ನವದೆಹಲಿ: ಕರೋನವೈರಸ್ ಸಾಂಕ್ರಾಮಿಕ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಆರಂಭಿಸಿದೆ. ಪ್ರಧಾನಿ ಮೋದಿ ಘೋಷಿಸಿರುವ ಈ ಪರಿಹಾರದ ಪ್ಯಾಕೇಜ್ ಭರವಷೆಯ ಮೇಲೆ ಇಂದು ಷೇರು ಮಾರುಕಟ್ಟೆ ಆರಂಭಬೊಂಡಿದೆ. ಬೆಳಿಗ್ಗೆ ಮಾರುಕಟ್ಟೆ ತೆರೆದ ತಕ್ಷಣ, ವ್ಯವಹಾರದಲ್ಲಿ ಭರಾಟೆ ಕಂಡುಬರುತ್ತದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್, ಅಂದರೆ, 30-ಷೇರುಗಳ ಬಿಎಸ್ಇ ಸೆನ್ಸಿಟಿವ್ ಇಂಡೆಕ್ಸ್ ಸೆನ್ಸೆಕ್ಸ್ 877 ಪಾಯಿಂಟ್ ಗಳಿಸಿ 32,248 ತೆರೆದುಕೊಂಡಿದೆ. ಇದೆ ರೀತಿಯ ವಾತಾವರಣ ಇತರ ಮಾರುಕಟ್ಟೆಗಳಲ್ಲಿಯೂ ಕಂಡು ಬಂದಿದ್ದು, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ 50-ಷೇರು ಸೂಕ್ಷ್ಮ ಸೂಚ್ಯಂಕ ನಿಫ್ಟಿ ಸಹ 257 ಪಾಯಿಂಟ್ ಗಳಿಸಿ 9,878 ಕ್ಕೆ ತನ್ನ ವಹಿವಾಟು ಆರಂಭಿಸಿದೆ.
ಕಳೆದ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಹೆಸರಿನಲ್ಲಿ ದೊಡ್ಡ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ಪ್ರಧಾನಿ ಘೋಷಿಸಿರುವ ಈ ಆರ್ಥಿಕ ಪ್ಯಾಕೇಜ್ ಭಾರತವನ್ನು 'ಸ್ವಾವಲಂಬಿಯನ್ನಾಗಿ' ಮಾಡುವ ಪ್ರಮುಖ ಹೆಜ್ಜೆಯಾಗಿದೆ. ಈ ಪ್ಯಾಕೇಜ್ ಸುಮಾರು 20 ಲಕ್ಷ ಕೋಟಿಗಳಾಗಿದ್ದು, ಇದು ಆರ್ಬಿಐ ನಿರ್ಧಾರ ಸೇರಿದಂತೆ ಜಿಡಿಪಿಯ ಶೇ.10 ಆಗಿದೆ ಎಂದು ಪ್ರಧಾನಿ ಹೇಳಿದ್ದಾರೆ, ಈ ಆರ್ಥಿಕ ಪ್ಯಾಕೇಜ್ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದಿನಿಂದ ವಿಸ್ತೃತ ಮಾಹಿತಿಯನ್ನು ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಈ ಎಲ್ಲದರ ಮೂಲಕ ದೇಶದ ವಿವಿಧ ವಿಭಾಗಗಳು ಹಾಗೂ ಆರ್ಥಿಕ ಕೊಂಡಿಗಳಿಗೆ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಬೆಂಬಲ ಸಿಗಲಿದೆ ಎಂದಿದ್ದಾರೆ. 20 ಲಕ್ಷ ಕೋಟಿ ರೂ.ಗಳ ಈ ಆರ್ಥಿಕ ಪ್ಯಾಕೇಜ್, 2020ರಲ್ಲಿ ದೇಶದ ವಿಕಾಸ ಯಾತ್ರೆ ಮತ್ತು ಸ್ವಾವಲಂಭಿ ಭಾರತ ಅಭಿಯಾನಕ್ಕೆ ಹೊಸ ಪ್ರಚೋದನೆ ನೀಡಲಿದೆ ಎಂದು ಪ್ರಧಾನಿ ಹೇಳಿದ್ದಾರೆ. 'ಸ್ವಾವಲಂಭಿ ಭಾರತ' ಅಭಿಯಾನದ ಸಂಕಲ್ಪವನ್ನು ಒತ್ತು ನೀಡುವ ಉದ್ದೆಶಧಿಂದ ಈ ಪ್ಯಾಕೇಜ್ ನಲ್ಲಿ ಭೂಮಿ, ಕಾರ್ಮಿಕರು ಇತ್ಯಾದಿ ವರ್ಗಗಳನ್ನು ಪರಿಗಣಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.