ಕೈಮೂರ್: ಬಿಹಾರದಲ್ಲಿ ಅಪರಾಧದ ಗ್ರಾಫ್ ನಿರಂತರವಾಗಿ ಹೆಚ್ಚುತ್ತಿದೆ. ಕೊಲೆ, ಕಳ್ಳತನ, ಲೂಟಿ ಸುದ್ದಿಗಳು ಹೆಚ್ಚುತ್ತಿವೆ. ಆದರೆ ಈ ದಿನಗಳಲ್ಲಿ ಬಿಹಾರದ ಪೊಲೀಸರು ಕೋಳಿಯನ್ನು ಕೊಂದ ರಹಸ್ಯವನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದಾರೆ. ಕೈಮೂರ್ ಜಿಲ್ಲೆಯ ದುರ್ಗಾವತಿ ಪೊಲೀಸ್ ಠಾಣೆಯ ತಿರೋಜ್ಪುರದಿಂದ ಪೊಲೀಸರಿಗೆ ಪ್ರಕರಣವೊಂದು ಬಂದಿದ್ದು, ಈ ಬಗ್ಗೆ ಅವರಿಗೆ ಆಶ್ಚರ್ಯವಾಗಿದೆಯಂತೆ. ಇದು ಕೋಳಿಯ ಸಾವಿನ ಪ್ರಕರಣವಾಗಿದೆ. ಪೊಲೀಸರು ಕೋಳಿ ಕೊಂದ ಕೊಲೆಗಾರನನ್ನು ಹುಡುಕುವಲ್ಲಿ ನಿರತರಾಗಿದ್ದಾರೆ.
ಅಸಲಿಗೆ, ದುರ್ಗಾವತಿ ಪೊಲೀಸ್ ಠಾಣೆ ಪ್ರದೇಶದ ತಿರೋಜ್ಪುರ ಗ್ರಾಮದ ನಿವಾಸಿ ಕಮಲಾ ದೇವಿ ಕೋಳಿ ಫಾರ್ಮ್ ತೆರೆದಿದ್ದಾರೆ. ಪಕ್ಕದ ಮನೆಯವರು ಕೋಳಿಯನ್ನು ಹಿಡಿದು ಕೊಂದರು ಎಂದು ಆರೋಪಿಸಲಾಗಿದೆ. ಇದರ ನಂತರ, ವಿವಾದ ಪ್ರಾರಂಭವಾದಾಗ, ಕೋಳಿ ಫಾರ್ಮ್ ನಡೆಸುತ್ತಿದ್ದ ಕಮಲಾ ದೇವಿ ಮತ್ತು ಆಕೆಯ ಮಗ ಇಂದಾಲ್ ಅವರನ್ನು ಆರೋಪಿಗಳು ಥಳಿಸಿದ್ದಾರೆ.
ಈ ಪ್ರಕರಣ ಕೇಳಿ ಆಶ್ಚರ್ಯವಾಗುತ್ತಿರಬಹುದು. ಆದರೆ ಕಮಲಾ ದೇವಿ ದುರ್ಗಾವತಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಲಿಖಿತ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣದ ಕುರಿತು ಎಫ್ಐಆರ್ ದಾಖಲಿಸಿದ್ದಾರೆ. ಇನ್ನೊಂದು ವಿಶೇಷವೆಂದರೆ ದುರ್ಗಾವತಿ ಎಂಬ ಪ್ರಾಣಿ ಆಸ್ಪತ್ರೆಗೆ ಮೃತ ಕೋಳಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ವರದಿಯ ನಂತರ, ಕೋಳಿ ಸಾವಿಗೆ ಕಾರಣ ಏನೆಂಬುದು ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋಳಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಕೋಳಿಯ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ಮರಣೋತ್ತರ ಪರೀಕ್ಷೆಯಲ್ಲಿ, ಕೋಳಿಯನ್ನು ಕುಯ್ದಿರುವುದಕ್ಕೆ ಕೋಳಿ ಕುತ್ತಿಗೆಯಲ್ಲಿ ರಕ್ತ ಹೆಪ್ಪುಗಟ್ಟಿರುವ ಪುರಾವೆಗಳಿವೆ ಎಂದು ಹೇಳಿದರು. ಇದರ ಸಂಪೂರ್ಣ ವರದಿಯನ್ನು ಪೊಲೀಸರಿಗೆ ಕಳುಹಿಸಲಾಗುವುದು ಎಂದಿದ್ದಾರೆ.
ಕೈಮೂರ್ ಎಸ್ಪಿ ದಿಲ್ನಾವಾಜ್ ಅಹ್ಮದ್ ಈ ಘಟನೆಗೆ ಸಂಬಂಧಿಸಿದ ಎಫ್ಐಆರ್ ದಾಖಲಿಸಿದ್ದು, ಪೊಲೀಸರು ಇಡೀ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.