಯುವ ಆಟಗಾರ ಹ್ಯಾರಿ ಟೆಕ್ಟರ್ ಈ ಬಾರಿ ಮೂರು ಸ್ಥಾನಗಳನ್ನು ಕಳೆದುಕೊಂಡಿದ್ದಾರೆ. ಅವರು ಈಗ 713 ರೇಟಿಂಗ್ನೊಂದಿಗೆ 7ನೇ ಸ್ಥಾನಕ್ಕೆ ಕುಸಿದಿದ್ದಾರೆ. ಏತನ್ಮಧ್ಯೆ ಶ್ರೀಲಂಕಾದ ಚರಿತ್ ಅಸ್ಲಂಕಾ ಅದ್ಭುತ ಜಿಗಿತ ಕಂಡಿದ್ದು, 694 ರೇಟಿಂಗ್ ಮೂಲಕ ೮ನೇ ಸ್ಥಾನಕ್ಕೆ ಬಂದಿದ್ದಾರೆ. ಭಾರತದ ಶ್ರೇಯಸ್ ಅಯ್ಯರ್ ಕೂಡ ಎರಡು ಸ್ಥಾನ ಏರಿಕೆ ಕಂಡಿದ್ದಾರೆ. ಅವರು 679 ರೇಟಿಂಗ್ನೊಂದಿಗೆ 9ನೇ ಸ್ಥಾನಕ್ಕೆ ತಲುಪಿದ್ದಾರೆ. ವೆಸ್ಟ್ ಇಂಡೀಸ್ನ ಶಾಯ್ ಹೋಪ್ ಎರಡು ಸ್ಥಾನ ಕುಸಿದಿದ್ದಾರೆ. ಅವರ ರೇಟಿಂಗ್ 672 ಆಗಿದ್ದು, ಹತ್ತನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಸ್ಟಾರ್ ಆಟಗಾರನ ನಿಧನ ! ಟೀಂ ಇಂಡಿಯಾದಲ್ಲಿ ಮಡುಗಟ್ಟಿದ ಶೋಕ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.