ರಸ್ತೆ ಗುಂಡಿ ಮುಚ್ಚಲಾಗದ ಸರ್ಕಾರದಿಂದ ಇನ್ಯಾವ ಅಭಿವೃದ್ಧಿ ಸಾಧ್ಯ?: ಸಿಎಂಗೆ ಕಾಂಗ್ರೆಸ್ ಪ್ರಶ್ನೆ

ರಸ್ತೆಯಲ್ಲಿ ಗುಂಡಿಗಳಿದ್ದವು, ನಂತರ ರಸ್ತೆಯಲ್ಲಿ ಕಂದಕಗಳು ಸೃಷ್ಟಿಯಾದವು, ಈಗ ರಸ್ತೆಯಲ್ಲಿ ಸುರಂಗಗಳೇ ಬೀಳುತ್ತಿವೆ! ಎಂದು ಕಾಂಗ್ರೆಸ್ ಟೀಕಿಸಿದೆ.

Written by - Puttaraj K Alur | Last Updated : Oct 20, 2022, 08:17 PM IST
  • ಹೈಕೋರ್ಟ್ ಛಿಮಾರಿ, ಜನತೆ ಶಾಪ ಹಾಕಿದ್ರೂ ರಸ್ತೆಗುಂಡಿ ಮುಚ್ಚಲಾಗದ ಸರ್ಕಾರಕ್ಕೆ ಇನ್ಯಾವ ಅಭಿವೃದ್ಧಿ ಸಾಧ್ಯ
  • ಸರ್ಕಾರ ಭ್ರಷ್ಟಾಚಾರದ ಗುಂಡಿಯಲ್ಲಿ ಬಿದ್ದು ಕಮಿಷನ್ ಕೆಸರಲ್ಲಿ ಹೊರಳಾಡುತ್ತಿರುವಾಗ ಅಭಿವೃದ್ಧಿ ಮರೀಚಿಕೆಯೇ ಸರಿ
  • ಮುಖ್ಯಮಂತ್ರಿಗಳೇ ಗುಂಡಿ ಮುಚ್ಚಲು ಇನ್ನೆಷ್ಟು ಜನ ಸಾಯಬೇಕು? ಎಂದು ಪ್ರಶ್ನಿಸಿದೆ ಕಾಂಗ್ರೆಸ್
ರಸ್ತೆ ಗುಂಡಿ ಮುಚ್ಚಲಾಗದ ಸರ್ಕಾರದಿಂದ ಇನ್ಯಾವ ಅಭಿವೃದ್ಧಿ ಸಾಧ್ಯ?: ಸಿಎಂಗೆ ಕಾಂಗ್ರೆಸ್ ಪ್ರಶ್ನೆ  title=
ಸಿಎಂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಬೆಂಗಳೂರು: ಹೈಕೋರ್ಟ್ ಛಿಮಾರಿ ಹಾಕಿದರೂ, ಜನತೆ ಶಾಪ ಹಾಕಿದರೂ ರಸ್ತೆ ಗುಂಡಿ ಮುಚ್ಚಲಾಗದ ಸರ್ಕಾರಕ್ಕೆ ಇನ್ಯಾವ ಅಭಿವೃದ್ಧಿ ಮಾಡಲು ಸಾಧ್ಯವೆಂದು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಕಾಂಗ್ರೆಸ್ ಪ್ರಶ್ನಿಸಿದೆ.

#SayCM ಹ್ಯಾಶ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಸರ್ಕಾರ ಭ್ರಷ್ಟಾಚಾರದ ಗುಂಡಿಯಲ್ಲಿ ಬಿದ್ದು ಕಮಿಷನ್ ಎಂಬ ಕೆಸರಲ್ಲಿ ಹೊರಳಾಡುತ್ತಿರುವಾಗ ಅಭಿವೃದ್ಧಿ ಮರೀಚಿಕೆಯೇ ಸರಿ. ಮುಖ್ಯಮಂತ್ರಿಗಳೇ ಗುಂಡಿ ಮುಚ್ಚಲು ಇನ್ನೆಷ್ಟು ಜನ ಸಾಯಬೇಕು?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ಬೆಂಗಳೂರು-ಪುಣೆ ಮಾರ್ಗದಲ್ಲಿ 10 ಕಿಮೀ ಟ್ರಾಫಿಕ್ ಜಾಮ್..!

‘ಇದುವರೆಗೂ ರಸ್ತೆಗುಂಡಿಗೆ ಸುಮಾರು 16ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ, ನೂರಾರು ಜನರು ಗಾಯಗೊಂಡಿದ್ದಾರೆ. ನಿತ್ಯ ನೂರಾರು ಅಪಘಾತಗಳು ರಸ್ತೆ ಗುಂಡಿಯ ಕಾರಣಕ್ಕಾಗಿಯೇ ಸಂಭವಿಸುತ್ತಿವೆ. ರಸ್ತೆಗೆ ಹಾಕಿದ ತೇಪೆಗಳು ನಾಲ್ಕೇ ದಿನಕ್ಕೆ ಕಿತ್ತು ಹೋಗುತ್ತಿವೆ. ಸರ್ಕಾರದ ಕಮಿಷನ್ 40% ಗಿಂತಲೂ ಹೆಚ್ಚಿದೆಯೇ? ಸಿಎಂ ಬೊಮ್ಮಾಯಿಯವರೇ ಮಾತನಾಡಿ’ ಅಂತಾ ಕುಟುಕಿದೆ.

‘ರಸ್ತೆಯಲ್ಲಿ ಗುಂಡಿಗಳಿದ್ದವು, ನಂತರ ರಸ್ತೆಯಲ್ಲಿ ಕಂದಕಗಳು ಸೃಷ್ಟಿಯಾದವು, ಈಗ ರಸ್ತೆಯಲ್ಲಿ ಸುರಂಗಗಳೇ ಬೀಳುತ್ತಿವೆ! #40PercentSarkara ಸರ್ಕಾರವಿದ್ದರೆ ಮುಂದೆ ರಸ್ತೆಗಳೇ ಮಾಯವಾಗುತ್ತವೆ! ಜನಸಂಕಲ್ಪ ಸಮಾವೇಶ ಎನ್ನುವ ಸಿಎಂ ಬೊಮ್ಮಾಯಿಯವರೇ, ಅಸಲಿಗೆ ನೀವು ಮಾಡ್ತಿರೋದು "ಜನಸಂಕಟ" ಸಮಾವೇಶ’ ಅಂತಾ ಟೀಕಿಸಿದೆ.

ಇದನ್ನೂ ಓದಿ: ಸೀಟ್ ಬೆಲ್ಟ್ ಧರಿಸದವರಿಗೆ 1,000 ರೂ. ದಂಡ: ರಾಜ್ಯ ಸರ್ಕಾರದ ಆದೇಶ

1 ಡಾಲರ್‌ಗೆ ₹100 ಆಗುವ ಕಾಲ ದೂರವಿಲ್ಲ

‘ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ 1 ಡಾಲರ್ 15 ರೂ. ಆಗಲಿದೆ ಎಂದಿದ್ದರು ನಳೀನ್ ಕುಮಾರ್ ಕಟೀಲ್. ಮೋದಿಯವರ ಬಾಯಲ್ಲಿ "ಚೀನಾ" ಎಂಬ ಪದ ಹೇಗೆ ಬರುವುದಿಲ್ಲವೋ ಹಾಗೆ ಕಟೀಲರ ಬಾಯಲ್ಲಿ ಡಾಲರ್ ಎಂಬ ಪದ ಬರ್ತಿಲ್ಲ ಈಗ! ನಿರ್ಮಲಾ ಸೀತರಾಮನ್ ಎಂಬ ಮಹಾನ್ ಆರ್ಥಿಕ ತಜ್ಞೆ ವಿತ್ತಸಚಿವರಾಗಿರುವಾಗ 1 ಡಾಲರ್‌ಗೆ ₹100 ಆಗುವ ಕಾಲ ದೂರವಿಲ್ಲ ಅಲ್ಲವೇ ಬಿಜೆಪಿ?’ ಅಂತಾ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News