University of Bangalore: ಬೆಂಗಳೂರು ವಿಶ್ವವಿದ್ಯಾಲಯದಿಂದ ಮಹಾ ಯಡವಟ್ಟು , ಮಾರ್ಕ್ ಕಂಡು ತಬ್ಬಿಬ್ಬಾದ ವಿದ್ಯಾರ್ಥಿಗಳು

ಬೆಂಗಳೂರು ವಿಶ್ವವಿದ್ಯಾಲಯ ಪ್ರಕಟಿಸಿರುವ ಬಿಕಾಂ 3ನೇ ಸೆಮಿಸ್ಟರ್ ಫಲಿತಾಂಶ (B.com Results) ಕಂಡು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. Travel Agency & Tour Operator ವಿಷಯಕ್ಕೆ ನಡೆದಿದ್ದ ಪರೀಕ್ಷೆಯಲ್ಲಿ ಬೆಂಗಳೂರು ವಿವಿಯಿಂದ ಬೇಕಾಬಿಟ್ಟಿ ಮೌಲ್ಯ ಮಾಪನ ನಡೆದಿದೆ. 

Edited by - Yashaswini V | Last Updated : Jan 25, 2022, 08:34 AM IST
  • ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಬೇಕಾಬಿಟ್ಟಿ ಮಾರ್ಕ್ಸ್
  • ಅಂಕಗಳನ್ನ ನೋಡಿ ತಬ್ಬಿಬ್ಬಾದ ವಿದ್ಯಾರ್ಥಿಗಳು
  • ಪ್ರಸ್ತುತ, ಪ್ರೊ.ದೇವರಾಜ್ ಅವರು ಬೆಂಗಳೂರು ವಿವಿ ಮೌಲ್ಯಮಾಪನ ಕುಲಸಚಿವರಾಗಿದ್ದಾರೆ
University of Bangalore: ಬೆಂಗಳೂರು ವಿಶ್ವವಿದ್ಯಾಲಯದಿಂದ ಮಹಾ ಯಡವಟ್ಟು  , ಮಾರ್ಕ್ ಕಂಡು ತಬ್ಬಿಬ್ಬಾದ ವಿದ್ಯಾರ್ಥಿಗಳು title=
University of Bangalore

ಬೆಂಗಳೂರು: ವಿದ್ಯಾರ್ಥಿಗಳ ಭವಿಷ್ಯದಲ್ಲಿ ಪರೀಕ್ಷೆ ಎಂಬುದು ಒಂದು ಮಹತ್ವದ ತಿರುವು. ಪರೀಕ್ಷೆ ಬರೆದ ಪ್ರತಿ ವಿದ್ಯಾರ್ಥಿಗೂ ಫಲಿತಾಂಶ ನೋಡುವ ತವಕ ಮತ್ತು ಒಂದು ರೀತಿಯ ಆತಂಕ ಇದ್ದೇ ಇರುತ್ತದೆ. ಆದರಿಲ್ಲಿ ಪರೀಕ್ಷೆಯ ಫಲಿತಾಂಶ ಕಂಡು ಸಾವಿರಾರು ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ನಡೆದಿರುವ ಮಹಾ ಯಡವಟ್ಟೆ ಇದಕ್ಕೆ ಮುಖ್ಯ ಕಾರಣ.

ಹೌದು, ಕಳೆದ ವರ್ಷ ಬಿಕಾಂ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿದ್ದ ಬೆಂಗಳೂರು ವಿವಿ (University of Bangalore) ಇತ್ತೀಚಿಗೆ ಫಲಿತಾಂಶ ಪ್ರಕಟಿಸಿದೆ. ಹಲವಾರು ಮೂರನೇ ಸೆಮಿಸ್ಟರ್ ಬಿ.ಕಾಂ ವಿದ್ಯಾರ್ಥಿಗಳು ಇತ್ತೀಚೆಗೆ ಹೊರಬಂದ ತಮ್ಮ ಫಲಿತಾಂಶಗಳನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ. ಬೆಂಗಳೂರು ವಿವಿ 70 ಅಂಕಗಳ ಥಿಯರಿ ಮತ್ತು 30 ಅಂಕಗಳಿಗೆ ಇಟರ್ನಲ್ಸ್ ಒಟ್ಟು 100 ಅಂಕಗಳಿಗೆ ಪರೀಕ್ಷೆಯನ್ನು ನಿಗದಿ ಮಾಡಿದೆ. ಅದರಂತೆ ಪರೀಕ್ಷೆಯಲ್ಲಿ ಪ್ರಶ್ನೆ ಕೇಳಿರೋದು ಗರಿಷ್ಠ 70 ಅಂಕಗಳಿಗೆ ಮಾತ್ರ. ಆದರೆ ಬೆಂಗಳೂರು ವಿವಿ ಕೊಟ್ಟಿರೋದು 73 ಅಂಕ. ಥಿಯರಿಯಲ್ಲಿ 70 ಅಂಕಗಳಿಗೆ 73 ಅಂಕ ನೀಡಿ ಬೆಂಗಳೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿದೆ ಎಂದು ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ- Anand Singh : ಆನಂದ್ ಸಿಂಗ್ ಉಸ್ತುವಾರಿ ಬದಲಾವಣೆ : ಅಭಿಮಾನಿಗಳಿಂದ ಭುಗಿಲೆದ್ದ ಆಕ್ರೋಶ!

Travel Agency & Tour Operator ವಿಷಯಕ್ಕೆ ನಡೆದಿದ್ದ ಪರೀಕ್ಷೆ:
ಬೆಂಗಳೂರು ವಿಶ್ವವಿದ್ಯಾಲಯ ಪ್ರಕಟಿಸಿರುವ ಬಿಕಾಂ 3ನೇ ಸೆಮಿಸ್ಟರ್ ಫಲಿತಾಂಶ (B.com Results) ಕಂಡು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. Travel Agency & Tour Operator ವಿಷಯಕ್ಕೆ ನಡೆದಿದ್ದ ಪರೀಕ್ಷೆಯಲ್ಲಿ ಬೆಂಗಳೂರು ವಿವಿಯಿಂದ ಬೇಕಾಬಿಟ್ಟಿ ಮೌಲ್ಯ ಮಾಪನ ನಡೆದಿದೆ. ಬೆಂಗಳೂರು ವಿಶ್ವವಿದ್ಯಾಲಯವು ಸೆಮಿಸ್ಟರ್ ಪರೀಕ್ಷೆಗಳಲ್ಲಿ 70 ರಲ್ಲಿ 73 ಅಂಕಗಳನ್ನು ತಪ್ಪಾಗಿ ನೀಡಿದೆ. ಉತ್ತಮ ಅಂಕಗಳ ನಿರೀಕ್ಷೆಯಲ್ಲಿದ್ದವರು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕಷ್ಟಪಟ್ಟರೆ ಕೆಲವರು ಉದಾರವಾಗಿ ಅಂಕಗಳನ್ನು ನೀಡುತ್ತಾ ನಮ್ಮ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಇದನ್ನೂ ಓದಿ- ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆ ಬಿಲ್ ಕುಲ್ ಇಲ್ಲ: ಸಚಿವ ಈಶ್ವರಪ್ಪ

ಬೆಂಗಳೂರು ವಿವಿ ವ್ಯಾಪ್ತಿಗೆ ಬರುವ ಬಹುತೇಕ ಕಾಲೇಜುಗಳಲ್ಲಿ ಇದೇ ರೀತಿಯ ಫಲಿತಾಂಶ ಕಂಡು ಬಂದಿದೆ, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಜತೆ ಬೆಂಗಳೂರು ವಿವಿ ಚೆಲ್ಲಾಟವಾಡುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಸ್ತುತ, ಬೆಂಗಳೂರು ವಿವಿ ಫಲಿತಾಂಶದ ಜವಾಬ್ದಾರಿಯನ್ನು  ಖಾಸಗಿ ಕಂಪನಿಗೆ ಗುತ್ತಿಗೆ ನೀಡಿರುವುದೇ ಈ ಯಡವಟ್ಟಿಗೆ ಕಾರಣವೇ..? ಎಂಬ ಪ್ರಶ್ನೆಗಳು ಉದ್ಬವವಾಗುತ್ತಿದೆ.  ಆದರೆ, ವಿಶ್ವವಿದ್ಯಾನಿಲಯವು ಈ ಬಗ್ಗೆ  ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News