ನನ್ನ ಪತ್ನಿ ಪ್ರಧಾನಿ ಮೋದಿ ಅವರ ಹಾದಿಯಲ್ಲಿ ಸಾಗುತ್ತಾಳೆ-ರವೀಂದ್ರ ಜಡೇಜಾ

ಕ್ರಿಕೆಟಿಗ ರವೀಂದ್ರ ಜಡೇಜಾ ತಮ್ಮ ಪತ್ನಿ ರಿವಾಬಾ ಜಡೇಜಾ ಅವರು ಗುಜರಾತ್‌ನ ಜಾಮ್‌ನಗರದಲ್ಲಿ ಸೋಮವಾರ ನಡೆದ ಬಿಜೆಪಿ ಕಾರ್ಯಕ್ರಮಕ್ಕೆ ಮುಂದಿನ ತಿಂಗಳ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೊದಲು ಸಾಥ್ ನೀಡಿದರು.

Written by - Zee Kannada News Desk | Last Updated : Nov 14, 2022, 04:45 PM IST
  • ಕಳೆದ ವಾರ ಬಿಜೆಪಿ ಬಿಡುಗಡೆ ಮಾಡಿದ 160 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲ ರಿವಾಬಾ ಜಡೇಜಾ ಮತ್ತು ಮಾಜಿ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಸ್ಥಾನ ಪಡೆದಿದ್ದಾರೆ.
  • ರಿವಾಬಾ ಜಡೇಜಾ 2019 ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು ಮತ್ತು ಲೋಕಸಭೆ ಚುನಾವಣೆಗೆ ಮುನ್ನ ಜಾಮ್‌ನಗರ ಕ್ಷೇತ್ರದಿಂದ ಪಕ್ಷದ ಟಿಕೆಟ್ ಕೇಳಿದ್ದರು.
  • ಭಾನುವಾರ, ಜಡೇಜಾ ಟ್ವಿಟರ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿ ತಮ್ಮ ಪತ್ನಿಗೆ ಬೆಂಬಲ ನೀಡುವಂತೆ ಕರೆ ನೀಡಿದರು.
ನನ್ನ ಪತ್ನಿ ಪ್ರಧಾನಿ ಮೋದಿ ಅವರ ಹಾದಿಯಲ್ಲಿ ಸಾಗುತ್ತಾಳೆ-ರವೀಂದ್ರ ಜಡೇಜಾ title=

ನವದೆಹಲಿ: ಕ್ರಿಕೆಟಿಗ ರವೀಂದ್ರ ಜಡೇಜಾ ತಮ್ಮ ಪತ್ನಿ ರಿವಾಬಾ ಜಡೇಜಾ ಅವರು ಗುಜರಾತ್‌ನ ಜಾಮ್‌ನಗರದಲ್ಲಿ ಸೋಮವಾರ ನಡೆದ ಬಿಜೆಪಿ ಕಾರ್ಯಕ್ರಮಕ್ಕೆ ಮುಂದಿನ ತಿಂಗಳ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೊದಲು ಸಾಥ್ ನೀಡಿದರು.

"ಕ್ರಿಕೆಟಿಗ ರವೀಂದ್ರ ಜಡೇಜಾ ಮತ್ತು ಅವರ ಪತ್ನಿ ಮತ್ತು ಬಿಜೆಪಿ ನಾಯಕಿ ರಿವಾಬಾ ಜಡೇಜಾ ಮುಂಬರುವ ಗುಜರಾತ್ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೊದಲು ಜಾಮ್‌ನಗರದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಿವಾಬಾ ಜಡೇಜಾ ಜಾಮ್‌ನಗರ ಉತ್ತರದಿಂದ ಸ್ಪರ್ಧಿಸಿ ಇಂದು ನಾಮಪತ್ರ ಸಲ್ಲಿಸಲಿದ್ದಾರೆ" ಎಂದು ಸುದ್ದಿ ಸಂಸ್ಥೆಎಎನ್ಐ ಹೇಳಿದೆ.

ಇದನ್ನೂ ಓದಿ : ಸರ್ಕಾರಿ ಶಾಲೆ ಏಕಲವ್ಯರು... ಹಿರಿಯರನ್ನು ನೋಡಿ ದೊಣ್ಣೆವರಸೆ ಕಲಿತ ವಿದ್ಯಾರ್ಥಿಗಳು..!

ಶಾಸಕರಾಗಿ ಮತ್ತು ಅವರು ಬಹಳಷ್ಟು ಕಲಿಯುತ್ತಾರೆ.ಮತ್ತು ಆ ನಿಟ್ಟಿನಲ್ಲಿ ಅವರು ಪ್ರಗತಿ ಹೊಂದುತ್ತಾರೆ ಎಂದು ನಾನು ಭಾವಿಸುತ್ತೇನೆ.ಅವರು ಸಹಾಯ ಮಾಡುವ ಸ್ವಭಾವದವರಾಗಿದ್ದಾರೆ ಮತ್ತು ಯಾವಾಗಲೂ ಜನರಿಗೆ ಸಹಾಯ ಮಾಡಲು ಬಯಸುತ್ತಾರೆ ಮತ್ತು ಆದ್ದರಿಂದಾಗಿ ಅವರು ರಾಜಕೀಯಕ್ಕೆ ಸೇರಿದ್ದಾರೆ. ಅವರು ಜನರ ಪರವಾಗಿ ಕೆಲಸ ಮಾಡುವ ಪ್ರಧಾನಿ ಮೋದಿಯವರ ಹಾದಿಯನ್ನು ಅನುಸರಿಸುತ್ತಾರೆ ಎಂದು ಜಡೇಜಾ ಸಮಾರಂಭದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ : ವಿಧಾನಸಭೆ ಚುನಾವಣೆ 2023: ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಕೊರತೆ!; ಕೈ ಪಾಲಯದ ತಂತ್ರ ಏನು?

ಕಳೆದ ವಾರ ಬಿಜೆಪಿ ಬಿಡುಗಡೆ ಮಾಡಿದ 160 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲ ರಿವಾಬಾ ಜಡೇಜಾ ಮತ್ತು ಮಾಜಿ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಸ್ಥಾನ ಪಡೆದಿದ್ದಾರೆ. ರಿವಾಬಾ ಜಡೇಜಾ 2019 ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು ಮತ್ತು ಲೋಕಸಭೆ ಚುನಾವಣೆಗೆ ಮುನ್ನ ಜಾಮ್‌ನಗರ ಕ್ಷೇತ್ರದಿಂದ ಪಕ್ಷದ ಟಿಕೆಟ್ ಕೇಳಿದ್ದರು.

ಭಾನುವಾರದಂದು ಜಡೇಜಾ ಟ್ವಿಟರ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿ ತಮ್ಮ ಪತ್ನಿಗೆ ಬೆಂಬಲ ನೀಡುವಂತೆ ಕರೆ ನೀಡಿದರು.ಗುಜರಾತಿ ಭಾಷೆಯಲ್ಲಿ ಮಾತನಾಡಿದ ಅವರು, "ನನ್ನ ಪ್ರೀತಿಯ ಜಾಮ್‌ನಗರ ನಿವಾಸಿಗಳು ಮತ್ತು ಎಲ್ಲಾ ಕ್ರಿಕೆಟ್ ಅಭಿಮಾನಿಗಳು. ನಿಮಗೆಲ್ಲರಿಗೂ ತಿಳಿದಿರುವಂತೆ ಇಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಯು ಟಿ20 ಕ್ರಿಕೆಟ್‌ನಂತೆ ವೇಗವಾಗಿ ನಡೆಯುತ್ತಿದೆ. ಬಿಜೆಪಿ ನನ್ನ ಪತ್ನಿ ರಿವಾಬಾ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.ಅವರು ನವೆಂಬರ್ 14 ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಗೆಲುವಿನ ವಾತಾವರಣ ನಿರ್ಮಿಸುವುದು ನಿಮ್ಮ ಜವಾಬ್ದಾರಿ. ಹಾಗಾಗಿ ನಾಳೆ ಬೆಳಿಗ್ಗೆ ಭೇಟಿಯಾಗೋಣ” ಎಂದು ಹೇಳಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

 

 

Trending News