ಬೆಂಗಳೂರು: ಪಠ್ಯಪುಸ್ತಕದಿಂದ ಭಗತ್ ಸಿಂಗ್ ಪಠ್ಯವನ್ನು ಕೈಬಿಟ್ಟ ಕ್ರಮ ಬಿಜೆಪಿ ಸರ್ಕಾರದ ರಾಷ್ಟ್ರಭಕ್ತಿಯ ಮುಖವಾಡವನ್ನು ಕಳಚಿ ಹಾಕಿದೆ ಎಂಬ ಕಾಂಗ್ರೆಸ್ ಅರೋಪಕ್ಕೆ ಬಿಜೆಪಿ ಮಂಗಳವಾರ ತಿರುಗೇಟು ನೀಡಿದೆ.
Dear #CongressFakeNewsFactory ಹ್ಯಾಶ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ನೀವು ಸುಳ್ಳು ಹೇಳುತ್ತಲೇ ದೇಶ ಆಳಿದವರು. ಅಧಿಕಾರವಿಲ್ಲದಿದ್ದಾಗಲೂ ಸುಳ್ಳನ್ನೇ ಅರುಹುತ್ತಿದ್ದೀರಿ. ಭಗತ್ ಸಿಂಗ್ ಗದ್ಯಪಾಠವನ್ನು ಪಠ್ಯದಿಂದ ಕೈಬಿಟ್ಟಿಲ್ಲ. ಸುಳ್ಳುಗಳಿಂದ ಚುನಾವಣೆ ಗೆಲ್ಲಲಾಗದು. ಹಿಂದೂ ವಿರೋಧಿಗಳಾಗಿದ್ದ ಘಜಿನಿ, ಘೋರಿಗಳನ್ನು ಪಠ್ಯದಲ್ಲಿ ಆರಾಧನೆ ಮಾಡಿದ್ದು, ಯಾರನ್ನು ಓಲೈಸಲು?’ ಎಂದು ಪ್ರಶ್ನಿಸಿದೆ.
ನೀವು ಸುಳ್ಳು ಹೇಳುತ್ತಲೇ ದೇಶ ಆಳಿದವರು. ಅಧಿಕಾರವಿಲ್ಲದಿದ್ದಾಗಲೂ ಸುಳ್ಳನ್ನೇ ಅರುಹುತ್ತಿದ್ದೀರಿ.
ಭಗತ್ ಸಿಂಗ್ ಗದ್ಯಪಾಠವನ್ನು ಪಠ್ಯದಿಂದ ಕೈಬಿಟ್ಟಿಲ್ಲ. ಸುಳ್ಳುಗಳಿಂದ ಚುನಾವಣೆ ಗೆಲ್ಲಲಾಗದು.
ಹಿಂದೂ ವಿರೋಧಿಗಳಾಗಿದ್ದ ಘಜಿನಿ, ಘೋರಿಗಳನ್ನು ಪಠ್ಯದಲ್ಲಿ ಆರಾಧನೆ ಮಾಡಿದ್ದು, ಯಾರನ್ನು ಓಲೈಸಲು? pic.twitter.com/KRGEsOStvc
— BJP Karnataka (@BJP4Karnataka) May 17, 2022
ಇದನ್ನೂ ಓದಿ: ಡಿಕೆಶಿಗೆ ಹುಟ್ಟುಹಬ್ಬದ ಕೇಕ್ ತಿನ್ನಿಸದ ಪ್ರಿಯಾಂಕಾ ಗಾಂಧಿ: ಬಿಜೆಪಿ ವ್ಯಂಗ್ಯ
ಸಿದ್ದು ಅಧಿಕಾರ ವ್ಯಾಮೋಹ!
‘ರಾಜಕೀಯ ನಿವೃತ್ತಿಯ ಬಗ್ಗೆ ಸಿದ್ದರಾಮಯ್ಯ ಮಾತನಾಡಲಾರಂಭಿಸಿ ಒಂದು ದಶಕವಾಯ್ತು. ನಿಜ ಹೇಳಬೇಕೆಂದರೆ ವಲಸೆ ಕಾಂಗ್ರೆಸಿಗರು ಇದಕ್ಕಾಗಿ ದಶಮಾನೋತ್ಸವ ಸಂಭ್ರಮ ಮಾಡಬೇಕಿತ್ತು ಮತ್ತು ಅಲ್ಲಿ ರಾಜಕೀಯ ನಿವೃತ್ತಿ ಘೋಷಣೆಯ ಬೆಳ್ಳಿಹಬ್ಬ ಆಚರಿಸೋಣ ಎಂದು ಆಶಾವಾದ ವ್ಯಕ್ತಪಡಿಸಬೇಕು. ಏಕೆಂದರೆ ನಿಮ್ಮ ಅಧಿಕಾರ ವ್ಯಾಮೋಹ ಅಷ್ಟು ಬಲವಾದದ್ದು!’ ಎಂದು ಟೀಕಿಸಿದೆ.
ರಾಜಕೀಯ ನಿವೃತ್ತಿಯ ಬಗ್ಗೆ @siddaramaiah ಮಾತನಾಡಲಾರಂಭಿಸಿ ಒಂದು ದಶಕವಾಯ್ತು.
ನಿಜ ಹೇಳಬೇಕೆಂದರೆ ವಲಸೆ ಕಾಂಗ್ರೆಸಿಗರು ಇದಕ್ಕಾಗಿ ದಶಮಾನೋತ್ಸವ ಸಂಭ್ರಮ ಮಾಡಬೇಕಿತ್ತು ಮತ್ತು ಅಲ್ಲಿ ರಾಜಕೀಯ ನಿವೃತ್ತಿ ಘೋಷಣೆಯ ಬೆಳ್ಳಿಹಬ್ಬ ಆಚರಿಸೋಣ ಎಂದು ಆಶಾವಾದ ವ್ಯಕ್ತಪಡಿಸಬೇಕು.
ಏಕೆಂದರೆ ನಿಮ್ಮ ಅಧಿಕಾರ ವ್ಯಾಮೋಹ ಅಷ್ಟು ಬಲವಾದದ್ದು!
— BJP Karnataka (@BJP4Karnataka) May 17, 2022
‘ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ನಿಯಮ ಘೋಷಣೆಯಾಗುತ್ತಿದ್ದಂತೆ ಸಿದ್ದರಾಮಯ್ಯ ತಮ್ಮ & ಪುತ್ರನ ಟಿಕೆಟ್ ಗಟ್ಟಿ ಮಾಡಿಕೊಳ್ಳಲು ಹೊರಟಿದ್ದಾರೆ. ತನಗಿಂತ ಪುತ್ರ ಹೆಚ್ಚು ಮತ ಪಡೆದಿದ್ದಾರೆ, ವರುಣಾದಲ್ಲಿ ನನಗಿಂತ ಹೆಚ್ಚು ಜನಪ್ರಿಯ ಎಂಬ ಹೇಳಿಕೆಯ ಅರ್ಥವೇನು? ಪುತ್ರನಿಗೂ ಈಗಲೇ ನೀವು ಟಿಕೆಟ್ ಖಚಿತಪಡಿಸುವುದಾರೆ ಡಿ.ಕೆ.ಶಿವಕುಮಾರ್ ಇರುವುದೇಕೆ?’ ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: ಶಾಸಕ ರಾಮಸ್ವಾಮಿಯವರು ನಮ್ಮ ಕುಟುಂಬದ ಅಣ್ಣ ಇದ್ದ ಹಾಗೆ : ಕುಮಾರಸ್ವಾಮಿ
ಕಾಂಗ್ರೆಸ್ ಪಕ್ಷದಲ್ಲಿ ವಿಪಕ್ಷ ನಾಯಕ @siddaramaiah ಅವರು ಮತ್ತೊಂದು ರೀತಿಯಲ್ಲಿ ಕುಟುಂಬವಾದ ಬೆಳೆಸಲು ಹೊರಟಿದ್ದಾರೆ.
ಯತೀಂದ್ರ ಜನಪ್ರಿಯ ಶಾಸಕ ಎಂದು ಬಿಂಬಿಸುವ ಮೂಲಕ ತಮ್ಮ ಪುತ್ರನನ್ನು ಮುಖ್ಯಮಂತ್ರಿ ರೇಸ್ಗೆ ತರುವ ಲೆಕ್ಕಾಚಾರವೇ?
ಅಥವಾ @DKShivakumar ಅವರಿಗೆ ಇದು ಮತ್ತೊಂದು ಸವಾಲೋ?
— BJP Karnataka (@BJP4Karnataka) May 17, 2022
‘ಕಾಂಗ್ರೆಸ್ ಪಕ್ಷದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮತ್ತೊಂದು ರೀತಿಯಲ್ಲಿ ಕುಟುಂಬವಾದ ಬೆಳೆಸಲು ಹೊರಟಿದ್ದಾರೆ. ಯತೀಂದ್ರ ಜನಪ್ರಿಯ ಶಾಸಕ ಎಂದು ಬಿಂಬಿಸುವ ಮೂಲಕ ತಮ್ಮ ಪುತ್ರನನ್ನು ಮುಖ್ಯಮಂತ್ರಿ ರೇಸ್ಗೆ ತರುವ ಲೆಕ್ಕಾಚಾರವೇ? ಅಥವಾ ಡಿ.ಕೆ.ಶಿವಕುಮಾರ್ ಅವರಿಗೆ ಇದು ಮತ್ತೊಂದು ಸವಾಲೋ?’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.