ರಾಯಚೂರು ಜಿಲ್ಲೆಯ ಕರೆಗುಡ್ಡೆ ಗ್ರಾಮದಲ್ಲಿ ವಿಕಲಚೇತನರಿಗೆ ವಾಹನ ವಿತರಿಸಿದ ಸಿಎಂ

15 ಲಕ್ಷ ರೂ.ವೆಚ್ಚದಲ್ಲಿ ವಿಕಲಚೇತನರಿಗೆ ವಾಹನ ವಿತರಿಸಲಾಗಿದೆ.

Last Updated : Jun 27, 2019, 07:32 AM IST
ರಾಯಚೂರು ಜಿಲ್ಲೆಯ ಕರೆಗುಡ್ಡೆ ಗ್ರಾಮದಲ್ಲಿ ವಿಕಲಚೇತನರಿಗೆ ವಾಹನ ವಿತರಿಸಿದ ಸಿಎಂ title=

ಕರೇಗುಡ್ಡ: ರಾಯಚೂರು ಜಿಲ್ಲೆಯ ಕರೆಗುಡ್ಡೆ ಗ್ರಾಮದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಕಲಚೇತನರಿಗೆ ವಾಹನಗಳನ್ನು ವಿತರಿಸಿದರು.

ಮಾನ್ವಿ ಶಾಸಕ ರಾಜಾವೆಂಕಟಪ್ಪ ನಾಯಕ್ ಹಾಗೂ ವಿಧಾನಪರಿಷತ್ ಸದಸ್ಯ ಎನ್.ಎಸ್.ಭೋಸರಾಜು ಅವರ ಅನುದಾನದಡಿಯಲ್ಲಿ 22 ವಿಕಲಚೇತನರ ವಾಹನಗಳನ್ನು ವಿತರಿಸಲಾಯಿತು. 15 ಲಕ್ಷ ರೂ.ವೆಚ್ಚದಲ್ಲಿ ಈ ವಾಹನಗಳನ್ನು ವಿಕಲಚೇತನರಿಗೆ ವಿತರಿಸಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ, ಸಚಿವರಾದ ಸಾ.ರ.ಮಹೇಶ, ಶಾಸಕರಾದ ರಾಜಾವೆಂಕಟಪ್ಪ ನಾಯಕ್, ಬಸವನಗೌಡ ದದ್ದಲ್, ಬಿ.ಎಸ್.ಹೂಲಿಗೇರಿ, ಪ್ರತಾಪಗೌಡ, ವಿಧಾನಪರಿಷತ್ ಸದಸ್ಯ ಎನ್.ಎಸ್.ಭೋಸರಾಜು, ಸೇರಿದಂತೆ ವಿವಿಧ ಶಾಸಕರು,ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಎಚ್.ಬಿ.ದಿನೇಶ, ಜಿಲ್ಲಾಧಿಕಾರಿಗಳು,ಜಿಪಂ ಸಿಇಒ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Trending News