ಸಿರೋಹಿ: ರಾಜಸ್ಥಾನದ ಸಿರೋಹಿ ನಗರದ ಮಾಲಿ ಹಾಸ್ಟೆಲ್ ರಸ್ತೆ ಪ್ರದೇಶದಲ್ಲಿ ಚರಂಡಿ ಮೇಲೆ ಪಾದಚಾರಿ ರಸ್ತೆ ಕುಸಿದು ಅಪಘಾತ ಸಂಭವಿಸಿದೆ. ಹಾದುಹೋಗುವ ಚರಂಡಿಯಲ್ಲಿ ಪಾದಚಾರಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲಾಗಿದೆ. ಈ ಅಪಘಾತದ ಪಾದಚಾರಿ ಮಾರ್ಗದಲ್ಲಿ ನಿಂತಿದ್ದ ಇಬ್ಬರು ಚರಂಡಿಗೆ ಬಿದ್ದಿದ್ದಾರೆ. ಅಲ್ಲದೆ, ಇದೇ ಪಾದಚಾರಿ ಮಾರ್ಗದಲ್ಲಿದ್ದ ಅಂಗಡಿಯ ಸರಕುಗಳು ಕೊಚ್ಚಿ ಹೋಗಿದ್ದು, ಅಂಗಡಿಯವರಿಗೂ ಸಾಕಷ್ಟು ನಷ್ಟ ಉಂಟಾಗಿದೆ ಎನ್ನಲಾಗಿದೆ.
ಮಾಹಿತಿಯ ಪ್ರಕಾರ, ವ್ಯಾಪಾರ ಸಂಕೀರ್ಣದ ಮೂಲಕ ಹಾದುಹೋಗುವ ಚರಂಡಿಯ ಪಾದಚಾರಿ ಇದ್ದಕ್ಕಿದ್ದಂತೆ ಕುಸಿದಿದೆ. ಅಪಘಾತದ ಸಮಯದಲ್ಲಿ, ಪಾದಚಾರಿ ಮಾರ್ಗದಲ್ಲಿ ನಿಂತಿದ್ದ ಇಬ್ಬರು ಚರಂಡಿಗೆ ಬಿದ್ದು ಗಾಯಗಳಾಗಿವೆ. ಅಪಘಾತದ ವಿಡಿಯೋ ಇಲ್ಲಿದೆ...
#WATCH: Portion of a footpath built over a drain, collapsed yesterday in Sirohi; 2 injured. #Rajasthan pic.twitter.com/4Ja6pgEt94
— ANI (@ANI) October 26, 2019
ಭಾರೀ ಶಬ್ಧದೊಂದಿಗೆ ಉಂಟಾದ ಈ ಅಪಘಾತ ಕಂಡು ಸುತ್ತಮುತ್ತಲಿನ ಜನತೆಗೆ ನಡುಕ ಉಂಟಾಗಿದೆ. ಸರಕುಗಳೊಂದಿಗೆ ಚರಂಡಿಗೆ ಬಿದ್ದ ಇಬ್ಬರು ಯುವಕರನ್ನು ಕಂಡು ಜನರಿಗೆ ಗಾಬರಿಯಾಯಿತು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಈ ಅಪಘಾತದಲ್ಲಿ 2 ರಿಂದ 3 ಲಕ್ಷ ಸರಕುಗಳು ಹಾನಿಯಾಗಿವೆ ಎಂದು ಅಂಗಡಿಯವರು ತಮ್ಮ ಅಳಲು ತೋಡಿಕೊಂಡಿದ್ದಾರೆ.