ನವದೆಹಲಿ: ಭಾರೀ ಗಾತ್ರದ ಕಾಳಿಂಗ ಸರ್ಪವೊಂದು ಮನೆಯೊಳಗಿದ್ದ ಪುಟ್ಟ ಮಗುವನ್ನು ಬೆನ್ನಟ್ಟಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯುವಕನೊಬ್ಬ ಮಗುವನ್ನು ಎತ್ತಿಕೊಂಡು ಹೋಗುವ ಮೂಲಕ ಜೀವ ಉಳಿಸಿದ್ದಾನೆ.
ವೈರಲ್‌ಹಾಗ್ ಯುಟ್ಯೂಬ್ ಚಾನೆಲ್ ನಲ್ಲಿ ಪೋಸ್ಟ್ ಮಾಡಿರುವ 1 ನಿಮಿಷ 3 ಸೆಕೆಂಡುಗಳ ಈ ವಿಡಿಯೋ ನೋಡಲು ಭಯಾನಕವಾಗಿದೆ. ಅದೆಲ್ಲಿಂದಲೋ ಬಂದ ದೊಡ್ಡ ಘಟಸರ್ಪ(King Cobra) ಮನೆಯೊಳಗಿದ್ದ ಪುಟ್ಟ ಮಗುವನ್ನು ಬೆನ್ನಟ್ಟುವ ದೃಶ್ಯವನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ.
ಮನೆಯ ಆವರಣದಲ್ಲಿ ತನ್ನ ತಾತನ ಮುಂದೆ ಮಗು ಆಟವಾಡುತ್ತಾ ಕುಳಿತಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಹಾವು ಪ್ರತ್ಯಕ್ಷವಾಗಿದೆ. ಇದನ್ನು ಗಮನಿಸಿದ ಮಗುವಿನ ತಾತ ಹಾವು.. ಹಾವು.. ಎಂದು ಕೂಗಿಕೊಂಡಿದ್ದಾರೆ. ಈ ವೇಳೆ ಅಲ್ಲಿಯೇ ಕುಳಿತಿದ್ದ ಯುವಕ ಓಡಿ ಬಂದು ಮಗುವನ್ನು ಎತ್ತಿಕೊಂಡು ಮನೆಯೊಳಗೆ ಹೋಗಿದ್ದಾನೆ. ಆದರೆ ಕಾಳಿಂಗ ಸರ್ಪ(King Cobra)ವು ಸರಸರಣೆ ಅವರನ್ನು ಹಿಂಬಾಲಿಸಿಕೊಂಡು ಹೋಗಿದೆ.
ಮನೆಯೊಳಗೆ ಹೋದ ಕೂಡಲೇ ಬಾಗಿಲು ಹಾಕಿಕೊಂಡಿದ್ದಾರೆ. ಈ ವೇಳೆ ಹಾವು ಬಾಗಿಲ ಬಳಿಯೇ ಸ್ವಲ್ಪ ಹೊತ್ತು ಸುಳಿದಾಡಿದೆ. ಬಳಿಕ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮರಳಿ ಹೋಗಿದೆ. ಈ ಸಂಪೂರ್ಣ ಘಟನೆಯ ದೃಶ್ಯಗಳು ಸಿಸಿಟಿವಿ(CCTV) ಕ್ಯಾಮರಾದಲ್ಲಿ ಸೆರೆಯಾಗಿವೆ. ಯುವಕ ಓಡಿಬಂದು ಮಗುವನ್ನು ಮನೆಯೊಳಕ್ಕೆ ತೆಗೆದುಕೊಂಡು ಹೋಗದಿದ್ದರೆ ಹಾವು ಯಾರನ್ನಾದರೂ ಕಚ್ಚಿ ಅಪಾಯವನ್ನುಂಟು ಮಾಡುವ ಸಾಧ್ಯತೆ ಇತ್ತು.
ಇದನ್ನೂ ಓದಿ: "ಎರಡು ಡೋಸ್ ಲಸಿಕೆ ಶೇ 95 ರಷ್ಟು ಸಾವಿನ ಪ್ರಮಾಣವನ್ನು ಕಡಿಮೆ ಮಾಡಿದೆ"
ಯುವಕನ ಸಮಯಪ್ರಜ್ಞೆ ಸಕಾಲಕ್ಕೆ ಮಗು ಮತ್ತು ಅವರ ತಂದೆಯ ಪ್ರಾಣ ಉಳಿಸಿದೆ. ಸದ್ಯ ವೈರಲ್ ಆಗುತ್ತಿರುವ ಈ ವಿಡಿಯೋ(Viral Video)ವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಹಾವು ಸರಸರಣೆ ಅವರನ್ನು ಹಿಂಬಾಲಿಸಿರುವ ದೃಶ್ಯ ನೋಡಿ ಅನೇಕರು ಆಶ್ಚರ್ಯದ ಜೊತೆಗೆ ಭಯ ವ್ಯಕ್ತಪಡಿಸಿದ್ದಾರೆ. ಇಬ್ಬರ ಪ್ರಾಣ ಉಳಿಸಿದ ಯುವಕನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.