ಬೆಂಗಳೂರು : ರಾಜ್ಯಾದ್ಯಂತ 78 ಕಡೆ ಎಸಿಬಿ ದಾಳಿ ನಡೆದಿದೆ (ACB Raid). ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಎಸಿಬಿ ದಾಳಿ ನಡೆದಿದೆ. 18 ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಮನೆ ಕಚೇರಿ ಮೇಲೆ ಎಸಿಬಿ ದಾಳಿ ನಡೆದಿದೆ (ACB Raid). ಏಕಕಾಲಕ್ಕೆ 200 ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ರಾಜ್ಯಾದ್ಯಂತ ಏಕಕಾಲಕ್ಕೆ 18 ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಮನೆ ಕಚೇರಿ ಮೇಲೆ ಎಸಿಬಿ ದಾಳಿ ನಡೆದಿದೆ (ACB Raid). ಬೆಂಗಳೂರಿನ ಮೂರು ಕಡೆ ದಾಳಿ ಮಾಡಿದ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.
ಇದನ್ನೂ ಓದಿ : 'ಸಮಗ್ರ ಆರ್ಥಿಕ ಬೆಳಣಿಗೆಯಲ್ಲಿ 2025 ಕ್ಕೆ ಕರ್ನಾಟಕ ನಂಬರ್ ಒನ್ ರಾಜ್ಯವಾಗಲಿದೆ'
ಬೆಂಗಳೂರಿನ 3 ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕ, ಬಿ ಕೆ ಶಿವಕುಮಾರ್ (BK Shivakumar), ರಸ್ತೆ ಸುರಕ್ಷತೆ, ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಸಿ.ಜೆ ಜ್ಞಾನೇಂದ್ರ ಕುಮಾರ್ (CJ Jnanendra Kumar), ಬಿಡಿಎ
ಉಪ ನಿರ್ದೇಶಕ ವಿ ರಾಕೇಶ್ ಕುಮಾರ್ (V Rakesh Kumar)ಕಚೇರಿ ಮತ್ತು ನಿವಾಸದ ನೆಲೆ ದಾಳಿ ನಡೆಸಲಾಗಿದೆ. ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿರುವ ಆರೋಪದ ಮೇಲೆ ಈ ದಾಳಿ ನಡೆಸಲಾಗಿದೆ (ACB Raid Today).
ಜ್ಞಾನೇಂದ್ರ ಕುಮಾರ್ ಗೆ ಸೇರಿದ ಬಸವೇಶ್ವರ ನಗರ ಮನೆ ಹಾಗೂ ಶಾಂತಿನಗರ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಈ ವೇಳೆ, ಜ್ಞಾನೇಂದ್ರ ಕುಮಾರ್ ಮನೆಯಲ್ಲಿ ಬೆಲೆಬಾಳುವ ಚಿನ್ನಾಭರಣ ಪತ್ತೆಯಾಗಿದೆ. ಅಲ್ಲದೆ ಆಸ್ತಿ ಪತ್ರಗಳು, ಬೆಳ್ಳಿ ವಸ್ತುಗಳು, ದುಬಾರಿ ಬೆಲೆಯ ಸೀರೆಗಳು ಪತ್ತೆಯಾಗಿದೆ ಎನ್ನಲಾಗಿದೆ. ಆಸ್ತಿ ಪತ್ರಗಳು, ಆದಾಯದ ಮೂಲಗಳ ಪರಿಶೀಲನೆ ನಡೆಸಲಾಗುತ್ತಿದೆ.
ಇದನ್ನೂ ಓದಿ : ಗ್ರಾಮ ದೇವತೆ ಹಬ್ಬದಲ್ಲಿ ಮುಳ್ಳಿನ ಬೇಲಿಗೆ ಹಾರಿದ ಭಕ್ತರು..!
ಬಿಡಿಎ ಉಪ ನಿರ್ದೇಶಕ ರಾಕೇಶ್ ಕುಮಾರ್ ಗೆ (Rakesh Kumar) ಸೇರಿದ ನಾಗರಬಾವಿ ನಿವಾಸದ ಮೇಲೆಯೂ ದಾಳಿ ಮಾಡಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಇಷ್ಟು ಮಾತ್ರವಲ್ಲದೆ ರಾಜ್ಯದ ವಿವಿಧೆಡೆ ಕೂಡಾ ಬೇರೆ ಬೇರೆ ಅಧಿಕಾರಿಗಳ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆದಿದೆ.
ಬೆಳ್ಳಂಬೆಳಗ್ಗೆ ಬಿಸಿ ಮುಟ್ಟಿಸಿದ ಎಸಿಬಿ ಅಧಿಕಾರಿಗಳು :
1.ರಮೇಶ್ ಕನ್ಕಟ್ಟೆ, ಆರ್ ಎಫ್ ಒ ಸಾಮಾಜಿಕ ಅರಣ್ಯ ಯಾದಗಿರಿ
2.ಬಸವರಾಜ ಶೇಖರ್ ರೆಡ್ಡಿ ಪಾಟೀಲ್, ಇಇ ಗೋಕಾಕ್
3.ಬಸವ ಕುಮಾರ್ ಎಸ್. ಶಿರಸ್ತೇದಾರ್, ಡಿಸಿ ಕಚೇರಿ ಗದಗ
4.ಗೋಪಿನಾಥ್ ಎನ್ ಮಲಗಿ, ಪ್ರಾಜೆಕ್ಟ್ ಮ್ಯಾನೇಜರ್, ನಿರ್ಮಿತಿ ಕೇಂದ್ರ ವಿಜಯಪುರ
5.ಶಿವಾನಂದ ಪಿ ಶರಣಪ್ಪ ಆರ್ ಎಫ್ ಒ ಬಾದಾಮಿ
6.ಮಂಜುನಾಥ್, ಅಸಿಸ್ಟೆಂಟ್ ಕಮೀಷನರ್ ರಾಮನಗರ
7.ಶ್ರೀನಿವಾಸ್ ಜನರಲ್ ಮ್ಯಾನೇಜರ್, ಸಮಾಜ ಕಲ್ಯಾಣ ಇಲಾಖೆ
8.ಮಹೇಶ್ವರಪ್ಪ, ಜಿಲ್ಲಾ ಪರಿಸರ ಇಲಾಖೆ ಅಧಿಕಾರಿ, ದಾವಣಗೆರೆ
9.ಕೃಷ್ಣ, ಎಇ ಎಪಿಎಂಸಿ, ಹಾವೇರಿ
10.ಚಲುವರಾಜ್, ಅಬಕಾರಿ ಇನ್ಸ್‌ಪೆಕ್ಟರ್, ಗುಂಡ್ಲುಪೇಟೆ
11.ಗಿರೀಶ್, ಎಇ, ರಾಷ್ಟ್ರೀಯ ಹೆದ್ದಾರಿ ಉಪವಿಭಾಗ
12.ಬಾಲಕೃಷ್ಣ ಎಚ್ ಎನ್, ಪೊಲೀಸ್ ಇನ್ಸ್‌ಪೆಕ್ಟರ್ ವಿಜಯನಗರ ಠಾಣೆ ಮೈಸೂರು
13.ಗವೀರಂಗಪ್ಪ, ಎಇಇ ಪಿಡ್ಬ್ಲೂಡಿ ಚಿಕ್ಕಮಗಳೂರು
14.ಅಶೋಕ್ ರೆಡ್ಡಿ ಪಾಟೀಲ್, ಎಇಇ ಕೃಷ್ಣ ಭಾಗ್ಯಜಲ ನಿಗಮ ದೇವದುರ್ಗ ರಾಯಚೂರು
15.ದಯ ಸುಂದರ್ ರಾಜು, ಎಇಇ, ಕೆಪಿಟಿಸಿಎಲ್, ದಕ್ಷಿಣ ಕನ್ನಡ
ಈ ಅಧಿಕಾರಿಗಳ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆದಿದೆ .
ಇದನ್ನೂ ಓದಿ : Bank Robbery: ಕೋಟ್ಯಂತರ ಹಣ ದೋಚಿ ಗದ್ದೆಯಲ್ಲಿ ಬಚ್ಚಿಟ್ಟ ಬ್ಯಾಂಕ್ ಕ್ಲರ್ಕ್, ಹಸೆಮಣೆ ಏರಬೇಕಿದ್ದ ಯುವಕ ಜೈಲು ಪಾಲಾಗಿದ್ದು ಹೇಗೆ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.