ದುರ್ಯೋಧನ ಪಾರ್ಟ್ ಹಾಕಿದ್ದ ಸಿದ್ದರಾಮಯ್ಯ ಗಂಡನ ಜೇಬಿನಿಂದ ಹಣ ತೆಗೆದು ಹೆಂಡತಿಗೆ ಕೊಡ್ತಿದ್ದಾರೆ: ಎನ್.ಮಹೇಶ್

N Mahesh on Congress Government Schemes: ಅಬಕಾರಿ ಸುಂಕವನ್ನು ಶೇ.20ರಷ್ಟು ಏರಿಕೆ ಮಾಡಿ ಗಂಡನ ಜೇಬಿನಿಂದ ಹಣ ತೆಗೆದು ಹೆಂಡತಿ ಬ್ಯಾಗಿಗೆ ಕೊಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು  ಎನ್.ಮಹೇಶ್ ಕಾಂಗ್ರೆಸ್ ಯೋಜನೆಗಳ ಬಗ್ಗೆ ಲೇವಡಿ ಮಾಡಿದರು.

Written by - Zee Kannada News Desk | Last Updated : Jul 22, 2023, 05:18 PM IST
  • ಗ್ಯಾರಂಟಿಗಳ ವಿರೋಧಿ ಬಿಜೆಪಿ ಎಂದು ಬಿಂಬಿಸುವ ಯತ್ನ ನಡೆಯುತ್ತಿದೆ
  • ನಾವು ಗ್ಯಾರಂಟಿ ವಿರೋಧಿಗಳಲ್ಲ‌, ಪ್ರಣಾಳಿಕೆಯಲ್ಲಿ ಹೇಳಿದಂತೆ ಜಾರಿಗೊಳಿಸಿ ಎನ್ನುತ್ತಿದ್ದೇವೆ
  • ಗಂಡನ ಜೇಬಿನಿಂದ ಹಣ ತೆಗೆದು ಹೆಂಡತಿ ಬ್ಯಾಗಿಗೆ ಕೊಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ
ದುರ್ಯೋಧನ ಪಾರ್ಟ್ ಹಾಕಿದ್ದ ಸಿದ್ದರಾಮಯ್ಯ ಗಂಡನ ಜೇಬಿನಿಂದ ಹಣ ತೆಗೆದು ಹೆಂಡತಿಗೆ ಕೊಡ್ತಿದ್ದಾರೆ: ಎನ್.ಮಹೇಶ್ title=
ಕಾಂಗ್ರೆಸ್ ವಿರುದ್ಧ ಎನ್.ಮಹೇಶ್ ಆಕ್ರೋಶ

ಚಾಮರಾಜನಗರ: ಬಿಜೆಪಿ ಪ್ರತಿಭಟನೆಯನ್ನು ಸಚಿವರಾದ ಕೃಷ್ಣ ಬೈರೇಗೌಡ ಹಾಗೂ ಪ್ರಿಯಾಂಕ್ ಖರ್ಗೆ ತಿರುಚಿ ದಲಿತರ ಮೇಲೆ ದೌರ್ಜನ್ಯವೆಂದು ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಎನ್.ಮಹೇಶ್ ಕಿಡಿಕಾರಿದ್ದಾರೆ.

ಚಾಮರಾಜನಗರದಲ್ಲಿ ಬಿಜೆಪಿ ಶಾಸಕರ ಅಮಾನತು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಪ್ರತಿಭಟನೆಯನ್ನು ಇಬ್ಬರು ಸಚಿವರು ತಿರುಚಿ ದಲಿತರನ್ನು ದಾಳವನ್ನಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್‍ನವರ ರಾಜಕಾರಣ ನಂಬಲು ದಲಿತರು ಗುಗ್ಗುಗಳಲ್ಲ ಎಂದು ಆಕ್ರೋಶ ಹೊರಹಾಕಿದರು.

ಐಎಎಸ್ ಅಧಿಕಾರಿಗಳನ್ನು ಪ್ರೊಟೊಕಾಲ್‍ಗೆ ನೇಮಿಸಿದ್ದು ಸರಿನಾ ಎಂಬ ಪ್ರಶ್ನೆಗೆ ಉತ್ತರ ಕೊಡದಿದ್ದಾಗ ಬಿಲ್ ಅನ್ನು ಹರಿದು ಶಾಸಕರು ಪ್ರತಿಭಟಿಸಿದ್ದಾರೆ. ಅದು ಅವರ ಹಕ್ಕು, ನಾವು ಕೈ ಮುಗಿದು ಒಳ ಹೋಗುವ ಸದನದ ಬಾಗಿಲನ್ನು ಸಿದ್ದರಾಮಯ್ಯ ಒದ್ದು ಹೊರಹೋಗಿದ್ದರು. ಕುಸ್ತಿಗೆ ಕರೆದಿದ್ದರು, ಸಂಗಮೇಶ್ ಬಟ್ಟೆ ಹರಿದುಕೊಂಡಿದ್ದರು. ಅದು ಸಂವಿಧಾನ ವಿರೋಧಿ, ನಾವು ಮಾಡಿದ್ದು ಪ್ರತಿಭಟನೆ ಅಷ್ಟೇ, ಬಾವಿಗೆ ಇಳಿದು ಪ್ರತಿಭಟನೆ ಮಾಡುವುದು ಸಹಜ ಪ್ರಕ್ರಿಯೆ ಎಂದು ಹೇಳಿದರು.

ಇದನ್ನೂ ಓದಿ: ದೇವೇಗೌಡರ ಬಗ್ಗೆ ಮಾತನಾಡಲು ನಾಚಿಕೆ ಆಗುವುದಿಲ್ಲವೇ? : ಡಿಕೆಶಿ ವಿರುದ್ಧ ಹೆಚ್‌ಡಿಕೆ ಗರಂ

ದುರ್ಯೋಧನನ ಪಾರ್ಟ್ ಹಾಕಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯನವರು ಪ್ರಬುದ್ಧ ರಾಜಕಾರಣಿ ಎಂದುಕೊಂಡಿದ್ದೇವು. ಆದರೆ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಬಿಜೆಪಿ ಅವರು ಪ್ರತಿಭಟನೆ ಮಾಡುತ್ತಿದ್ದರೇ ಗೂಡ್ಸೆ ಮುಂದೆ ಮಾಡಿ ಎನ್ನುತ್ತಾರೆ. ಭಯೋತ್ಪಾದಕರನ್ನು ಮುಚ್ಚಿಡಲು ಕಾಂಗ್ರೆಸ್ ನೋಡುತ್ತಿದ್ದು, 3ನೇ ದರ್ಜೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಗ್ಯಾರಂಟಿಗಳ ವಿರೋಧಿ ಬಿಜೆಪಿ ಎಂದು ಬಿಂಬಿಸುವ ಯತ್ನ ನಡೆಯುತ್ತಿದೆ. ನಾವು ಗ್ಯಾರಂಟಿ ವಿರೋಧಿಗಳಲ್ಲ‌, ಆದರೆ ನಮ್ಮ ಒತ್ತಾಯ ಪ್ರಣಾಳಿಕೆಯಲ್ಲಿ ಕೊಟ್ಟ ರೀತಿ ಜಾರಿ ಮಾಡಿ ಎನ್ನುತ್ತಿದ್ದೇವೆ. ಅಬಕಾರಿ ಸುಂಕವನ್ನು ಶೇ.20ರಷ್ಟು ಏರಿಕೆ ಮಾಡಿ ಗಂಡನ ಜೇಬಿನಿಂದ ಹಣ ತೆಗೆದು ಹೆಂಡತಿ ಬ್ಯಾಗಿಗೆ ಕೊಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಲೇವಡಿ ಮಾಡಿದರು.

ಇನ್ನು ಚಾಮರಾಜೇಶ್ವರ ದೇವಾಲಯದಿಂದ ಭುವನೇಶ್ವರಿ ವೃತ್ತದ ತನಕ ಮೆರವಣಿಗೆ ಬಂದು ರಾಷ್ಟ್ರೀಯ ಹೆದ್ದಾರಿ ತಡೆದು ಬಿಜೆಪಿ ಪ್ರತಿಭಟನೆ ನಡೆಸಿದ್ದರಿಂದ 1 ತಾಸಿಗೂ ಅಧಿಕ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಪ್ರತಿಭಟನೆಯಲ್ಲಿ ಸ್ಪೀಕರ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: ಜನರ ತಲೆ ಮೇಲೆ ಫ್ಲವರ್ ಪಾಟ್ ಇಟ್ಟ ಕಾಂಗ್ರೆಸ್..ಹಾಲಿನ ಬೆಲೆ ಏರಿಕೆಗೆ ಹೆಚ್.ಡಿ.ಕುಮಾರಸ್ವಾಮಿ ಕಿಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News