9 ರಾಜ್ಯ ಸಚಿವರಿಗೆ ಮೋದಿ ಸರ್ಕಾರದಲ್ಲಿ ದೊರೆದ ಖಾತೆಗಳ ವಿವರ!

ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ತಮ್ಮ ಸಚಿವ ಸಂಪುಟದ 57 ಸದಸ್ಯರೊಂದಿಗೆ ಪ್ರಮಾಣವಚನ ಸ್ವೀಕರಿಸಿದ ಬಳಿಕ ಇಂದು ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ.

Last Updated : May 31, 2019, 04:37 PM IST
9 ರಾಜ್ಯ ಸಚಿವರಿಗೆ ಮೋದಿ ಸರ್ಕಾರದಲ್ಲಿ ದೊರೆದ ಖಾತೆಗಳ ವಿವರ! title=

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ತಮ್ಮ ಸಚಿವ ಸಂಪುಟದ 57 ಸದಸ್ಯರೊಂದಿಗೆ ಪ್ರಮಾಣವಚನ ಸ್ವೀಕರಿಸಿದ ಬಳಿಕ ಇಂದು ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಇದರಲ್ಲಿ 9 ರಾಜ್ಯ ಸಚಿವರಿಗೆ(ಸ್ವತಂತ್ರ ನಿರ್ವಹಣೆ) ಯಾವ ಯಾವ ಖಾತೆ ದೊರೆತಿದೆ ಎಂಬ ಮಾಹಿತಿ ಇಲ್ಲಿದೆ.

1. ಪ್ರಹ್ಲಾದ್ ಸಿಂಗ್ ಪಟೇಲ್, ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ)- ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ

2. ರಾಜ್ ಕುಮಾರ್ ಸಿಂಗ್, ರಾಜ್ಯ ಸಚಿವ(ಸ್ವತಂತ್ರ ನಿರ್ವಹಣೆ)- ಇಂಧನ ಸಚಿವಾಲಯ, ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯ

3. ಹರ್ದೇವ್ ಸಿಂಗ್ ಪುರಿ, ರಾಜ್ಯ ಸಚಿವ(ಸ್ವತಂತ್ರ ನಿರ್ವಹಣೆ)- ನಗರಾಭಿವೃದ್ಧಿ, ನಾಗರಿಕ ವಿಮಾನಯಾನ, ವಾಣಿಜ್ಯ ಮತ್ತು ಕೈಗಾರಿಕೆ

4. ಮನ್ಸುಖ್ ಲಾಲ್ ಮಂಡವಿಯಾ, ರಾಜ್ಯ ಸಚಿವ(ಸ್ವತಂತ್ರ ನಿರ್ವಹಣೆ)- ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ.

5. ಸಂತೋಷ್ ಗಂಗವಾರ್, ರಾಜ್ಯ ಸಚಿವ(ಸ್ವತಂತ್ರ ನಿರ್ವಹಣೆ)- ಕಾರ್ಮಿಕ ಖಾತೆ

6. ರಾವ್ ಇಂದರ್ಜಿತ್ ಸಿಂಗ್, ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ)- ಅಂಕಿಅಂಶ ಮತ್ತು ಕಾರ್ಯಕ್ರಮದ ಅನುಷ್ಠಾನ ಮತ್ತು ಯೋಜನೆಗಳ ಸಚಿವಾಲಯ

7. ಶ್ರೀಪಾದ್ ನಾಯ್ಕ್, ರಾಜ್ಯ ಸಚಿವ(ಸ್ವತಂತ್ರ ನಿರ್ವಹಣೆ)- ರಕ್ಷಣಾ ಸಚಿವಾಲಯ, ಆಯುಶ್ ಸಚಿವಾಲಯ

8. ಡಾ. ಜಿತೇಂದ್ರ ಸಿಂಗ್, ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ)- ಈಶಾನ್ಯ ವಲಯ ಅಭಿವೃದ್ಧಿ, ಪ್ರಧಾನಿ ಕಚೇರಿ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ, ಪರಮಾಣು ಶಕ್ತಿ ಮತ್ತು ಸ್ಪೇಸ್

9. ಕಿರಣ್ ರಿಜಿಜು, ರಾಜ್ಯ ಸಚಿವ(ಸ್ವತಂತ್ರ ನಿರ್ವಹಣೆ)- ಯುವ ಮತ್ತು ಕ್ರೀಡಾ ಸಚಿವಾಲಯ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ
 

Trending News