ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಇಂದು ನಡೆಯುತ್ತಿರುವ ಎನ್‌ಕೌಂಟರ್‌ನಲ್ಲಿ ಮೂವರು ಭಯೋತ್ಪಾದಕರು ಹತರಾಗಿದ್ದಾರೆ, ಕಳೆದ ನಾಲ್ಕು ದಿನಗಳಲ್ಲಿ ಹತರಾದ ಒಟ್ಟು ಭಯೋತ್ಪಾದಕರ ಸಂಖ್ಯೆ 8 ಕ್ಕೆ ತಲುಪಿದೆ.ಇತ್ತೀಚಿನ ಎನ್‌ಕೌಂಟರ್ ಪುಲ್ವಾಮಾ ಜಿಲ್ಲೆಯ ಪಹೂ ಗ್ರಾಮದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಈ ವಿಚಾರವಾಗಿ ಜೀ ನ್ಯೂಸ್ ಗೆ ಪ್ರತಿಕ್ರಿಯಿಸಿರುವ ಐಜಿಪಿ ಕಾಶ್ಮೀರ ವಿಜಯ್ ಕುಮಾರ್ "ಪುಲ್ವಾಮಾದ ಪಹೂ ಗ್ರಾಮದಲ್ಲಿ ಮೂವರು ಭಯೋತ್ಪಾದಕರು ಹತರಾಗಿದ್ದಾರೆ, ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿರುವಾಗ ಅವರ ಗುರುತನ್ನು ಕಂಡುಹಿಡಿಯಲಾಗುತ್ತಿದೆ."ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ ಗಲಭೆಗೆ ಬಿಜೆಪಿ ಕುಮ್ಮಕ್ಕು ಕಾರಣ ಹೊರತು ಕಾಂಗ್ರೆಸ್ ಅಲ್ಲ: ಡಿ.ಕೆ. ಶಿವಕುಮಾರ್
ಈ ಪ್ರದೇಶದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಮಾಹಿತಿಯ ಮೇರೆಗೆ ಪಾಹೂ ಗ್ರಾಮದಲ್ಲಿ ಜಂಟಿ ಶೋಧ ತಂಡವು ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಶೋಧಕ ಪಕ್ಷವು ಶಂಕಿತ ಸ್ಥಳವನ್ನು ಸುತ್ತುವರೆದಿರುವಂತೆ ಅಡಗಿಕೊಂಡ ಭಯೋತ್ಪಾದಕರು ಪ್ರತೀಕಾರ ತೀರಿಸಿಕೊಂಡ ಶೋಧಕ ಪಕ್ಷದ ಮೇಲೆ ಗುಂಡು ಹಾರಿಸಿದರು ಆಗ ಎನ್‌ಕೌಂಟರ್ ಪ್ರಾರಂಭವಾಯಿತು ಎಂದು ಹೇಳಿದರು.
ಕಳೆದ 4 ದಿನಗಳಲ್ಲಿ ಇದು 3 ನೇ ಎನ್‌ಕೌಂಟರ್ ಆಗಿದೆ.ಭದ್ರತಾ ಪಡೆಗಳು ಆ ಕಾರ್ಯಾಚರಣೆಗಳಲ್ಲಿ 2 ಪಾಕಿಸ್ತಾನಿ ಭಯೋತ್ಪಾದಕರು ಮತ್ತು ಒಬ್ಬ ಲಷ್ಕರ್ ಕಮಾಂಡರ್ ಸೇರಿದಂತೆ 8 ಭಯೋತ್ಪಾದಕರನ್ನು ಕೊಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: "ಪಿಯು ಪರೀಕ್ಷಾ ವಿದ್ಯಾರ್ಥಿಗಳಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ"
ಈ ವರ್ಷದ ಜನವರಿಯಿಂದ ಇದು 40 ನೇ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಾಗಿದೆ ಮತ್ತು ಕಾಶ್ಮೀರ ಕಣಿವೆಯಲ್ಲಿ ಈ ವರ್ಷ 59 ಭಯೋತ್ಪಾದಕರನ್ನು ಕೊಲ್ಲುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿದ್ದು, ಇದುವರೆಗೆ 28 ಸಕ್ರಿಯ ಭಯೋತ್ಪಾದಕರು ಮತ್ತು 169 ಭಯೋತ್ಪಾದಕರ ಸಹಚರರನ್ನು ಬಂಧಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.