Big Decision: ವೈಯಕ್ತಿಕ ಬಳಕೆಗೆ Oxygen Concentrators ಆಮದು ಮಾಡಿಕೊಳ್ಳಲು ಅನುಮತಿ ನೀಡಿದ ಸರ್ಕಾರ

Big Decision On Oxygen Concentrators: ದೇಶಾದ್ಯಂತ ಹೆಚ್ಚಾಗುತ್ತಿರುವ Covid-19 ಪ್ರಕರಣಗಳ ಹಿನ್ನೆಲೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

Written by - Nitin Tabib | Last Updated : Apr 30, 2021, 10:02 PM IST
  • ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಮಧ್ಯೆ ಸರ್ಕಾರದ ಮಹತ್ವದ ನಿರ್ಧಾರ.
  • ಆಕ್ಷಿಜನ್ ಕಾನ್ಸನ್ಟ್ರೆಶನ್ ವೈಯಕ್ತಿಕ ಆಮದಿಗೆ ಸರ್ಕಾರ ಅನುಮತಿ.
  • ಈ ಮೊದಲು ಇದಕ್ಕೆ ಅನುಮತಿ ನೀಡಲಾಗಿರಲಿಲ್ಲ.
Big Decision: ವೈಯಕ್ತಿಕ ಬಳಕೆಗೆ Oxygen Concentrators ಆಮದು ಮಾಡಿಕೊಳ್ಳಲು ಅನುಮತಿ ನೀಡಿದ ಸರ್ಕಾರ title=
Oxygen Concentrators Import (File Photo)

Oxygen Concentrators Import: ಕೊರೊನಾ (Coronavirus) ಮಹಾಸಂಕಷ್ಟದ ಹಿನ್ನೆಲೆ ಹೆಚ್ಚುತ್ತಿರುವ ಆಮ್ಲಜನಕದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಇ -ಕಾಮರ್ಸ್ ಪೋರ್ಟಲ್ ನಿಂದ ಖರೀದಿಸಿದ ಆಮ್ಲಜನಕ ಸಾಂಧ್ರಕಗಳನ್ನೂ ವೈಯಕ್ತಿಕ ಬಲಕೆಗಾಗಿ ಪೋಸ್ಟ್ ಅಥವಾ ಕೊರಿಯರ್ ಮೂಲಕ ಆಮದು ಮಾಡಿಕೊಲ್ಲಲ್ಲು ಸರ್ಕಾರ ಅನುಮತಿ ನೀಡಿದೆ. ದೇಶಾದ್ಯಂತ ಹೆಚ್ಚಾಗುತ್ತಿರುವ ಕೊರೋನಾ ವೈರಸ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂದು ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (DGFT) ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ವೈಯಕ್ತಿಕ ಬಳಕೆಗಾಗಿ ಆಮ್ಲಜನಕ ಸಾಂದ್ರತೆಯಾ ಯಂತ್ರಗಳನ್ನು  ಆಮದಿನ ಮೇಲಿನ ವಿನಾಯಿತಿ ಜುಲೈ 31, 2021 ರವರೆಗೆ ಇರಲಿದೆ ಎನ್ನಲಾಗಿದೆ. ಇದರಲ್ಲಿ, ಕಸ್ಟಮ್ ಕ್ಲಿಯರೆನ್ಸ್ನಲ್ಲಿ ಇದನ್ನು ಉಡುಗೊರೆಯಾಗಿ ಪರಿಗಣಿಸಲಾಗುವುದು ಎಂದು ಹೇಳಲಾಗಿದೆ.

ಇದನ್ನೂ ಓದಿ- Covid-19 in Karnataka: ಕರ್ನಾಟಕವನ್ನು ಬೆಚ್ಚಿಬೀಳಿಸಿದ ಕೊರೊನಾ, ಮೃತಪಟ್ಟವರಲ್ಲಿ ಶೇ.30 ರಷ್ಟು ಜನರಿಗೆ ಇತರ ಯಾವುದೇ ಕಾಯಿಲೆ ಇರಲಿಲ್ಲ

ಅಧಿಸೂಚನೆಯ ಪ್ರಕಾರ, ಇಕಾಮರ್ಸ್ ಪೋರ್ಟಲ್‌ನಿಂದ ಖರೀದಿಸುವುದು ಸೇರಿದಂತೆ ಪೋಸ್ಟ್ ಅಥವಾ ಕೊರಿಯರ್ ಮೂಲಕ ಸರಕುಗಳನ್ನು ಆಮದು ಮಾಡಿಕೊಳ್ಳುವಾಗ  ಕಸ್ಟಮ್ ಕ್ಲಿಯರೆನ್ಸ್ ನಲ್ಲಿ ಸರಕನ್ನು (Oxygen Congentrator Import) ಉಡುಗೊರೆಯಾಗಿ ಪರಿಗಣಿಸಲಾಗುವುದು ಎನ್ನಲಾಗಿದೆ. ಇದು ಜೀವ ಉಳಿಸುವ ಔಷಧಿಗಳು, ಆಮ್ಲಜನಕ ಸಾಂದ್ರಕಗಳು ಮತ್ತು ರಾಖಿಗಳಿಗೆ ಮಾತ್ರ ಅನ್ವಯಿಸಲಿದೆ. ಆದರೆ, ಪ್ರಸ್ತುತ  ರಾಖಿಗೆ ಸಂಬಂಧಿಸಿದ ಉಡುಗೊರೆಗಳನ್ನು ಈ ವರ್ಗದಿಂದ ಹೊರಗಿಡಲಾಗಿದೆ. ಈ ಮೊದಲು, ಆಮ್ಲಜನಕ ಸಾಂದ್ರಕಗಳನ್ನು  ಈ ಪಟ್ಟಿಯಲ್ಲಿ ಸೇರಿಸಲಾಗಿರಲಿಲ್ಲ.  ಆದರೆ ಹೆಚ್ಚಾಗುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಇದನ್ನೂ ಓದಿ- Home Isolation ನೂತನ ಮಾರ್ಗಸೂಚಿಗಳು ಹಾಗೂ ತೆಗೆದುಕೊಳ್ಳಬೇಕಾದ ಔಷಧಿಗಳ ಸಲಹೆ ಇಲ್ಲಿದೆ

ಏನಿದು ಆಮ್ಲಜನಕ ಸಾಂದ್ರಕ ಯಂತ್ರ? (Oxygen Concentrator)
ಆಮ್ಲಜನಕ ಸಾಂಧ್ರಕ ಯಂತ್ರ ಗಾಳಿಯಿಂದ ಆಮ್ಲಜನಕವನ್ನು (Oxygen) ಮಾಡುವ ವೈದ್ಯಕೀಯ ಸಾಧನವಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಕರೋನ ಪ್ರಕರಣದಿಂದಾಗಿ, ಇದು ಹೆಚ್ಚಿನ ಬೇಡಿಕೆಯನ್ನು ಪಡೆಯುತ್ತಿದೆ. ಆಮ್ಲಜನಕ ಸಾಂದ್ರತೆಯು ಗಾಳಿಯನ್ನು ಸೆಳೆಯುತ್ತದೆ ಮತ್ತು ಫಿಲ್ಟರ್ ಮಾಡುತ್ತದೆ ಮತ್ತು ರೋಗಿಗೆ (Covid-19) ನಿರಂತರವಾಗಿ ಆಮ್ಲಜನಕವನ್ನು ಪೂರೈಸುತ್ತದೆ. ಆಮ್ಲಜನಕ ಸಿಲಿಂಡರ್‌ನಲ್ಲಿ ನೀವು ಆಮ್ಲಜನಕವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಮಾತ್ರ ಸಂಗ್ರಹಿಸಬಹುದು.

ಇದನ್ನೂ ಓದಿ- ಕೊರೊನಾ ಸೋಂಕಿನ ನಂತರ ಕಳೆದುಕೊಂಡ ವಾಸನೆ ಗ್ರಹಿಕೆಯ ಶಕ್ತಿ ಮತ್ತು ರುಚಿ ಮರಳಿ ಪಡೆಯುವುದು ಹೇಗೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News