ಹುಬ್ಬಳ್ಳಿ: ರಾಮ್.. ರಾಮ್.. ಎನ್ನುವ ಬಂಜಾರ, ಲಂಬಾಣಿ ಸಮುದಾಯ ರಾಮನಂತೆ ಬಿಜೆಪಿಗೂ ಪ್ರಿಯವಾದ ಸಮಾಜ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಇಂದು ಬಂಜಾರ ಸಮುದಾಯದ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿ, ಬಂಜಾರ ಸಮುದಾಯ ರಾಮನನ್ನು ಸ್ತುತಿಸದೆ ಮಾತೇ ಆರಂಭಿಸದು. ಪ್ರಭು ಶ್ರೀರಾಮನ ಮೇಲೆ ಅಷ್ಟೊಂದು ಅಗಾಧ ಭಕ್ತಿ ಮೆರೆವ ಸಮಾಜವಿದು ಎಂದು ಬಣ್ಣಿಸಿದರು.
ಇದನ್ನೂ ಓದಿ: ಚೆನ್ನೈ ತಂಡಕ್ಕೆ ಆಘಾತ: ಆರಂಭಿಕ ಪಂದ್ಯದಲ್ಲಿ RCB ಪಡೆಯನ್ನೇ ನಡುಗಿಸಿದ್ದ ಬೌಲರ್ ಟೂರ್ನಿಯಿಂದ ಹೊರ?
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಆಗಬೇಕೆಂಬ ಪ್ರಬಲ ಆಶಯ ಈ ಸಮುದಾಯದ್ದೂ ಆಗಿತ್ತು. ತಮ್ಮ ಆಶಾಯದಂತೆ, ಪ್ರಧಾನಿ ಮೋದಿ ಅವರು ಮಾತು ಕೊಟ್ಟಂತೆ ರಾಮ ಮಂದಿರ ನಿರ್ಮಿಸಿದ್ದಾರೆ ಎಂದರು.
ಬಂಜಾರ ಸಮುದಾಯದ ಸಮಗ್ರ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬದ್ಧರಿದ್ದಾರೆ. ಮೂರನೇ ಬಾರಿ ಪ್ರಧಾನಿಯಾಗಲು ಈ ಶ್ರೇಷ್ಠ ರಾಮ ಭಕ್ತನನ್ನು ಬೆಂಬಲಿಸಿ ಎಂದು ಜೋಶಿ ಕರೆ ನೀಡಿದರು.
ಪ್ರಧಾನಮಂತ್ರಿ ಮೋದಿ ಅವರ ನೇತೃತ್ವದಲ್ಲಿ ದೇಶಾದ್ಯಂತ ಲಂಬಾಣಿ ಸಮುದಾಯದ ಏಳಿಗೆಗೆ ಪೂರಕವಾಗುವಂತೆ ವಿವಿಧ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗಿದೆ ಎಂದು ಹೇಳಿದರು.
ಮುಂದೆಯೂ ಸಮುದಾಯದ ಸರ್ವತೋಮುಖ ಪ್ರಗತಿಗೆ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಬದ್ಧವಾಗಿರುತ್ತದೆ. ಲಂಬಾಣಿ ತಾಂಡಾಗಳ ಸುಧಾರಣೆಗೆ ಕೇಂದ್ರ ಮಟ್ಟದಲ್ಲಿ ಸಂಕಲ್ಪ ತೊಡಲಾಗಿದೆ ಎಂದು ಹೇಳಿದರು.
ಕಲಘಟಗಿಯಲ್ಲಿ ಬಂಜಾರ ಭವನ: ಸಮಾಜದ ಪ್ರಮುಖ ಬೇಡಿಕೆಯಂತೆ ಕಲಘಟಗಿಯಲ್ಲಿ ಬಂಜಾರ ಭವನ ನಿರ್ಮಿಸಿ ಕೊಡಲಾಗುತ್ತದೆ. ಈಗಾಗಲೇ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ತಮ್ಮ ತಾಂಡಾಕ್ಕೆ ಕಾಂಕ್ರಿಟ್ ರಸ್ತೆ, ನೀರು, ಶಾಲೆ ಹೀಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ನಿಯೋಗ ಕರೆದೊಯ್ಯುವೆ ಬನ್ನಿ: ಬಂಜಾರ ಸಮಾಜದ ಕೆಲ ಪ್ರಮುಖ ಬೇಡಿಕೆಗಳಿಗೆ ಕೇಂದ್ರ ಮಟ್ಟದಲ್ಲೇ ಪರಿಹಾರ ಕಲ್ಪಿಸಲು ಪ್ರಯತ್ನಿಸುತ್ತೇನೆ. ಸಮಾಜದ ಐದಾರು ಪ್ರಮುಖರು ದೆಹಲಿಗೆ ಬನ್ನಿ. ಸಂಬಂಧಪಟ್ಟ ಕೇಂದ್ರ ಮಂತ್ರಿ ಜತೆ ಸಮಾಲೋಚನೆ ನಡೆಸಿ ಸ್ಪಂದಿಸಲಾಗುವುದು ಎಂದು ಸಚಿವ ಜೋಶಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಬೇರೆ ಪಕ್ಷಗಳ ಅನೇಕ ಕಾರ್ಯಕರ್ತರು ಮೋದಿ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬಿಜೆಪಿ ಸೇರ್ಪಡೆಯಾದರು.
ಇದನ್ನೂ ಓದಿ: IPL 2024ರ ನಡುವೆ ಲಕ್ನೋ ತಂಡಕ್ಕೆ ಬಿಗ್ ಶಾಕ್! ಪಂದ್ಯಾವಳಿಯಿಂದ ಹೊರಬಿದ್ದ ಕೋಟಿ ಮೌಲ್ಯದ ಆಟಗಾರ
ಸಭೆಯಲ್ಲಿ ಲಂಬಾಣಿ ಸಮುದಾಯದ ಪ್ರಮುಖರಾದ ಕೃಷ್ಣಾಜಿ ಚೌಹಣ, ಹರಿಲಾಲ ಪವಾರ, ಮಂಗ್ಲಪ್ಪ ಲಮಾಣಿ, ಅರ್ಜುನ ಲಮಾಣಿ ಹಾಗೂ ತಾಂಡಾದ ಎಲ್ಲಾ ಪ್ರಮುಖರು ಉಪಸ್ಥಿತರಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.