Maharashtra Extends Restrictions : ಜೂನ್ 1 ರವರೆಗೆ 'ಲಾಕ್​ಡೌನ್' ವಿಸ್ತರಣೆ..!

ರಾಜ್ಯ ಮುಖ್ಯ ಕಾರ್ಯದರ್ಶಿ ಸೀತಾರಾಂ ಕುಂಟೆ ನಿನ್ನೆ ಆದೇಶ ಹೊರಡಿಸಿದ್ದಾರೆ

Last Updated : May 13, 2021, 02:46 PM IST
  • ಮುಂದುವರೆಯುತ್ತಿರುವ ಕೊರೋನಾ ಎರಡನೇ ಅಲೆಯ ಹಿನ್ನೆಲೆ
  • ಮಹಾರಾಷ್ಟ್ರದಲ್ಲಿ ಲಾಕ್​ಡೌನ್​ಅನ್ನು ಜೂನ್ 1 ರವರೆಗೆ ವಿಸ್ತರಿಸಲಾಗಿದೆ
  • ರಾಜ್ಯ ಮುಖ್ಯ ಕಾರ್ಯದರ್ಶಿ ಸೀತಾರಾಂ ಕುಂಟೆ ನಿನ್ನೆ ಆದೇಶ ಹೊರಡಿಸಿದ್ದಾರೆ
Maharashtra Extends Restrictions : ಜೂನ್ 1 ರವರೆಗೆ 'ಲಾಕ್​ಡೌನ್' ವಿಸ್ತರಣೆ..! title=

ಮುಂಬೈ : ಮುಂದುವರೆಯುತ್ತಿರುವ ಕೊರೋನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ವಿಧಿಸಲಾಗಿರುವ ಲಾಕ್​ಡೌನ್​ಅನ್ನು ಜೂನ್ 1 ರ ಬೆಳಿಗ್ಗೆ 7 ಗಂಟೆವರೆಗೆ ವಿಸ್ತರಿಸಲಾಗಿದೆ ರಾಜ್ಯ ಮುಖ್ಯ ಕಾರ್ಯದರ್ಶಿ ಸೀತಾರಾಂ ಕುಂಟೆ ನಿನ್ನೆ ಆದೇಶ ಹೊರಡಿಸಿದ್ದಾರೆ.

ಹಾಲಿ ಇರುವ ನಿರ್ಬಂಧಗಳು ಮೇ 15 ರ ಬೆಳಿಗ್ಗೆಗೆ ಮುಕ್ತಾಯವಾಗುತ್ತಿವೆ ಇದರ ಹಿನ್ನೆಲೆಯಲ್ಲಿ, ಈ ನಿರ್ಬಂಧ(New Restrictions)ಗಳನ್ನು ಮುಂದಕ್ಕೆ ವಿಸ್ತರಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಈ ಮುನ್ನ ಅವಕಾಶ ನೀಡಿದ್ದಂತೆಯೇ ಅಗತ್ಯ ವಸ್ತುಗಳ ಮಾರಾಟಕ್ಕೆ ಸೀಮಿತ ಅವಕಾಶ ಮುಂದುವರೆಯಲಿದೆ.

ಇದನ್ನೂ ಓದಿ : Redmi Note 10S: 5,000mAh ಬ್ಯಾಟರಿಯೊಂದಿಗೆ ಭಾರತದಲ್ಲಿ ಬಿಡುಗಡೆಯಾಗಿದೆ Redmi Note 10S ಸ್ಮಾರ್ಟ್‌ಫೋನ್

ಜೊತೆಗೆ, ಯಾವುದೇ ವ್ಯಕ್ತಿಗಳು ಮಹಾರಾಷ್ಟ್ರ(Maharashtra) ಪ್ರವೇಶಿಸುವ ಮುಂಚೆ 48 ಗಂಟೆಗಳ ಒಳಗೆ ಬಂದಿರುವ ಆರ್​ಟಿಪಿಸಿಆರ್​ ಪರೀಕ್ಷೆಯ ನೆಗೆಟೀವ್ ರಿಪೋರ್ಟ್ ತೋರಿಸುವುದು ಕಡ್ಡಾಯ ಎಂದು ಆದೇಶದಲ್ಲಿ ತಿಳಿಸಲಾಗಿದೆ. 

ಇದನ್ನೂ ಓದಿ : PM Kisan : ನಾಳೆಯೇ ರೈತರ ಖಾತೆ ಸೇರಲಿದೆ 8ನೇ ಕಂತಿನ ಹಣ ; ರೈತರೊಂದಿಗೆ ಸಂವಾದ ನಡೆಸಲಿರುವ ಪ್ರಧಾನಿ ಮೋದಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News