ಬೆಂಗಳೂರು: ವಿಶ್ವಾಸಮತವನ್ನು ಯಶಸ್ವಿಯಾಗಿ ಪಾಸು ಮಾಡಿದ ನಂತರ ಈಗ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರದಲ್ಲಿ ಪ್ರಮುಖ ಖಾತೆಗಳಿಗಾಗಿ ಹಗ್ಗ ಜಗ್ಗಾಟ ಮುಂದುವರೆದಿದೆ.
ಈ ಖಾತೆ ಹಂಚಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಇಂತದ್ದೆ ಖಾತೆ ಬೇಕೆಂದು ತಾವು ಪಟ್ಟು ಹಿಡಿದಿಲ್ಲ ಬದಲಾಗಿ ಯಾವುದೇ ಖಾತೆ ನೀಡಿದರೂ ಸಹಿತ ನಿಭಾಯಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ. ಗೃಹ ಖಾತೆ ಅವರು ಪಟ್ಟು ಹಿಡಿದಿದ್ದಾರೆ ಎನ್ನುವ ಹೇಳಿಕೆಗೆ ಆ ರೀತಿ ಎಲ್ಲೂ ಹೇಳಿಲ್ಲ ಎಂದು ಅವರು ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಪಕ್ಷದ ನಾಯಕರು ಸಚಿವ ಸ್ಥಾನದ ಹಂಚಿಕೆ ವಿಚಾರವಾಗಿ ರಾಹುಲ್ ಗಾಂಧಿ ಜೊತೆ ಚರ್ಚಿಸಿಸಲು ದೆಹಲಿಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ಹೈಮಾಂಡ್ ಅಂತಿಮ ಗೊಳಿಸಿದ ಹೆಸರುಗಳಿಗೆ ಮಾತ್ರ ಸಚಿವ ಸ್ಥಾನವನ್ನು ನೀಡಲಾಗುತ್ತದೆ ಎಂದು ತಿಳಿದುಬಂದಿದೆ.