Good News : ಜನವರಿ 4ರಿಂದ Mysore-Bangalore ಪ್ಯಾಸೆಂಜರ್ ರೈಲು ಸೇವೆ ಆರಂಭ

ಕೊರೊನಾ ಲಾಕ್‌ಡೌನ್‌ನಿಂದ ಸ್ಥಗಿತಗೊಳಿಸಲಾಗಿದ್ದ ಹಲವು ರೈಲುಗಳನ್ನು ನೈಋತ್ಯ ರೈಲ್ವೆ ಮತ್ತೆ ಪ್ರಾರಂಭಿಸುತ್ತಿದ್ದು 06255 ಸಂಖ್ಯೆಯ 16 ಬೋಗಿಗಳ ರೈಲು ಮೈಸೂರು-ಬೆಂಗಳೂರು ನಡುವೆ ಸಂಚರಿಸಲಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. 

Written by - Yashaswini V | Last Updated : Jan 2, 2021, 10:31 AM IST
  • ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದ್ದ ರೈಲು ಸೇವೆ ಮತ್ತೆ ಆರಂಭ
  • ಬೆಂಗಳೂರು-ಮೈಸೂರು ನಡುವೆ ಸಂಚರಿಸಲಿದೆ 16 ಬೋಗಿಗಳ ರೈಲು
Good News : ಜನವರಿ 4ರಿಂದ Mysore-Bangalore ಪ್ಯಾಸೆಂಜರ್ ರೈಲು ಸೇವೆ ಆರಂಭ title=
Mysore-Bangalore passenger train service

ಮೈಸೂರು : ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕರೋನಾವೈರಸ್ ನಿಗ್ರಹಿಸಲು ಜಾರಿಗೆ ತರಲಾಗಿದ್ದ ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದ್ದ ರೈಲು ಸೇವೆ ನಿಧಾನವಾಗಿ ಕಾರ್ಯಾಚರಣೆಗೆ ಮರಳುತ್ತಿವೆ. ಇದೀಗ ನೈಋತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿಯೂ ರವಿವಾರವನ್ನು ಹೊರತುಪಡಿಸಿ ಜನವರಿ 4 ಸೋಮವಾರದಿಂದ ಪ್ಯಾಸೆಂಜರ್ ರೈಲು ಸೇವೆಯನ್ನು ಆರಂಭಿಸಲಿದೆ.

- 06255 ಸಂಖ್ಯೆಯ 16 ಬೋಗಿಗಳ ರೈಲು ಬೆಂಗಳೂರು-ಮೈಸೂರು (Mysuru) ನಡುವೆ ಸಂಚರಿಸಲಿದೆ. ಈ ರೈಲು ಬೆಂಗಳೂರಿನಿಂದ ಸಂಜೆ 7ಕ್ಕೆ ಹೊರಟು ರಾತ್ರಿ 10 ಗಂಟೆಗೆ ಮೈಸೂರು ತಲುಪಲಿದೆ.  
- 06256 ಸಂಖ್ಯೆ ರೈಲು ಬೆಳಗ್ಗೆ 6.10ಕ್ಕೆ ಮೈಸೂರಿನಿಂದ ಹೊರಟು 9.15ರ ಹೊತ್ತಿಗೆ ಬೆಂಗಳೂರಿಗೆ ಆಗಮಿಸಲಿದೆ.
- 06257 ಸಂಖ್ಯೆಯ ರೈಲು ಬೆಳಗ್ಗೆ 9.20ಕ್ಕೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 12.45ಕ್ಕೆ ಮೈಸೂರಿಗೆ ತಲುಪುತ್ತದೆ. ಅಂತೆಯೇ 06258 ಸಂಖ್ಯೆ ರೈಲು ಮಧ್ಯಾಹ್ನ 1.45ಕ್ಕೆ ಮೈಸೂರಿನಿಂದ  ಹೊರಟು ಸಂಜೆ 5 ಗಂಟೆಗೆ ಬೆಂಗಳೂರನ್ನು (Bengaluru) ತಲುಪಲಿದೆ ಎಂದು ರೈಲ್ವೆ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ : ರೈಲ್ವೆ ಪ್ರಯಾಣಿಕರೇ ಎಚ್ಚರ! ನಿಲ್ದಾಣಕ್ಕೆ ತೆರಳುವ ಮುನ್ನ ನಿಮ್ಮ ಟಿಕೆಟ್ ಅಸಲಿಯೇ/ನಕಲಿಯೇ ಪರಿಶೀಲಿಸಿ

ಮೈಸೂರು-ಬೆಂಗಳೂರು ನಡುವಿನ ರೈಲು ಎಲ್ಲೆಲ್ಲಿ ನಿಲುಗಡೆ ನೀಡಲಿದೆ?
ಈ ರೈಲುಗಳು ನಾಗನಹಳ್ಳಿ, ಶ್ರೀರಂಗಪಟ್ಟಣ, ಪಾಂಡವಪುರ, ಚಂದಗಿರಿ ಕೊಪ್ಪಲ್‌, ಬ್ಯಾಡರಹಳ್ಳಿ, ಯಲಿಯೂರು, ಮಂಡ್ಯ (Mandya), ಹನಕೆರೆ, ಮದ್ದೂರು, ನಿಡಘಟ್ಟ, ಶೆಟ್ಟಿಹಳ್ಳಿ, ಚನ್ನಪಟ್ಟಣ, ರಾಮನಗರ, ಕೇತೋಹಳ್ಳಿ,  ಬಿಡದಿ, ಹೆಜ್ಜಾಲ, ಕೆಂಗೇರಿ, ಜ್ಞಾನ ಭಾರತಿ, ನಾಯಂಡಹಳ್ಳಿಯಲ್ಲಿ ನಿಲುಗಡೆ ನೀಡಲಿದೆ ಎನ್ನಲಾಗಿದೆ.

ಇನ್ನು ಈ ಮಾರ್ಗಗಳಲ್ಲಿ ಪ್ಯಾಸೆಂಜರ್ ರೈಲು (Passenger Train) ಸಂಚಾರ ಆರಂಭವಾಗುವ ಹಿನ್ನಲೆಯಲ್ಲಿ ಜನವರಿ 4ರಂದು ಬಂಗಾರಪೇಟೆ-ಮೈಸೂರು ಮೆಮೂ ರೈಲು ಸಂಚಾರವನ್ನು ರದ್ದುಪಡಿಸಲಾಗಿದೆ.

ಇದನ್ನೂ ಓದಿ : Indian Railways : ಪ್ರವಾಸಿಗರಿಗಾಗಿ ಅದ್ಭುತ ಉಡುಗೊರೆ ನೀಡಿದ ಭಾರತೀಯ ರೈಲ್ವೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News