ಕಾವೇರಿ ನೀರು ಹಂಚಿಕೆ: ಮೇ 14ರೊಳಗೆ ಸ್ಕೀಮ್‌ ಕರಡು ಸಲ್ಲಿಕೆಗೆ ಆದೇಶಿಸಿದ ಸುಪ್ರೀಂ

ಮತ್ತೆ ಈ ವಿವಾದ ನ್ಯಾಯಾಲಯದ ಮುಂದೆ ಬರುವುದನ್ನು ನಾವು ಬಯಸುವುದಿಲ್ಲ. ಒಮ್ಮೆ ತೀರ್ಪು ನೀಡಿದ ಬಳಿಕ ಅದನ್ನು ಜಾರಿಗೆ ತರಬೇಕು- ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ

Last Updated : May 8, 2018, 04:35 PM IST
ಕಾವೇರಿ ನೀರು ಹಂಚಿಕೆ: ಮೇ 14ರೊಳಗೆ ಸ್ಕೀಮ್‌ ಕರಡು ಸಲ್ಲಿಕೆಗೆ ಆದೇಶಿಸಿದ ಸುಪ್ರೀಂ title=

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮೇ 14ರೊಳಗೆ ಕೇಂದ್ರ ಸರ್ಕಾರ ಸ್ಕೀಮ್‌ ಕರಡು ಸಲ್ಲಿಕೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಅಲ್ಲದೆ ಅದೇ ದಿನ ಕೇಂದ್ರ ಜಲ ಸಂಪನ್ಮೂಲ ಕಾರ್ಯದರ್ಶಿ ಹಾಜರಾಗಲು ಕೋರ್ಟ್‌ ಸೂಚಿಸಿದೆ. 

ಕಾವೇರಿ ಜಲ ಮಂಡಳಿ ಸ್ಥಾಪಿಸುವಂತೆ ನೀಡಿದ ಆದೇಶವನ್ನು ಪಾಲಿಸದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ, ಮತ್ತೆ ಈ ವಿವಾದ ನ್ಯಾಯಾಲಯದ ಮುಂದೆ ಬರುವುದನ್ನು ನಾವು ಬಯಸುವುದಿಲ್ಲ. ಒಮ್ಮೆ ತೀರ್ಪು ನೀಡಿದ ಬಳಿಕ ಅದನ್ನು ಜಾರಿಗೆ ತರಬೇಕು ಎಂದು ತಾಕೀತು ಮಾಡಿದರು.

ಇನ್ನೂ ಇದುವರೆಗೂ ಸ್ಕೀಮ್ ರಚನೆ ಮಾಡದ್ದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ಆಕ್ರೋಶ ವ್ಯಕ್ತಪಡಿಸಿದೆ. 

ಕರ್ನಾಟಕ ವಿಧಾನಸಭೆ ಚುನಾವಣೆ ಇರುವುದರಿಂದ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುವ‌ ಭಯದಿಂದ ಸ್ಕೀಂ ಕರಡು ಸಲ್ಲಿಸಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ತೀರ್ಮಾನ ತೆಗೆದುಕೊಳ್ಳಳು ಸಮಯ ಹಿಡಿಯುತ್ತದೆ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ತಿಳಿಸಿದರು.

ಕಾವೇರಿ ಜಲವಿವಾದ ವಿಚಾರವಾಗಿ ನ್ಯಾಯಮಂಡಳಿ ನೀಡಿದ್ದ ತೀರ್ಪನ್ನು ಮಾರ್ಪಡಿಸಿ ಫೆಬ್ರವರಿ 16ರಂದು ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿತ್ತು. 

Trending News