Amit Shah: ಲೋಕಾಯುಕ್ತ ದಾಳಿ ಹಿನ್ನಲೆ  ಹೊನ್ನಾಳಿಯ  ಅಮಿತ್ ಶಾ ಕಾರ್ಯಕ್ರಮ ಮುಂದೂಡಿಕೆ

Amit Shah: ಮಾರ್ಚ್ 12 ರಂದು ಹೊನ್ನಾಳಿಗೆ ಆಗಮಿಸಬೇಕಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ.ಹೊನ್ನಾಳಿ ತಾಲೂಕಿನ ಪಕ್ಕದ ಕ್ಷೇತ್ರವಾಗಿರುವ ಚನ್ನಗಿರಿ ವಿಧಾನಸಭಾ ಕ್ಷೇತ್ರ ವಾಗಿದೆ.

Written by - Zee Kannada News Desk | Last Updated : Mar 5, 2023, 01:05 PM IST
  • ಹೊನ್ನಾಳಿಯಲ್ಲಿ ನಡೆಯಬೇಕಿದ್ದ ಅಮಿತ್ ಶಾ ಕಾರ್ಯಕ್ರಮ ಮುಂದೂಡಿಕೆ
  • ಮಾರ್ಚ್ 12 ರಂದು ಹೊನ್ನಾಳಿಗೆ ಆಗಮಿಸಬೇಕಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ
  • ಮಾಡಾಳ ವಿರುಪಾಕ್ಷಪ್ಪ ಪ್ರಕರಣದ ಹಿನ್ನಲೆ ಕಾರ್ಯಕ್ರಮ ಮುಂದೂಡಿಕೆ
Amit Shah: ಲೋಕಾಯುಕ್ತ ದಾಳಿ ಹಿನ್ನಲೆ  ಹೊನ್ನಾಳಿಯ  ಅಮಿತ್ ಶಾ ಕಾರ್ಯಕ್ರಮ ಮುಂದೂಡಿಕೆ  title=

Amit Shah: ಮಾರ್ಚ್ 12 ರಂದು ಹೊನ್ನಾಳಿಗೆ ಆಗಮಿಸಬೇಕಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ.ಹೊನ್ನಾಳಿ ತಾಲೂಕಿನ ಪಕ್ಕದ ಕ್ಷೇತ್ರವಾಗಿರುವ ಚನ್ನಗಿರಿ ವಿಧಾನಸಭಾ ಕ್ಷೇತ್ರ ವಾಗಿದೆ.

ಟೆಂಡರ್ ಕೊಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಲಂಚ ಪಡೆಯುತ್ತಿದ್ದ ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಬಿಜೆಪಿ ಶಾಸಕ ಮಾಡಳ್ ವಿರೂಪಾಕ್ಷಪ್ಪ ಪುತ್ರ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯೂಎಸ್​ಎಸ್​ಬಿ)ಯ  ಚೀಫ್ ಅಕೌಂಟೆಂಟ್ ಪ್ರಶಾಂತ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರು  ಬಲೆ ಬೀಸಿದ್ದರು.

ಇದನ್ನೂ ಓದಿ: Hassan : ಮುಖಕ್ಕೆ ಮಾರಕವಾದ ಮೇಕಪ್ : ಮುಂದೂಡಿದ ಮದುವೆ!

ಈ ಹಿನ್ನೆಲೆಯಲ್ಲಿ ಹೊನ್ನಾಳಿ, ಚನ್ನಗಿರಿ ಸುತ್ತಮುತ್ತಾ ಸ್ಥಳಗಳೆಲ್ಲವೂ ಲೋಕಾಯುಕ್ತ ಅಧಿಕಾರಿಗಳ ತನಿಖೆಯಲ್ಲಿದೆ ಆದ್ದರಿಂದ ಮಾರ್ಚ್ 12 ರಂದು ಹೊನ್ನಾಳಿಗೆ ಆಗಮಿಸಬೇಕಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂಬ ಮಾಹಿತಿ ಹೊರ ಬಿದ್ದಿದೆ.ಶಾಸಕ ಎಂ ಪಿ ರೇಣುಕಾಚಾರ್ಯ ,ಅಮಿತ್ ಶಾರಿಗಾಗಿ  ಕಾರ್ಯಕ್ರಮ   ಹಮ್ಮಿಕೊಂಡಿದ್ದರು.

ಇದನ್ನೂ ಓದಿ:Madal Virupaksha: ಪ್ರಶಾಂತ್ ಮೇಲೆ ಲೋಕಾಯುಕ್ತ ದಾಳಿ ನಡೆಸುತ್ತಿದ್ದಂತೆ  ಅಪ್ಪ  ಮಾಡಾಳ್ ವಿರೂಪಾಕ್ಷ ಪರಾರಿ! 

ಈ ಕಾರ್ಯಕ್ರಮದಲ್ಲಿ ತಾಂಡಗಳು, ಕುರುಬರಹಟ್ಟಿ, ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ 12 ಜಿಲ್ಲೆಗಳ ಸುಮಾರು 53 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಯೋಜನೆ  ಹಮ್ಮಿಕೊಳ್ಳಲಾಗಿತ್ತು. ಅಮಿತ್ ಶಾ ಆಗಮನ ಹಿನ್ನಲೆ ರೇಣುಕಾಚಾರ್ಯ, ಜಿಲ್ಲಾಧಿಕಾರಿ, ಎಸ್ಪಿ, ಸಿಇಓ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದೀಗ  ಮಾಡಾಳ ವಿರುಪಾಕ್ಷಪ್ಪ ಪ್ರಕರಣದಿಂದ ಏಕಾಏಕಿ ಕಾರ್ಯಕ್ರಮ ಮುಂದೂಡಿಕೆ ಮಾಡಲಾಗಿದೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News