ನವದೆಹಲಿ: ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ಅತ್ಯಂತ ಸುಂದರವಾದ ಕಟ್ಟಡದಲ್ಲಿ ತಾಜ್ ಮಹಲ್ ಅನ್ನು ನೋಡುವುದ ಇನ್ನುಮುಂದೆ ದುಬಾರಿಯಾಗಲಿದೆ. ಸೋಮವಾರ (ಡಿಸೆಂಬರ್ 10, 2018)ದಿಂದ ತಾಜ್ ಮಹಲ್ ಟಿಕೆಟ್ ದರ ಏರಿಕೆಯಾಗಲಿದ್ದು, 200 ರೂ. ಅಧಿಕವಾಗಲಿದೆ. ಹೌದು, ಇಂದಿನಿಂದ ತಾಜ್ ಮಹಲ್ ಎಂಟ್ರಿ ಟಿಕೆಟ್ 250 ರೂ. ಆಗಲಿದೆ.
ಇದೇ ವೇಳೆ ವಿದೇಶಿ ಪ್ರವಾಸಿಗರಿಗೆ ಎಂಟ್ರಿ ಟಿಕೆಟ್ ದರ 1,300 ರೂ. ಆಗಿದೆ. ಭಾರತದ ಪುರಾತತ್ತ್ವಶಾಸ್ತ್ರದ ಸಮೀಕ್ಷೆಯಿಂದ ತಾಜ್ ಮಹಲ್ನ ಕ್ರೌಡ್ ನಿರ್ವಹಣೆಗಾಗಿ ಈ ಹೊಸ ಟಿಕೆಟ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಇಲ್ಲಿಯವರೆಗೆ, ಸ್ಥಳೀಯ ಪ್ರವಾಸಿಗರು 50 ರೂಪಾಯಿ ಮತ್ತು ವಿದೇಶಿ ಪ್ರವಾಸಿಗರು ತಾಜ್ ಮಹಲ್ ವೀಕ್ಷಣೆಗಾಗಿ 1100 ರೂ. ಪಾವತಿಸುತ್ತಿದ್ದರು. ಆದರೆ ಈಗ ದೇಶೀಯ ಪ್ರವಾಸಿಗರು 250 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ ಮತ್ತು ವಿದೇಶಿ ಪ್ರವಾಸಿಗರು ಟಿಕೆಟ್ಗೆ 1300 ರೂ. ಪಾವತಿಸಬೇಕಾಗುತ್ತದೆ. ಷಹ ಜಹಾನ್ ಮತ್ತು ಮುಮ್ತಾಜ್ ಸಮಾಧಿಗಳ ಮುಖ್ಯ ಗುಮ್ಮಟಕ್ಕೆ ಹೋಗುವುದಕ್ಕೆ 200 ರೂಪಾಯಿಗಳ ಈ ಶುಲ್ಕವನ್ನು ವಿಧಿಸಲಾಗಿದೆ.
35 ರಿಂದ 40 ಸಾವಿರ ಪ್ರವಾಸಿಗರ ಭೇಟಿ...
ಸುಮಾರು 35,000 ರಿಂದ 40,000 ಪ್ರವಾಸಿಗರು ಪ್ರತಿ ದಿನ ತಾಜ್ ಮಹಲ್ಗೆ ಭೇಟಿ ನೀಡುತ್ತಾರೆ. ಆದರೆ ವಾರಾಂತ್ಯದಲ್ಲಿ ಈ ಸಂಖ್ಯೆ 60,000 ರಿಂದ 70,000 ಕ್ಕೆ ಏರುತ್ತದೆ. ಇಂದಿನಿಂದ ಟಿಕೆಟ್ ದರ ಏರಿಕೆಯಾಗಲಿರುವ ಕಾರಣ ಇದು ಪ್ರವಾಸಿಗರ ಮೇಲೆ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ.
ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ, ತಾಜ್ ಮಹಲ್ ನೋಡಲು ಪ್ರವಾಸಿಗರ ಸಂಖ್ಯೆ ಇನ್ನೂ ನಿಗದಿಯಾಗಿಲ್ಲ. ಅದೇ ಸಮಯದಲ್ಲಿ, ಪ್ರವಾಸಿಗರು ಬಹಳ ಕಾಲ ಅಲ್ಲಿಯೇ ಉಳಿಯಬಹುದು. ಆದರೆ ಹೊಸ ನಿಯಮ ಜಾರಿಗೊಳಿಸುವ ಮೂಲಕ ಪ್ರವಾಸಿಗರಿಗೆ ತಾಜ್ ಮಹಲ್ ನಲ್ಲಿ 3 ಗಂಟೆ ಮಾತ್ರ ಕಾಲ ಕಳೆಯಬೇಕು ಎಂಬ ನಿಯಮ ಮಾಡಬೇಕೆಂಬ ಯೋಜನೆಗಳಿವೆ.
ತಾಜ್ ಮಹಲ್ ಸ್ಥಿತಿ-ಗತಿ ಕುರಿತು ಕೇಂದ್ರ ಮತ್ತು ಯುಪಿ ಸರ್ಕಾರಕ್ಕೆ ಚಾಟಿ ಬೀಸಿದ ಸುಪ್ರೀಂಕೋರ್ಟ್:
ತಾಜ್ ಮಹಲ್ ಸ್ಥಿತಿ-ಗತಿ ಕುರಿತಂಟೆ ಕೇಂದ್ರ ಮತ್ತು ಯುಪಿ ಸರಕಾರದ ನಿರ್ಲಕ್ಷವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿಡಿದೆ. UNESCO ತನ್ನ 17 ನೇ ಶತಮಾನದ ಮುಘಲ್ ಸ್ಮಾರಕವನ್ನು ತನ್ನ 'ವರ್ಲ್ಡ್ ಹೆರಿಟೇಜ್ ಲಿಸ್ಟ್' ಯಿಂದ ತೆಗೆದುಹಾಕಿದರೆ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದೆ. ಜಸ್ಟೀಸ್ ಮದನ್ ಬಿ. ಲೋಕೂರ್ ಮತ್ತು ಜಸ್ಟಿಸ್ ದೀಪಕ್ ಗುಪ್ತಾ ಅವರ ಪೀಠವು, "ಇದು ವಿಶ್ವ ಪರಂಪರೆಯಾಗಿದೆ, ಯುನೆಸ್ಕೋ ತಾಜ್ ಮಹಲ್ನಿಂದ ವಿಶ್ವ ಪರಂಪರೆಯ ಸ್ಥಾನಮಾನವನ್ನು ಹಿಂತೆಗೆದುಕೊಂಡಿದೆ ಎಂದು ಹೇಳಿದರೆ ಏನಾಗುತ್ತದೆ" ಎಂದು ಪ್ರಶ್ನಿಸಿದ್ದರು.