ಬೆಳಗಾವಿ: ಜನಾರ್ಧನ್ ರೆಡ್ಡಿ ಹೊಸ ಪಕ್ಷ ಘೋಷಣೆ ಸಂಬಂಧ ಸಚಿವ ಶ್ರೀರಾಮುಲು ಅವರ ಪ್ರಾಣ ಸ್ನೇಹಿತನ್ನಾಗಿ ಒಳ್ಳೆಯದಾಗಲಿ ಎಂದು ಬಯಸುತ್ತೇನೆ ಎಂದು ಶುಭಕೋರಿದರು. ಅಧಿವೇಶನಕ್ಕೂ ಮುನ್ನ ಸುವರ್ಣಸೌಧದಲ್ಲಿ ಮಾತಾನಾಡಿದ ಇವರು, ಜನಾರ್ಧನ್ ರೆಡ್ಡಿ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. ರೆಡ್ಡಿ ಬುದ್ದಿವಂತರು, ಅನುಭವಸ್ಥ ಇದ್ದಾರೆ,ಅವರ ಪ್ರಾಣ ಸ್ನೇಹಿತನಾಗಿ ಒಳ್ಳೆಯದಾಗಲಿ ಅಂತ ಬಯಸುತ್ತೇನೆ, ಎಂದರು.
ಇದನ್ನೂ ಓದಿ : "ರಕ್ತ ಪರೀಕ್ಷೆ ಆಗಲಿ, ಮದ್ಯಪಾನ ಮಾಡಿರೋದು ಸಿಕ್ಕಿದ್ರೆ ರಾಜಕೀಯ ನಿವೃತ್ತಿ"
ಬಿಜೆಪಿ ತೊರೆದು ಹೊಸ ಪಕ್ಷ ಘೋಷಣೆ ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ಹಿರಿಯ ನಾಯರು, ಸಿಎಂ ಜೊತೆ ಮಾತನಾಡಿದ್ದೆ. ಮತ್ತೆ ಅವಕಾಶ ಸಿಕ್ರೆ ಮಾತನಾಡುತ್ತೇನೆ, ಬೊಮ್ಮಾಯಿ ಮಂತ್ರಿ ಮಂಡಲದಲ್ಲಿ ಸಚಿವನಾಗಿದ್ದೇನೆ, ನಮ್ಮ ಉದ್ದೇಶ ಕಾಂಗ್ರೆಸ್ ಮುಕ್ತ ಆಗಬೇಕು. 2023 ಕ್ಕೆ ಮತ್ತೆ ಬಿಜೆಪಿ ಪಕ್ಷ ಆಡಳಿತಕ್ಕೆ ಬರಬೇಕು, ನಮ್ಮದು ರಾಷ್ಟ್ರೀಯ ರಾಜಕೀಯ ಪಕ್ಷ,ಎಂದರು.
ಇದೇ ಸಂದರ್ಭದಲ್ಲಿ ರೆಡ್ಡಿ ರಾಜಕೀಯ ನಡೆ ಬಿಜೆಪಿಗೆ ಹಿನ್ನಡೆ ಆಗಲಿದ್ಯಾ ಎಂಬ ಪ್ರಶ್ನೆಗೆ, ನಾನು ಡಿಬೇಟ್ ಮಾಡಲ್ಲ, ಒಳ್ಳೆಯದು ಕೆಟ್ಟದ್ದರ ಬಗ್ಗೆ ನಾನು ಮಾತನಾಡಲ್ಲ. ಸಿದ್ದಾಂತ ಮೇಲೆ ರಾಜಕೀಯ ಮಾಡುತ್ತೇವೆ ಎಂದು ಉತ್ತರಿಸಿದರು. ಹಾಗೂ ರೆಡ್ಡಿ ಹೊಸ ಪಕ್ಷ ನಿಮಗೆ ಧರ್ಮ ಸಂಕಟ ಆಗಿದ್ಯಾ ಎಂಬ ಪ್ರಶ್ನೆಗೆ ನಾಲ್ಕು ಬಾರಿ ಶಾಸಕ, ಸಂಸದ, ಸಚಿವನಾಗಿದ್ದೇನೆ. ಸಿದ್ದಾಂತದ ಮೇಲೆ ರಾಜಕೀಯ ಮಾಡುತ್ತಿದ್ದೇನೆ ಎಂದರು.
ಇದನ್ನೂ ಓದಿ : Janardhana Reddy: ಹೊಸ ರಾಜಕೀಯ ಪಕ್ಷ ಘೋಷಿಸಿದ ಮಾಜಿ ಸಚಿವ ಜನಾರ್ದನ ರೆಡ್ಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.