ಪರೀಕ್ಷಾ ಪ್ರಕ್ರಿಯೆಯ ಅತ್ಯುನ್ನತ ಮಟ್ಟದ ಪಾರದರ್ಶಕತೆ ಮತ್ತು ಪಾವಿತ್ರ್ಯತೆಯನ್ನು ಖಚಿತಪಡಿಸಿಕೊಳ್ಳಲು ಜೂನ್ 2024 ರ ಪರೀಕ್ಷೆಯನ್ನು ರದ್ದುಗೊಳಿಸುವುದಾಗಿ ಘೋಷಿಸುತ್ತಿದೆ ಮತ್ತು ಅದನ್ನು ನಂತರ ಹಂಚಿಕೊಳ್ಳಲಾಗುವ ದಿನಾಂಕದಂದು ಹೊಸದಾಗಿ ನಡೆಸಲಾಗುವುದು ಎಂದು ಸಚಿವಾಲಯ ಹೇಳಿದೆ.
Neet : ಮೇ 5 ರಂದು ನಡೆದ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದವು ಎಂಬ ವದಂತಿಗಳು ಕೇಳಿ ಬಂದಿದ್ದು, ಇದೀಗ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಯಾಗಿರುವುದು ಸುಳ್ಳು , ಆಧಾರ ರಹಿತವಾದ ವದಂತಿಗಳು ಹಬ್ಬಿವೆಂದು ಸ್ಪಷ್ಟನೆ ನೀಡಿದೆ.
ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟಗಳಲ್ಲಿ ಒಂದಾಗಿರುವ SSLC ಪರೀಕ್ಷೆಗಳು ಇಂದಿನಿಂದ ಆರಂಭವಾಗಲಿದೆ. ಇಂದಿನಿಂದ ಏ.6ರರೆಗೂ SSLC ಪರೀಕ್ಷೆಗಳು ನಡೆಯಲಿವೆ. ಒಟ್ಟು 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ರಾಜ್ಯಾದ್ಯಂತ ಒಟ್ಟು 2,750 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ದ್ವಿತೀಯ ಪಿಯುಸಿಯಂತೆ SSLCಯಲ್ಲೂ ಈ ಬಾರಿ ಮೂರು ಬಾರಿ ಪರೀಕ್ಷೆ ಬರೆಯೋದಕ್ಕೆ ಅವಕಾಶ ಇದ್ದು, ಉತ್ತಮ ಫಲಿತಾಂಶ ಉಳಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ..
ಮುಂಜಾನೆ ತಾಳಿಕಟ್ಟಿಸಿಕೊಂಡ ನವವಿವಾಹಿತ ಪರೀಕ್ಷಾ ಕೊಠಡಿಗೆ ಬಂದು ಡಿಗ್ರಿ ಪರೀಕ್ಷೆ ಬರೆಯುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ. ಶಿವಮೊಗ್ಗ ಭರ್ಮಪ್ಪ ನಗರದ ಸತ್ಯವತಿ ಎಂಬ ಯುವತಿ ತನ್ನ ಪ್ರಿಯಕರನೊಂದಿಗೆ ಬೈಕ್ ನಲ್ಲಿ ಪರೀಕ್ಷಾ ಕೊಠಡಿಗೆ ಬಂದು ಪರೀಕ್ಷೆ ಬರೆದಿದ್ದಾಳೆ.
ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕರೆ ನೀಡಿದ್ದ ಕರ್ನಾಟಕ ಬಂದ್ ಕ್ಯಾನ್ಸಲ್ ಮಾಡಲಾಗಿದೆ. ಭ್ರಷ್ಟಾಚಾರ ವಿರೋಧಿಸಿ ಕಾಂಗ್ರೆಸ್ ಬೆಳಗ್ಗೆ 9 ರಿಂದ 11ಗಂಟೆಯವರೆಗೆ ಬಂದ್ ಕರೆ ನೀಡಿತ್ತು.
ಉತ್ತರಾಖಂಡ್ಗೆ ವಿಹಾರಕ್ಕೆ ತೆರಳಿದ್ದ ತನ್ನ ಪ್ರಿಯಕರನ ಪರವಾಗಿ ಯುವತಿ ಪರೀಕ್ಷೆಗೆ ಹಾಜರಾಗಿದ್ದಾಳೆ. ಡಮ್ಮಿ ಪರೀಕ್ಷಾರ್ಥಿಯಾಗಿ ಪರೀಕ್ಷೆಗೆ ಹಾಜರಾಗಿದ್ದ 24 ವರ್ಷದ ಯುವತಿ ಸಿಕ್ಕಿಬಿದ್ದಿದ್ದಾಳೆ .
ಯಾವುದೇ ಸಾಧನೆಗೆ ಗುರಿ ಎಂಬುದು ಬಹಳ ಮುಖ್ಯ. ಪರಿಸ್ಥಿತಿ ಎಂತಹದ್ದೇ ಆಗಿದ್ದರು ನಿರ್ದಿಷ್ಟ ಗುರಿಯತ್ತ ಗಮನಹರಿಸಬೇಕು ಎಂದು ಹೇಳುವುದನ್ನು ನಾವು ಕೇಳಿಯೇ ಇರುತ್ತೇವೆ. ಇದಕ್ಕೆ ಉತ್ತಮ ನಿದರ್ಶನ ಈ ವಿದ್ಯಾರ್ಥಿನಿ.
Economic Crisis: ಮುದ್ರಣ ಕಾಗದದ ಕೊರತೆಯಿಂದಾಗಿ ಭಾರತದ ನೆರೆಯ ದೇಶದಲ್ಲಿ ಲಕ್ಷಾಂತರ ಮಕ್ಕಳು ಪರೀಕ್ಷೆಯನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ನಮ್ಮ ನೆರೆಯ ರಾಷ್ಟ್ರ ಶ್ರೀಲಂಕಾ ಅತ್ಯಂತ ತೀವ್ರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಮುದ್ರಣ ಕಾಗದದ ದೊಡ್ಡ ಕೊರತೆಯಿಂದಾಗಿ ಸರ್ಕಾರವು ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ.
ಬೆಂಗಳೂರು ವಿಶ್ವವಿದ್ಯಾಲಯ ಪ್ರಕಟಿಸಿರುವ ಬಿಕಾಂ 3ನೇ ಸೆಮಿಸ್ಟರ್ ಫಲಿತಾಂಶ (B.com Results) ಕಂಡು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. Travel Agency & Tour Operator ವಿಷಯಕ್ಕೆ ನಡೆದಿದ್ದ ಪರೀಕ್ಷೆಯಲ್ಲಿ ಬೆಂಗಳೂರು ವಿವಿಯಿಂದ ಬೇಕಾಬಿಟ್ಟಿ ಮೌಲ್ಯ ಮಾಪನ ನಡೆದಿದೆ.
ಶಿಕ್ಷಣ ನಿರ್ದೇಶನಾಲಯ ಹೊರಡಿಸಿದ ಮಾರ್ಗಸೂಚಿಗಳು ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ 2020-21ರ ಬೋಧನಾ ಅಧಿವೇಶನಕ್ಕೆ ಪರಿಣಾಮಕಾರಿಯಾಗಿರುತ್ತವೆ. ಈ ಬೋಧನಾ ಅಧಿವೇಶನದಲ್ಲಿ ಕೋವಿಡ್ -19 (Covid-19) ರ ಕಾರಣದಿಂದಾಗಿ, ಶಾಲೆಗಳು ದೀರ್ಘಕಾಲ ಮುಚ್ಚಲ್ಪಟ್ಟವು ಮತ್ತು ಎಲ್ಲಾ ಕಲಿಕೆಗೆ ಸಂಬಂಧಿಸಿದ ಚಟುವಟಿಕೆಗಳು ಆನ್ಲೈನ್ನಲ್ಲಿತ್ತು.
ಕರೋನವೈರಸ್ ಸಾಂಕ್ರಾಮಿಕದ ಮಧ್ಯೆ ಪರೀಕ್ಷೆಗಳನ್ನು ನಡೆಸಲು ಕೇಂದ್ರ ಆರೋಗ್ಯ ಸಚಿವಾಲಯವು ಹೊಸ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (ಸೋಪಿ) ಅನ್ನು ಗುರುವಾರ ಬಿಡುಗಡೆ ಮಾಡಿದೆ, ಇದು ಮುನ್ನೆಚ್ಚರಿಕೆ ಕ್ರಮಗಳನ್ನು ಒಳಗೊಂಡಿರುತ್ತದೆ.
ಕಾಲೇಜುಗಳಲ್ಲಿ ಶೈಕ್ಷಣಿಕ ವರ್ಷದ ಪಾಠ ಪ್ರವಚನಗಳು ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಪರೀಕ್ಷೆ ಯಾವಾಗ, ಹೇಗೆ ನಡೆಸಬೇಕು ಎಂಬ ಬಗ್ಗೆ ಕುಲಪತಿಗಳ ಸಲಹೆ ಕೇಳಲಾಗಿದೆ. ಆನ್ಲೈನ್ ಮೂಲಕ ಪಾಠ ಪೂರ್ಣಗೊಳಿಸಿ ಪರೀಕ್ಷೆ ನಡೆಸಬೇಕೇ ಅಥವಾ ತರಗತಿಗಳು ಆರಂಭವಾದ ನಂತರ ತಡವಾಗಿ ಪರೀಕ್ಷೆ ನಡೆಬೇಕೇ ಎಂಬ ಬಗ್ಗೆ ಮಾಹಿತಿ ಕೋರಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.