‘ಮತ್ತೊಮ್ಮೆ ಸಿಎಂ ಆಗ್ತೇನೆಂದು ಅಬ್ಬರಿಸುವ ಮುನ್ನ ಒಂದು ಕ್ಷೇತ್ರದಲ್ಲಿ ಗೆಲ್ಲುವ ಸಾಮರ್ಥ್ಯವಿರಬೇಕು’

ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕೆಂದು ಹಂಬಲಿಸುವ ಸಿದ್ದರಾಮಯ್ಯನವರೇ ಗೆಲ್ಲುವುದಕ್ಕಾಗಿ ನಿಮಗೊಂದು ಗಟ್ಟಿ ಕ್ಷೇತ್ರವೇ ಇಲ್ಲವೆಂದು ಬಿಜೆಪಿ ಟೀಕಿಸಿದೆ.

Written by - Zee Kannada News Desk | Last Updated : Dec 10, 2021, 04:03 PM IST
  • ಆಕಾಶವನ್ನು ಅಳೆಯುವುದಕ್ಕೆ ಮುನ್ನ ಅಂಗಳ ಅಳೆಯುವ ಸಾಮರ್ಥ್ಯ ಇರಬೇಕು
  • ಕ್ಷೇತ್ರದಿಂದ ಕ್ಷೇತ್ರಕ್ಕೆ ವಲಸೆ ಹೋಗುವ ಬದಲು ರಾಜಕೀಯ ನಿವೃತ್ತಿ ಕ್ಷೇಮವಲ್ಲವೇ?
  • ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯರ ವಿರುದ್ಧ ಬಿಜೆಪಿ ಟ್ವೀಟ್ ಬಾಣ
‘ಮತ್ತೊಮ್ಮೆ ಸಿಎಂ ಆಗ್ತೇನೆಂದು ಅಬ್ಬರಿಸುವ ಮುನ್ನ ಒಂದು ಕ್ಷೇತ್ರದಲ್ಲಿ ಗೆಲ್ಲುವ ಸಾಮರ್ಥ್ಯವಿರಬೇಕು’ title=
ಸಿದ್ದರಾಮಯ್ಯರ ವಿರುದ್ಧ ಬಿಜೆಪಿ ಟ್ವೀಟ್ ಬಾಣ

ಬೆಂಗಳೂರು: ಆಕಾಶವನ್ನು ಅಳೆಯುವುದಕ್ಕೆ ಮುನ್ನ ಅಂಗಳ ಅಳೆಯುವ ಸಾಮರ್ಥ್ಯ ಇರಬೇಕು ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ವಿರುದ್ಧ ಬಿಜೆಪಿ ಕಿಡಿಕಾರಿದೆ. ಈ ಸಂಬಂಧ ಶುಕ್ರವಾರ ಟ್ವೀಟ್ ಮಾಡಿರುವ ಬಿಜೆಪಿ(BJP), ‘ಸಿದ್ದರಾಮಯ್ಯನವರೇ ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಅಬ್ಬರಿಸುವುದಕ್ಕೆ ಮುನ್ನ ನೆಟ್ಟಗೆ ಒಂದು ಕ್ಷೇತ್ರದಲ್ಲಿ ಗೆಲ್ಲುವ ಸಾಮರ್ಥ್ಯ ಇರಬೇಕು’ ಅಂತಾ ಟೀಕಿಸಿದೆ.

‘ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕೆಂದು ಹಂಬಲಿಸುವ ಸಿದ್ದರಾಮಯ್ಯ(Siddaramaiah) ಅವರೇ ಗೆಲ್ಲುವುದಕ್ಕಾಗಿ ನಿಮಗೊಂದು ಗಟ್ಟಿ ಕ್ಷೇತ್ರವೇ ಇಲ್ಲ. ಈ ರೀತಿ ಕ್ಷೇತ್ರದಿಂದ ಕ್ಷೇತ್ರಕ್ಕೆ ವಲಸೆ ಹೋಗುವ ಬದಲು ರಾಜಕೀಯ ನಿವೃತ್ತಿ ಕ್ಷೇಮವಲ್ಲವೇ?’ ಬುರುಡೆರಾಮಯ್ಯ ಎಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: ‘ಓಮಿಕ್ರಾನ್’ ಸೋಂಕಿತ ರೋಗಿಗಳನ್ನು ಆಸ್ಪತ್ರೆಗೆ ಸೇರಿಸಲು, ಡಿಸ್ಚಾರ್ಜ್ ಮಾಡಲು ಹೊಸ ಮಾರ್ಗಸೂಚಿ

‘ಹಾವು ಸಾಯಬಾರದು, ಕೋಲು ಮುರಿಬಾರದು ಎಂಬ ಲೆಕ್ಕಾಚಾರವನ್ನು ಚುನಾವಣೆಯವರೆಗೂ ಉಳಿಸಿಕೊಳ್ಳಲು ಸಿದ್ದರಾಮಯ್ಯ ಈಗ ಹೆಣಗಾಡುವಂತಾಗಿದೆ. ವಲಸೆ ನಾಯಕ ಸಿದ್ದರಾಮಯ್ಯ ಅವರ ಮೇಲೆ ಚಿಮ್ಮನಕಟ್ಟಿ ಎಫೆಕ್ಟ್ ಜೋರಾಗಿರುವಂತೆ ಕಾಣುತ್ತಿದೆ! ಸಿದ್ದರಾಮಯ್ಯ ಅವರೇ ಒಟ್ಟಾರೆಯಾಗಿ ನೀವು ಏನು ಹೇಳಿದ ಹಾಗೆ ಆಯ್ತು? ಹೈಕಮಾಂಡ್ ಸೂಚನೆ ಮೇರೆಗೆ ಚಾಮರಾಜಪೇಟೆ(Chamrajpet)ಯಿಂದ‌ ಕಣಕ್ಕೆ ಇಳಿಯುತ್ತಿದ್ದೇನೆ ಎಂದು ಈಗಲೇ ‘ಕೇವಿಯಟ್’ ಹಾಕಿಕೊಳ್ಳುವುದಕ್ಕೆ ಮಾಜಿ ವಕೀಲ ಸಾಹೇಬರು ಹೊರಟ ಹಾಗಿದೆಯಲ್ಲವೇ?’ ಎಂದು ಟ್ವೀಟ್ ಮೂಲಕ ಬಿಜೆಪಿ ಪ್ರಶ್ನಿಸಿದೆ.

Congress.jpg

ಗೆಲ್ಲುವ ಕ್ಷೇತ್ರಕ್ಕಾಗಿ ಸಿದ್ದರಾಮಯ್ಯ ಹುಡುಕಾಟ..?

ನನಗೆ ಚಾಮರಾಜಪೇಟೆ ಬಗ್ಗೆ ಒಲವೂ ಇಲ್ಲ, ವಿರೋಧವು ಇಲ್ಲ. ಹೈಕಮಾಂಡ್(Congress HighCommand) ಹೇಳಿದ ಕಡೆ ನಿಲ್ಲುತ್ತೇನೆಂದು ಸಿದ್ದರಾಮಯ್ಯ ಹೇಳಿದ್ದರು. ಸದ್ಯ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಕ್ಷೇತ್ರಕ್ಕಾಗಿ ಸಿದ್ದರಾಮಯ್ಯ ಹುಡುಕಾಟ ನಡೆಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಚಾಮುಂಡೇಶ್ವರಿ ಕ್ಷೇತ್ರದ ಜೊತೆ ಬಾದಾಮಿಯಲ್ಲಿಯೂ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು(B Sriramulu) ವಿರುದ್ಧ ಅಲ್ಪಮತಗಳ ಅಂತರದಲ್ಲಿ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದರು. ಇದೀಗ 2023ಕ್ಕೆ ಸ್ವಕ್ಷೇತ್ರ ಬಾದಾಮಿ ಬಿಡಲು ನಿರ್ಧರಿಸಿದ್ದು, ಪುತ್ರನ ಕ್ಷೇತ್ರ(ವರುಣಾ)ದ ಮೇಲೆ ಕಣ್ಣಿಟ್ಟಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಈಶ್ವರಪ್ಪ ಭವಿಷ್ಯ ಸುಳ್ಳಾಗಲಿದೆ, ನಿರಾಣಿ ಸಿಎಂ ಆಗಲ್ಲ: ಯತ್ನಾಳ್‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News