ನವದೆಹಲಿ: ಛತ್ತೀಸಗಡ್ ನ ಬಿಜಾಪುರ ಜಿಲ್ಲೆಯಲ್ಲಿ ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ 10 ವಾಹನಗಳಿಗೆ ನಕ್ಸಲರು ಬೆಂಕಿ ಹಚ್ಚಿದ್ದಾರೆ. ಈ ಘಟನೆಯು ಬಿಜಾಪುರ್ ಜಿಲ್ಲೆಯ ಮದ್ದೇದ ಪ್ರದೇಶದಲ್ಲಿ ನಡೆದಿದೆ.
Chhattisgarh: Naxals torched 10 vehicles being used for road construction in Bijapur, yesterday. pic.twitter.com/HZFwoIvXMN
— ANI (@ANI) 4 February 2018
ಘಟನೆಯಲ್ಲಿ ಏಳು ಟ್ರಾಕ್ಟರುಗಳು, ಒಂದು ಡೋಜರ್, ಒಂದು ವಾಟರ್ ಟ್ಯಾಂಕರ್ ಮತ್ತು ಜೆಸಿಬಿ ಯಂತ್ರವನ್ನು ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದುಬಂದಿದೆ. ಈ ಪ್ರದೇಶದಲ್ಲಿ ರಸ್ತೆಗಳ ನಿರ್ಮಾಣವನ್ನು 'ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ' ಅಡಿಯಲ್ಲಿ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಇದಕ್ಕೂ ಮೊದಲು ಜನವರಿಯ ಮೊದಲ ವಾರದಲ್ಲೇ ಜಾರ್ಖಂಡ್-ಛತ್ತೀಸ್ಗಢದ ಗಡಿಯ ಬಳಿ ಛತ್ತೀಸ್ಗಢದ ಬಲರಾಂಪುರ್ ಜಿಲ್ಲೆಯಲ್ಲಿ ನಕ್ಸಲರು ಆರು ವಾಹನಗಳಿಗೆ ಬೆಂಕಿ ಹಚ್ಚಿದ್ದರು.