PM Pension Scheme: ನಿವೃತ್ತಿಯ ನಂತರ ಪ್ರತಿ ತಿಂಗಳು ಗಳಿಸಿ ಅಧಿಕ ಆದಾಯ

PM Pension Scheme: ಸರ್ಕಾರವು ಹಲವು ಯೋಜನೆಗಳನ್ನು ಪ್ರಾರಂಭಿಸಿದ್ದು ಇದರ ಮೂಲಕ ಗಳಿಕೆಯು ಹೆಚ್ಚಾಗುತ್ತದೆ. ಇಂದಿನ ಲೇಖನದಲ್ಲಿ ನಿಮ್ಮ ನಿವೃತ್ತಿ ಜೀವನವನ್ನೂ, ವೃದ್ಧಾಪ್ಯವನ್ನು ಸುರಕ್ಷಿತವಾಗಿಸುವಂತಹ ನಾಲ್ಕು ಯೋಜನೆಗಳ ಬಗ್ಗೆ ತಿಳಿಸುತ್ತಿದ್ದೇವೆ.

Written by - Yashaswini V | Last Updated : Dec 24, 2020, 03:20 PM IST
  • ಕೇಂದ್ರ ಸರ್ಕಾರವು ದೇಶದ ಜನರಿಗಾಗಿ ಅನೇಕ ಯೋಜನೆಗಳನ್ನು ಪ್ರಾರಂಭಿಸಿದೆ
  • ಈ ಯೋಜನೆಗಾಗಿ ನೀವು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು
  • ಯೋಜನೆಯ ಲಾಭ ಪಡೆಯಲು ನೀವು 18 ರಿಂದ 40 ವರ್ಷ ವಯಸ್ಸಿನವರಾಗಿರಬೇಕು
PM Pension Scheme: ನಿವೃತ್ತಿಯ ನಂತರ ಪ್ರತಿ ತಿಂಗಳು ಗಳಿಸಿ ಅಧಿಕ ಆದಾಯ title=
Image courtesy: Zeebiz

ನವದೆಹಲಿ : PM Pension Scheme: ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿರುವ ಮಹಾಮಾರಿ ಕರೋನಾವೈರಸ್ ಸಾಂಕ್ರಾಮಿಕವು ಎಲ್ಲರಿಗೂ ಸಮಸ್ಯೆ ತಂದೊಡ್ಡಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ದೇಶದ ಜನರಿಗಾಗಿ ಅನೇಕ ಯೋಜನೆಗಳನ್ನು ಪ್ರಾರಂಭಿಸಿದೆ. ಸರ್ಕಾರ ಆರಂಭಿಸಿರುವ ಹಲವು ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ನಿಮ್ಮ ನಿವೃತ್ತಿ ಜೀವನವನ್ನೂ, ವೃದ್ಧಾಪ್ಯವನ್ನು ಸುರಕ್ಷಿತವಾಗಿಸುವಂತಹ ನಾಲ್ಕು ಯೋಜನೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.

1. ಅಟಲ್ ಪಿಂಚಣಿ ಯೋಜನೆ (Atal pension scheme)
ಯಾವುದೇ ಭಾರತೀಯರು ಅಟಲ್ ಪಿಂಚಣಿ ಯೋಜನೆ (Atal pension scheme)ಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಗಾಗಿ ನೀವು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಯೋಜನೆಯ ಲಾಭ ಪಡೆಯಲು ನೀವು 18 ರಿಂದ 40 ವರ್ಷ ವಯಸ್ಸಿನವರಾಗಿರಬೇಕು. ಅಲ್ಲದೆ ಎಪಿವೈ ಅಡಿಯಲ್ಲಿ ಪಿಂಚಣಿ ಪಡೆಯಲು ನೀವು ಕನಿಷ್ಠ 20 ವರ್ಷಗಳವರೆಗೆ ಹೂಡಿಕೆ ಮಾಡಬೇಕು. ಪಿಂಚಣಿ ಯೋಜನೆ (ಎಪಿವೈ) ಅಡಿಯಲ್ಲಿ ಕನಿಷ್ಠ 1,000 ರೂ. ಪಿಂಚಣಿ ಮತ್ತು ಗರಿಷ್ಠ 5,000 ರೂ. ಮಾಸಿಕ ಪಿಂಚಣಿ ಪಡೆಯಬಹುದು. 60 ವರ್ಷದಿಂದ ನೀವು ಎಪಿವೈ ಅಡಿಯಲ್ಲಿ ಪಿಂಚಣಿ ಪಡೆಯಲು ಪ್ರಾರಂಭಿಸುತ್ತೀರಿ.

2. ಪಿಎಂ ಶ್ರಮ ಯೋಗಿ ಮಾನ್‌ ಧನ್‌ ಯೋಜನೆ (PM shram yogi mandhan yojana)
ಈ ಪಿಂಚಣಿ ಯೋಜನೆಯನ್ನು ಸರ್ಕಾರ 2019 ರಲ್ಲಿ ಪ್ರಾರಂಭಿಸಿದೆ. ಈ ಯೋಜನೆಯಡಿ ಅಸಂಘಟಿತ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರಿಗೆ ಸರ್ಕಾರದಿಂದ ಪಿಂಚಣಿ (Pension) ನೀಡಲಾಗುತ್ತದೆ. ಈ ಯೋಜನೆಯಡಿ 60 ವರ್ಷದ ನಂತರ ಪ್ರತಿ ತಿಂಗಳು 3000 ರೂಪಾಯಿ ಪಿಂಚಣಿ ನೀಡಲಾಗುವುದು. ಅಂದರೆ ನಿಮಗೆ ವಾರ್ಷಿಕವಾಗಿ 36 ಸಾವಿರ ರೂಪಾಯಿಗಳು ಸಿಗುತ್ತವೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪ್ರಕಾರ ಈ ಯೋಜನೆಯ ಮೂಲಕ ಈವರೆಗೆ ಸುಮಾರು 43.7 ಲಕ್ಷ ಜನರನ್ನು ಸೇರಿಸಲಾಗಿದೆ.

ಇದನ್ನೂ ಓದಿ: Pension: Life Certificate ಇನ್ನೂ ಸಲ್ಲಿಸಿಲ್ಲವೇ? ಇವರಿಗೆ ಕರೆ ಮಾಡಿ ನಿಮ್ಮ ಕೆಲಸ ಪೂರ್ಣಗೊಳಿಸಿ

3. ಪಿಎಂ ಕಿಸಾನ್ ಮನ್‌ಧನ್ ಯೋಜನೆ (PM Kisan Mandhan Yojana)
ಪ್ರಧಾನ್ ಮಂತ್ರಿ ಕಿಸಾನ್ ಮನ್‌ಧನ್ ಯೋಜನೆ ಅಡಿಯಲ್ಲಿ ರೈತರಿಗೆ ಪಿಂಚಣಿ ನೀಡಲಾಗುತ್ತದೆ. ಪ್ರಧಾನಿ ಕಿಸಾನ್ ಮಾಂಧನ್ ಯೋಜನೆ ಅಡಿಯಲ್ಲಿ 18 ರಿಂದ 40 ವರ್ಷದೊಳಗಿನ ಯಾವುದೇ ರೈತ ಲಾಭವನ್ನು ಪಡೆಯಬಹುದು. 60 ವರ್ಷದ ನಂತರ ರೈತರಿಗೆ ತಿಂಗಳಿಗೆ 3 ಸಾವಿರ ರೂಪಾಯಿ ಅಥವಾ ಯೋಜನೆಯಡಿ 36 ಸಾವಿರ ರೂಪಾಯಿ ವಾರ್ಷಿಕ ಪಿಂಚಣಿ ಸಿಗುತ್ತದೆ. ಈ ಯೋಜನೆಗೆ ಈವರೆಗೆ ಸುಮಾರು 20 ಲಕ್ಷ ರೈತರು ಸೇರ್ಪಡೆಗೊಂಡಿದ್ದಾರೆ ಎನ್ನಲಾಗಿದೆ.

4. ಪಿಎಂ ಸಣ್ಣ ಉದ್ಯಮ ಮನ್‌ಧನ್ ಯೋಜನೆ
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 2019 ರ ಸೆಪ್ಟೆಂಬರ್‌ನಲ್ಲಿ ಜಾರ್ಖಂಡ್‌ನಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದರು. ಇದು ಮುಖ್ಯವಾಗಿ ಸಣ್ಣ ಉದ್ಯಮಿಗಳಿಗೆ ಪಿಂಚಣಿ ಯೋಜನೆಯಾಗಿದೆ. ಸಣ್ಣ ಉದ್ಯಮಿಗಳಿಗೆ ಸಾಮಾಜಿಕ ಭದ್ರತೆ ಒದಗಿಸುವ ಉಪಕ್ರಮ ಇದಾಗಿದ್ದು, ಇದರ ಅಡಿಯಲ್ಲಿ ಅವರು 60 ವರ್ಷದ ನಂತರ 3000 ರೂಪಾಯಿಗಳ ಮಾಸಿಕ ಪಿಂಚಣಿ ಪಡೆಯುತ್ತಾರೆ.

ಇದನ್ನೂ ಓದಿ: ವೃದ್ಧರು ವಿಧವೆಯರು ಮತ್ತು ವಿಕಲಚೇತರಿಗೆ ‘ಸಿಹಿ ಸುದ್ದಿ’ ನೀಡಿದ ರಾಜ್ಯ ಸರ್ಕಾರ..!

ಈ ಯೋಜನೆಗಳಿಗೆ ನೋಂದಾಯಿಸುವುದು ಹೇಗೆ?
ಪಿಂಚಣಿ ಯೋಜನೆಯ ಲಾಭ ಪಡೆಯಲು ನೀವು ಸಾಮಾನ್ಯ ಸೇವಾ ಕೇಂದ್ರಕ್ಕೆ ಹೋಗಿ ನೋಂದಾಯಿಸಿಕೊಳ್ಳಬಹುದು. ಪಿಂಚಣಿ ಯೋಜನೆಯಲ್ಲೂ ಸರ್ಕಾರ ಸಮಾನವಾಗಿ ಕೊಡುಗೆ ನೀಡಲಿದೆ. ಯೋಜನೆಯ ಲಾಭ ಪಡೆಯಲು ನಿಯಮವನ್ನು ಬಹಳ ಸುಲಭಗೊಳಿಸಲಾಗಿದೆ. ವಿಶೇಷವೆಂದರೆ ಈ ಯೋಜನೆಯ ಲಾಭ ಪಡೆಯಲು, ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯನ್ನು ಹೊರತುಪಡಿಸಿ ಯಾವುದೇ ದಾಖಲೆಗಳು ಅಗತ್ಯವಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News