ಶ್ರೀಲಂಕಾ ಸರಣಿ ಬಾಂಬ್ ಸ್ಫೋಟಕ್ಕೆ ಪ್ರಧಾನಿ ಮೋದಿ ಸೇರಿ ಗಣ್ಯರ ಖಂಡನೆ

 ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಸುಮಾರು 156 ಜನರು ಸಾವನ್ನಪ್ಪಿದ್ದಲ್ಲದೇ 300 ಮಂದಿ ಬಾಂಬ್ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಕೊಲಂಬೋದಲ್ಲಿ ಚರ್ಚ್ ಹಾಗೂ ಹೋಟೆಲ್ ಗಳಲ್ಲಿ ಸರಣಿ ಬಾಂಬ್ ದಾಳಿಯಿಂದಾಗಿ ಈಗ ಶ್ರೀಲಂಕಾದ್ಯಂತ ಈಗ ಭದ್ರತೆಯನ್ನು ಬೀಗಿ ಪಡಿಸಲಾಗಿದೆ.  

Last Updated : Apr 21, 2019, 05:17 PM IST
ಶ್ರೀಲಂಕಾ ಸರಣಿ ಬಾಂಬ್ ಸ್ಫೋಟಕ್ಕೆ ಪ್ರಧಾನಿ ಮೋದಿ ಸೇರಿ ಗಣ್ಯರ ಖಂಡನೆ   title=

ನವದೆಹಲಿ:  ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಸುಮಾರು 156 ಜನರು ಸಾವನ್ನಪ್ಪಿದ್ದಲ್ಲದೇ 300 ಮಂದಿ ಬಾಂಬ್ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಕೊಲಂಬೋದಲ್ಲಿ ಚರ್ಚ್ ಹಾಗೂ ಹೋಟೆಲ್ ಗಳಲ್ಲಿ ಸರಣಿ ಬಾಂಬ್ ದಾಳಿಯಿಂದಾಗಿ ಈಗ ಶ್ರೀಲಂಕಾದ್ಯಂತ ಈಗ ಭದ್ರತೆಯನ್ನು ಬಿಗಿ ಪಡಿಸಲಾಗಿದೆ.  

ಈಗ ದಾಳಿಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಖಂಡಿಸಿ "ಇಂತಹ ದುಷ್ಕೃತ್ಯಕ್ಕೆ ಈ ಪ್ರದೇಶದಲ್ಲಿ ಅವಕಾಶವಿಲ್ಲ" ಎಂದು ಹೇಳಿದ್ದಾರೆ.ಶ್ರೀಲಂಕಾದಲ್ಲಿ ನಡೆದ ಭೀಕರ ಸ್ಫೋಟವನ್ನು ನಾವು ಖಂಡಿಸುತ್ತೇವೆ.ನಮ್ಮ ಪ್ರದೇಶದಲ್ಲಿ ಇಂತಹ ದುಷ್ಕೃತ್ಯಕ್ಕೆ ಯಾವುದೇ ಅವಕಾಶವಿಲ್ಲ, ಭಾರತ ದೇಶವು ಇಂತಹ ಸಮಯದಲ್ಲಿ ಶ್ರೀಲಂಕಾ ಜನರೊಂದಿಗೆ ಬೆಂಬಲವಾಗಿ ನಿಲ್ಲಲಿದೆ. ದಾಳಿಯಲ್ಲಿ ಮೃತಪಟ್ಟವರಿಗೆ ಮತ್ತು ಗಾಯಗೊಂಡಿರುವವರೆಗೆ ನನ್ನ ಸಂತಾಪ ಮತ್ತು ಪ್ರಾರ್ಥನೆಗಳು ಇರಲಿವೆ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ. 

ಇನ್ನೊಂದೆಡೆಗೆ ದಾಳಿಯನ್ನು ಖಂಡಿಸಿ ಅಧ್ಯಕ್ಷ ರಾಮ್ ನಾಥ್ ಕೋವಿಂದ್  "ನಾವು ಈ ಸನ್ನಿವೇಶದಲ್ಲಿ ಶ್ರೀಲಂಕಾಗೆ  ಸಂಪೂರ್ಣ ಬೆಂಬಲ ನೀಡುತ್ತೇವೆ " ಎಂದು ಟ್ವೀಟ್ ಮಾಡಿದ್ದಾರೆ.  ಭಾರತದ ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿ ಭಾರತವು ಸೂಕ್ಷ್ಮವಾಗಿ ಪರಿಸ್ಥಿತಿಯನ್ನು ಗಮನಿಸುತ್ತಿದೆ ಎಂದು ಹೇಳಿದ್ದಾರೆ. ಈಗಾಗಲೇ ಕೊಲೊಂಬೋದಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿ ಅಲ್ಲಿನ ಭಾರತೀಯ ನಾಗರಿಕರಿಗಾಗಿ ಸಹಾಯವಾಣಿ ನಂಬರ್ ಗಳನ್ನು ಘೋಷಿಸಿದೆ.

ಈ ಸಂಖ್ಯೆಗಳು: +94777903082, +94112422788, +94112422789, +94777902082 ಮತ್ತು +94772234176.

Trending News