ನವದೆಹಲಿ : Frog Dog Fight Video: ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳ ಕಾದಾಟದ ಹಲವು ವಿಡಿಯೋಗಳನ್ನು (Viral Video) ನೀವು ನೋಡಿರಬಹುದು. ಇವುಗಳಲ್ಲಿ ಕೆಲವು ವೀಡಿಯೊಗಳು ಬಹಳ ಅದ್ಭುತವಾಗಿರುತ್ತವೆ. ಕೆಲವು ವೀಡಿಯೊಗಳನ್ನು ವೀಕ್ಷಿಸಲು ತುಂಬಾ ಆಸಕ್ತಿದಾಯಕವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ (Social Media) ನಾಯಿ ಮತ್ತು ಕಪ್ಪೆಯ ಕಾದಾಟದ ವೀಡಿಯೋ ಭಾರೀ ವೈರಲ್ (Viral Video) ಆಗುತ್ತಿದೆ. ಚಿಕ್ಕ ಕಪ್ಪೆ ಕಾಲು ಕೆರೆದು ನಾಯಿ ಮುಂದೆ ಜಗಳಕ್ಕೆ ನಿಲ್ಲುವುದನ್ನು ಇಲ್ಲಿ ಕಾಣಬಹುದು.
ನಾಯಿ ಜೊತೆ ಗುದ್ದಾಟಕ್ಕೆ ನಿಂತ ಕಪ್ಪೆ :
ಕಪ್ಪೆ ನಾಯಿಯೊಂದಿಗೆ ಜಗಳವಾಡುತ್ತಿರುವುದನ್ನು ಈ ವೀಡಿಯೊದಲ್ಲಿ (Dog Frog video) ಕಾಣಬಹುದು. ಸಣ್ಣ ಕಪ್ಪೆಯೊಂದು ನಾಯಿಯನ್ನು ನಿಂತಲ್ಲಿ ನಿಲ್ಲಲ್ಲು ಬಿಡುತ್ತಿಲ್ಲ, ಕೂತಲ್ಲಿ ಕೂರಲು ಬಿಡುತ್ತಿಲ್ಲ. ಕಾಲು ಕೆರೆದು ಜಗಳಕ್ಕೆ ಬರುತ್ತಿದೆ. ಇಲ್ಲಿ ನಾಯಿ ಪಾಡು ನೋಡಿ ನಗು ಬರುತ್ತದೆ. ಮೊದಲು ನಾಯಿ ಕೂಡಾ ಕಪ್ಪೆಯ ಮೇಲೆ ಎರಗಲು ಬರುತ್ತದೆ (Animal Viral Video). ಆದರೆ ಕಪ್ಪೆ ಸ್ವಲ್ಪವೂ ಹೆದರದೆ ಮತ್ತೆ ಮತ್ತೆ ನಾಯಿಯ ಮುಖದ ಮೇಲೆ ಹಾರಲು ಶುರು ಮಾಡುತ್ತದೆ.
ಇದನ್ನೂ ಓದಿ : ಇಲ್ನೋಡಿ.. ಆನೆಗೇ ಠಕ್ಕರ್ ಕೊಟ್ಟ ಭೂಪ, ಕಾಲಿಗೆ ಬೀಳುತ್ತಿದ್ದಂತೆ ಕಾಲ್ಕಿತ್ತ ಕಾಡಾನೆ!
IFS ಅಧಿಕಾರಿ ಹಂಚಿಕೊಂಡಿರುವ ವಿಡಿಯೋ :
14 ಸೆಕೆಂಡುಗಳ ಈ ವೀಡಿಯೊವನ್ನು ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊವನ್ನು ಹಂಚಿಕೊಳ್ಳುವುದರ ಜೊತೆಗೆ ನಾಯಿಗೆ ಕಾಟ ಕೊಡುತ್ತಿರುವ ಕಪ್ಪೆ ಎಂದು ಬರೆದಿದ್ದಾರೆ.
Frog harassing a dog pic.twitter.com/oJbhAMErDX
— Susanta Nanda IFS (@susantananda3) February 22, 2022
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social media) ಹರಿದಾಡುತ್ತಿರುವ ಬೆನ್ನಲ್ಲೇ ಇದೀಗ ಭಾರೀ ವೇಗದಲ್ಲಿ ಜನಮನ ಸೆಳೆಯುತ್ತಿದೆ. ಇಲ್ಲಿಯವರೆಗೆ ವೀಡಿಯೋ 50 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ವೀಡಿಯೊ ಕುರಿತು ಪ್ರತಿಕ್ರಿಯಿಸಿದ ಬಳಕೆದಾರರು, ಆತ್ಮವಿಶ್ವಾಸವಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದು ಬರೆದಿದ್ದಾರೆ. ಕಪ್ಪೆಯ ಧೈರ್ಯವನ್ನು ಮೆಚ್ಚಿ ಕೂಡಾ ಅನೇಕರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : ಕಣ್ಮುಂದೆ ಮಾಯವಾದ ಮುಚ್ಚಳ! 9 ರಲ್ಲಿ 1 ಹೇಗೆ ಕಣ್ಮರೆಯಾಯಿತು? ಇಲ್ಲಿದೆ ಉತ್ತರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.