ನವದೆಹಲಿ: ಸಾರ್ವಜನಿಕ ವಲಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಇದೀಗ ಮತ್ತೊಂದು ಸಾಲ ಹಗರಣಕ್ಕೆ ತುತ್ತಾಗಿದೆ. ಹೌದು, ಬ್ಯಾಂಕ್ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್. (ಡಿಎಚ್ಎಫ್ಎಲ್) ಗೆ ನೀಡಲಾಗಿರುವ 3,688.58 ಕೋಟಿ ಸಾಲವನ್ನು ವಂಚನೆ ಎಂದು ಘೋಷಿಸಿದೆ. ಇದಕ್ಕೂ ಮುನ್ನ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರು ಬ್ಯಾಂಕಿಗೆ 14 ಸಾವಿರ ಕೋಟಿ ರೂ.ಪಂಗನಾಮ ಹಾಕಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.
ಇದಕ್ಕೆ ಸಂಬಂಧಿಸಿದಂತೆ ಗುರುವಾರ ಹೇಳಿಕೆ ನೀಡಿರುವ ಬ್ಯಾಂಕ್, ದೀವಾಣಿ ಹೌಸಿಂಗ್ ಫೈನಾನ್ಸ್ ನ NPA ಖಾತೆಯಲ್ಲಾಗಿರುವ ಸುಮಾರು 3688.58 ಕೋಟಿ ರೂ. ವ್ಹಚನೆಯ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಗೆ ಮಾಹಿತಿ ನೀಡಿರುವುದಾಗಿ ಹೇಳಿದೆ. DHLF ಹಲವು ಶೆಲ್ ಕಂಪನಿಗಳ ಮೂಲಕ ಪಡೆದ ಸುಮಾರು 97 ಸಾವಿರ ಕೋಟಿ ರೂ. ಬ್ಯಾಂಕ್ ಸಾಲದಲ್ಲಿ ,31 ಸಾವಿರ ಕೋಟಿ ರೂ.ಗಳ ಹೇರಾಫೇರಿ ನಡೆಸಿದೆ ಎಂಬ ವರದಿಗಳು ಹೊರಬಂದ ಹಿನ್ನೆಲೆ DHLF ಭಾರಿ ಹೆಡ್ಲೈನ್ ಸೃಷ್ಟಿಸಿತ್ತು.
ಷೇರು ಮಾರುಕಟ್ಟೆಗೂ ಸಹ ನೀಡಲಾಗಿದೆ ಮಾಹಿತಿ
PTI ಸುದ್ದಿಸಂಸ್ಥೆ ಪ್ರಕಟಗೊಳಿಸಿರುವ ಒಂದು ಮಾಹಿತಿ ಪ್ರಕಾರ, ಈ ಕುರಿತು ಷೇರು ಮಾರುಕಟ್ಟೆಗೂ ಸಹ ಮಾಹಿತಿ ನೀಡಿರುವ PNB, 'DHLF ಖಾತೆಯಲ್ಲಿ ನಡೆದಿರುವ ಸುಮಾರು 3888.58 ಕೋಟಿ.ರೂ ವಂಚನೆಯ ವರದಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗೆ ನೀಡಲಾಗಿದೆ' ಎಂದು ತಿಳಿಸಿದೆ.
ಎಚ್ಚರಿಕೆ ನೀಡಿದ ಬ್ಯಾಂಕ್
ಈ ಕುರಿತು ಮಾಹಿತಿ ನೀಡಿರುವ ಬ್ಯಾಂಕ್ , ಈ ಮೊದಲೇ ನಿರ್ಧರಿಸಲಾಗಿರುವ ಮಾನದಂಗಗಳ ಅಡಿ ಇದಕ್ಕಾಗಿ ಸುಮಾರು 1,246.58 ಕೋಟಿ ರೂಗಳ. ಪ್ರಸ್ತಾವನೆ ಪೂರ್ಣಗೊಳಿಸಿದೆ ಎಂದು ಹೇಳಿದೆ. DHLF ಮೊದಲ ಆರ್ಥಿಕ ಸೇವೆ ಒದಗಿಸುವ ಕಂಪನಿಯಾಗಿದ್ದು, ಸಾಲ ನಿವಾರಣೆಗಾಗಿ NCLT ಕದ ತಟ್ಟಿತ್ತು. ಕಳೆದ ವರ್ಷ ಕಂಪನಿಯಲ್ಲಿ ಸಾಲ ನಿಯಮಗಳ ಉಲ್ಲಂಘನೆಯ ವರದಿಗಳು ಬಹಿರಂಗಗೊಂಡ ಬಳಿಕ , SFIO ಸೇರಿದಂತೆ ವಿಭಿನ್ನ ಸಂಸ್ಥೆಗಳು ತನಿಖೆಗೆ ಆದೇಶ ನೀಡಿದ್ದವು.
ಹಲವು ಹಗರಣಗಳಲ್ಲಿ ಭಾಗಿಯಾಗಿದೆ DHLF
ಯೆಸ್ ಬ್ಯಾಂಕ್ ನಲ್ಲಿ ನಡೆದ ಹಗರಣದಲ್ಲಿಯೂ ಕೂಡ DHFL ಶಾಮೀಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಸದ್ಯ ಕಂಪನಿಯ ಪ್ರಮೋಟರ್ ಗಳಾಗಿರುವ ವಧಾವಾನ್ ಬ್ರದರ್ಸ್ ಅವರನ್ನು ಈಗಾಗಲೇ ಬಂಧಿಸಲಾಗುದ್ದು, ಗುರುವಾರ ಜಾರಿ ನಿರ್ದೇಶನಾಲಯದ ಅಧಿಕಾರುಗಳು ಇವರ ಆಸ್ತಿಯನ್ನು ಕೆದಕಿದೆ. ಯೆಸ್ ಬ್ಯಾಂಕ್ ಸಾಲ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಭಿಕಾರಿಗಳು ಬ್ಯಾಂಕ್ ನ ಮಾಜಿ ಮುಖ್ಯಸ್ಥ ರಾಣಾ ಕಪೂರ್ ಹಾಗೂ DHLF ಪ್ರಮೋಟರ್ಸ್ ಗಳಾಗಿರುವ ಕಪಿಲ್ ವಾಧ್ವಾ ಹಾಗೂ ಧೀರಜ್ ವಾಧ್ವಾ ಅವರಿಗೆ ಸೇರಿದೆ ಎನ್ನಲಾಗಿರುವ ಸುಮಾರು 24000 ಕೋರಿ ರೂ ಮೌಲ್ಯದ ಆಸ್ತಿಯನ್ನು ಲಗತ್ತಿಸಿದ್ದಾರೆ.. ಇದರಲ್ಲಿ ರಾಣಾ ಕಪೂರ್ ಅವರ 100೦ ಕೋಟಿ ರೂ. ಇದ್ದರೆ, ಸುಮಯು 1400 ಕೋಟಿ ರೂ. ಮೌಲ್ಯದ ಆಸ್ತಿ ವಾಧ್ವಾ ಬ್ರದರ್ಸ್ ಗೆ ಸೇರಿದೆ ಎನ್ನಲಾಗಿದೆ.