ನವದೆಹಲಿ: ಭಾರತದ ಮೊದಲ ಏರ್ ಟ್ಯಾಕ್ಸಿ ಸೇವೆಯನ್ನು ಚಂಡೀಗಡಲ್ಲಿ ಪ್ರಾರಂಭಿಸಲಾಗಿದ್ದು, ಇದನ್ನು ಸರ್ಕಾರದ ಉಡಾನ್ ಯೋಜನೆಯಡಿ ಪ್ರಾರಂಭಿಸಲಾದ ಚಂಡೀಗಡ ವಿಮಾನ ನಿಲ್ದಾಣದಲ್ಲಿ ಮನೋಹರ್ ಲಾಲ್ ಖಟ್ಟರ್ ಉದ್ಘಾಟಿಸಿದರು.
ವಿಮಾನವು ಸೇವೆಯು ಚಂಡೀಗಢ ದಿಂದ ಹಿಸಾರ್‌ಗೆ ಇತ್ತು, ದೇಶದಲ್ಲಿ ಮೊದಲ ಬಾರಿಗೆ ಏರ್ ಟ್ಯಾಕ್ಸಿ ರೂಪದಲ್ಲಿ ಸಣ್ಣ ವಿಮಾನವನ್ನು ಸೇವೆಗಳಿಗೆ ಬಳಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ (Manohar Lal Khattar) ಈ ಸಂದರ್ಭದಲ್ಲಿ ಹೇಳಿದರು.
ಇದನ್ನೂ ಓದಿ: ಈ ರಾಜ್ಯದಲ್ಲಿ ಹೆಲಿಕಾಪ್ಟರ್ ಸೇವೆ ಮತ್ತೆ ಪ್ರಾರಂಭ, ಬುಕಿಂಗ್ ಮತ್ತು ಶುಲ್ಕದ ಬಗ್ಗೆ ಇಲ್ಲಿ ಪರಿಶೀಲಿಸಿ
'ಯೋಜನೆಯ ಎರಡನೇ ಹಂತದಲ್ಲಿ, ಮುಂದಿನ ವಾರ ಜನವರಿ 18 ರಂದು ಹಿಸಾರ್‌ನಿಂದ ಡೆಹ್ರಾಡೂನ್‌ಗೆ ವಿಮಾನ ಹಾರಾಟವನ್ನು ಪ್ರಾರಂಭಿಸಲಾಗುವುದು. ಮೂರನೇ ಹಂತದಲ್ಲಿ ಚಂಡೀಗಢ (Chandigarh) ದಿಂದ ಡೆಹ್ರಾಡೂನ್‌ಗೆ ಮತ್ತು ಹಿಸಾರ್‌ನಿಂದ ಧರ್ಮಶಾಲಾಕ್ಕೆ ಜನವರಿ 23 ರಂದು ಪ್ರಾರಂಭವಾಗಲಿದೆ.ನಂತರ, ಶಿಮ್ಲಾ, ಕುಲ್ಲು ಮತ್ತು ಹರಿಯಾಣದ ಹೆಚ್ಚಿನ ಸ್ಥಳಗಳಿಗೆ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿಯನ್ನು ಬಹಿರಂಗಪಡಿಸಿದರು.
ಇದನ್ನೂ ಓದಿ: ಅಂತರಾಷ್ಟ್ರೀಯ ಮಾರ್ಗಕ್ಕೂ 'ಉಡಾನ್' ಲಗ್ಗೆ !
'ನಾಲ್ಕು ಆಸನಗಳ ವಿಮಾನವು 2 ಟೈರ್ ಮತ್ತು 3 ಟೈರ್ ಪಟ್ಟಣಗಳನ್ನು ಮಹಾನಗರಗಳೊಂದಿಗೆ ಸಂಪರ್ಕಿಸುವ ಸೇವೆಗೆ ಶಕ್ತಿ ನೀಡುತ್ತದೆ.ಏರ್‌ಟಾಕ್ಸಿ ಇಂಡಿಯಾ ನಡೆಸುತ್ತಿರುವ ಈ ಸೇವೆಯು ಡಿಸೆಂಬರ್‌ನಲ್ಲಿ ಡಿಜಿಸಿಎಯಿಂದ ನಿಗದಿತ ಪ್ರಯಾಣಿಕರ ವಿಮಾನಯಾನ ಪರವಾನಗಿಯನ್ನು ಪಡೆದುಕೊಂಡಿದೆ ಎಂದು ಏರ್‌ಟಾಕ್ಸಿ ಇಂಡಿಯಾದ ಸಹ ಸಂಸ್ಥಾಪಕ ವರುಣ್ ಸುಹಾಗ್ ಅವರು ಡಿಸೆಂಬರ್‌ನಲ್ಲಿ ತಿಳಿಸಿದ್ದರು.
ಉಡಾನ್ ( UDAN ) ಆರ್ಸಿಎಸ್ ಅಡಿಯಲ್ಲಿ ಸೇವೆಯನ್ನು ಪ್ರಾರಂಭಿಸುವುದು 2 ಟೈರ್ ಮತ್ತು 3 ಟೈರ್ ನಗರಗಳಿಗೆ ವಾಯು ಸಂಪರ್ಕವನ್ನು ಒದಗಿಸುವ ನಿರ್ಧಾರಕ್ಕೆ ಸರ್ಕಾರ ಬಂದಿದೆ.ಸಣ್ಣ ಪಟ್ಟಣಗಳು ಮತ್ತು ನಗರಗಳನ್ನು ಸಂಪರ್ಕಿಸಲು ಸರ್ಕಾರವು ವಾಯುವಾಹಕಗಳಿಗೆ ಪ್ರತಿ ಸೀಟಿಗೆ ಸಬ್ಸಿಡಿ ನೀಡುತ್ತದೆ ಎನ್ನಲಾಗಿದೆ.
ಏರ್‌ಟಾಕ್ಸಿ ಅವಳಿ-ಎಂಜಿನ್ 4 ಆಸನಗಳ ವಿಮಾನವಾದ ಟೆಕ್ನಾಮ್ ಪಿ 2006 ಟಿ ಯ ಫ್ಲೀಟ್ ಅನ್ನು ಹೊಂದಿರುತ್ತದೆ. ಈಗಾಗಲೇ 300 ಕ್ಕೂ ಹೆಚ್ಚು ಮಾರ್ಗಗಳನ್ನು ಉಡಾನ್ ಯೋಜನೆಯಿಂದ ಕಾರ್ಯಗತಗೊಳಿಸಲಾಗಿದ್ದು, ಈ ಉದ್ಘಾಟನೆಯು 303 ನೇ ಮಾರ್ಗವನ್ನು ಗುರುತಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.