ಕಾಫಿ ಡೇ ಮಾಲೀಕ ಸಿದ್ಧಾರ್ಥ್ ನಾಪತ್ತೆ: 24 ಗಂಟೆಯಾದರೂ ಇನ್ನೂ ಸಿಗದ ಸುಳಿವು

ಕಾಫಿ ಡೇ ಮಾಲೀಕ ಹಾಗೂ ಮಾಜಿ ಸಿಎಂ ಎಸ್ ಕೃಷ್ಣಾ ಅವರ ಅಳಿಯ ಸಿದ್ಧಾರ್ಥ ಈಗ ನಾಪತ್ತೆಯಾಗಿ 24 ಗಂಟೆ ಯಾಗುತ್ತಾ ಬಂತು, ಆದರೆ ಇದುವರೆಗೆ ಯಾವುದೇ ಸುಳಿವು ದೊರೆತಿಲ್ಲ ಎಂದು ಮೂಲಗಳು ತಿಳಿಸಿವೆ.

Last Updated : Jul 30, 2019, 06:38 PM IST
ಕಾಫಿ ಡೇ ಮಾಲೀಕ ಸಿದ್ಧಾರ್ಥ್ ನಾಪತ್ತೆ: 24 ಗಂಟೆಯಾದರೂ ಇನ್ನೂ ಸಿಗದ ಸುಳಿವು title=

ಬೆಂಗಳೂರು: ಕಾಫಿ ಡೇ ಮಾಲೀಕ ಹಾಗೂ ಮಾಜಿ ಸಿಎಂ ಎಸ್ ಕೃಷ್ಣಾ ಅವರ ಅಳಿಯ ಸಿದ್ಧಾರ್ಥ ಈಗ ನಾಪತ್ತೆಯಾಗಿ 24 ಗಂಟೆ ಯಾಗುತ್ತಾ ಬಂತು, ಆದರೆ ಇದುವರೆಗೆ ಯಾವುದೇ ಸುಳಿವು ದೊರೆತಿಲ್ಲ ಎಂದು ಮೂಲಗಳು ತಿಳಿಸಿವೆ. ನೇತ್ರಾವತಿ ಸೇತುವೆ ಬಳಿ ಸೋಮವಾರ ರಾತ್ರಿ ನಾಪತ್ತೆಯಾಗಿದ್ದ ಅವರು ಇದುವರೆಗೆ ಪತ್ತೆಯಾಗದೆ ಇರುವುದು ಆತಂಕಕ್ಕೆ ಕಾರಣವಾಗಿದೆ. 

ಈಗಾಗಲೇ ಜಿಲ್ಲಾ ಪೋಲಿಸ್ ಆಡಳಿತ ತೀವ್ರ ಶೋಧನಾ ಕಾರ್ಯವನ್ನು ಮುಂದುವರೆಸಿದ್ದು, ರಾತ್ರಿ ಕೂಡ ಕಾರ್ಯಾಚರಣೆಗಾಗಿ ದ್ವೀಪದ ವ್ಯವಸ್ಥೆಯನ್ನು ಮಾಡಲಿದೆ ಎನ್ನಲಾಗಿದೆ.ಸಿದ್ಧಾರ್ಥ್ ನಾಪತ್ತೆಯಾಗಿರುವ ನೇತ್ರಾವತಿ ದಡದಲ್ಲಿ ಈಗಾಗಲೇ ಕೋಸ್ಟ್ ಗಾರ್ಡ್, ಎನ್.ಡಿಆರ್.ಎಫ್, ಅಗ್ನಿಶಾಮಕ ದಳ ಸೇರಿದಂತೆ ಸುಮಾರು ನೂರಕ್ಕೂ ಅಧಿಕ ಮಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ಈಗಾಗಲೇ ರಾಜ್ಯದ ಸಂಸದರಾದ ಶೋಭಾ ಕರಂದ್ಲಾಜೆ ಅವರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ವಿ.ಜಿ ಸಿದ್ಧಾರ್ಥ ಅವರನ್ನು ಪತ್ತೆ ಮಾಡುವ ವಿಚಾರದಲ್ಲಿ ಕೇಂದ್ರ ಸರ್ಕಾರದ ನೆರವು ಕೋರಿದ್ದಾರೆ. ಸಿದ್ದಾರ್ಥ್ ನಾಪತ್ತೆ ಯಾದ ಹಿನ್ನಲೆಯಲ್ಲಿ ಇಂದು ಎಸ್.ಎಂ.ಕೃಷ್ಣಾ ಅವರ ಮನೆಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಸಿಎಂ ಯಡಿಯೂರಪ್ಪ, ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರು ಭೇಟಿ ನೀಡಿದರು.

 ಮಾಲೀಕ ಸಿದ್ಧಾರ್ಥ್ ಅವರು ನಾಪತ್ತೆ ಯಾದ ಹಿನ್ನಲೆಯಲ್ಲಿ ಇಂದು ಕಾಫಿ ಡೇ ನಿರ್ದೇಶಕ ಮಂಡಳಿ ತುರ್ತು ಸಭೆ ನಡೆಸಿದೆ.
 

Trending News