ಬೆಂಗಳೂರು: ಜೆಡಿಎಸ್ ವರಿಷ್ಠ ದೇವೇಗೌಡರ ವಿರುದ್ಧ ವ್ಯಂಗ್ಯವಾಡಿರುವ ಬಿಜೆಪಿಯ ಕೆ.ಎಸ್.ಈಶ್ವರಪ್ಪ ಒಂದು ವೇಳೆ ಅವರಿಗೆ 28 ಮಕ್ಕಳು ಇದ್ದಿದ್ದರೆ ಎಲ್ಲರಿಗೂ ಟಿಕೆಟ್ ನೀಡಿ ಎಲ್ಲ ಲೋಕಸಭಾ ಕ್ಷೇತ್ರಗಳಿಗೂ ನಿಲ್ಲಿಸುತ್ತಿದ್ದರು ಎಂದು ಹೇಳಿದ್ದಾರೆ.
ಆ ಮೂಲಕ ದೇವೇಗೌಡರ ಕುಟುಂಬ ರಾಜಕಾರಣವನ್ನು ಅವರು ಟೀಕಿಸಿದ್ದಾರೆ.ಎಎನ್ಐ ಸುದ್ದಿ ಸಂಸ್ಥೆ ಜೊತೆ ಮಾತನಾಡುತ್ತಾ ತಿಳಿಸಿರುವ ಈಶ್ವರಪ್ಪ " ದೇವೇಗೌಡರಿಗೆ 28 ಮಕ್ಕಳಿದ್ದರೆ ಅವರು ಎಲ್ಲರನ್ನು ರಾಜ್ಯದ 28 ಕ್ಷೇತ್ರಗಳ ಅಭ್ಯರ್ಥಿಗಳನ್ನು ಮಾಡುತ್ತಿದ್ದರು "ಎಂದು ಹೇಳಿದ್ದಾರೆ.
K. S. Eshwarappa, BJP Karnataka: Agar Deve Gowda ka 28 beta rahe to vo 28 shetra ko ek-ek beta ko udhar candidate banata tha. pic.twitter.com/wQ6Euzwdy0
— ANI (@ANI) March 13, 2019
ಇದೇ ವೇಳೆ ಮಹಾ ಮೈತ್ರಿ ಕುರಿತಾಗಿ ಟೀಕಿಸಿದ ಅವರು " ಮಹಾಮೈತ್ರಿ ಇಲ್ಲವೇ ಇಲ್ಲ ಅದೆಲ್ಲ ಒಡೆದ ಚೂರಾಗಿದೆ.ಮಾಯಾವತಿ ಹೊರಗಿದ್ದಾರೆ,ಅಖಿಲೇಶ್ ಯಾಧವ್ ಹೊರಗಿದ್ದಾರೆ,ಆಮ್ ಆದ್ಮಿ ಪಕ್ಷ ಹೊರಗೆ ಇದೆ.ನೋಡೋಣ ಯಾರ್ಯಾರು ಚುನಾವಣೆ ತನಕ ಮಹಾಘಟಬಂದನ್ ಸೆರುತ್ತಾರೆ,ಬಿಜೆಪಿ ಶಕ್ತಿ ದಿನದಿಂದ ದಿನಕ್ಕೆ ಅಧಿಕಗೊಳ್ಳುತ್ತಿದೆ ಎಂದರು.
ಕರ್ನಾಟಕದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ.ಎಪ್ರಿಲ್ 18 ಹಾಗೂ ಎಪ್ರಿಲ್ 23 ರಂದು ಚುನಾವಣೆ ನಡೆಯಲಿದೆ