ಚಾಮರಾಜನಗರ : ನನ್ನ ಕ್ಷೇತ್ರದ ಜನರು 4 ವರ್ಷ 10 ತಿಂಗಳು ನೆಮ್ಮದಿಯಿಂದ ಇದ್ದರು, ಈಗ ಅಪ್ಪ-ಮಕ್ಕಳು ತರ್ಕೆಗಳು ರೌಡಿಸಂ ಮಾಡಿಸೊದೆ ಅವರ ಕೆಲಸ, ನಾನು ಹೋಗಿ ನೋಡ್ತೀನಿ ಎಂದು ಲೇಔಟ್ ಕೃಷ್ಣಪ್ಪ ಹಾಗೂ ಪ್ರಿಯಕೃಷ್ಣ ವಿರುದ್ಧ ಸಚಿವ ಸೋಮಣ್ಣ ಕಿಡಿಕಾರಿದರು.
ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ನನ್ನ ಕ್ಷೇತ್ರದ ಜನರು 4 ವರ್ಷ 10 ತಿಂಗಳು ನೆಮ್ಮದಿಯಿಂದ ಇದ್ದರು, ಈಗ ಅಪ್ಪ-ಮಕ್ಕಳು ತರ್ಲೆಗಳು ರೌಡಿಸಂ ಮಾಡಿಸೊದೆ ಅವರ ಕೆಲಸ, ನಾನು ಹೋಗಿ ನೋಡ್ತೀನಿ, ಯಾರಿಗೆ ಹೇಳಬೇಕು ಅವರಿಗೆ ಹೇಳ್ತೀನಿ, ಬೆಂಗಳೂರಿನ ಜನರು ಸೂಕ್ಷ್ಕ ಜನರು ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ಇದನ್ನೂ ಓದಿ: KSRTC Employees Strike : ನಾವು ಮುಷ್ಕರ ವಾಪಾಸ್ ಪಡೆದಿಲ್ಲ, ಸರ್ಕಾರದ ನಡೆ ತೃಪ್ತಿತಂದಿಲ್ಲ : ಅನಂತ ಸುಬ್ಬರಾವ್
ಚಾಮರಾಜನಗರದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಪಕ್ಷದ ತೀರ್ಮಾನಕ್ಕೆ ಬದ್ಧ, ಇಂಥ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲು ಎಂದು ಸೂಚಿಸಿದರೇ ನಿಲ್ಲುತ್ತೇನೆ, ನಿನಗೆ 72 ಆಯ್ತು ಬೇಡ ಎಂದರೆ ನಿಲ್ಲಲ್ಲ, ಚಾಮರಾಜನಗರಕ್ಕೂ ನನಗೂ 50 ವರ್ಷದ ಸಂಬಂಧವಿದೆ ಎಲ್ಲವೂ ಪಕ್ಷಕ್ಕೆ ಬಿಟ್ಟದ್ದು ಎಂದರು.
ಕಾರ್ಯಕ್ರಮದಲ್ಲಿ ಬಿ.ಎಸ್.ಯಡಿಯೂರಪ್ಪ ಗೈರಾದ ಪ್ರಶ್ನೆ ಬಗ್ಗೆ ಗರಂ ಆದ ಸೋಮಣ್ಣ, ಸಿಎಂ ಬಂದಿದ್ದು ತೃಪ್ತಿ ಆಗಲಿಲ್ಲವಾ..!?, ಮಹೇಶ್ ಬಂದಿದ್ದು, ಸೋಮಣ್ಣ ಬಂದಿದ್ದು ಸಮಾಧಾನ ಆಗಲಿಲ್ಲವಾ?? ಬರುವುದು ಬಿಡುವುದು ಸಮಯದ ತೊಡಕಿನಿಂದ ಅದಕ್ಕೆ ಉಪ್ಪುಕಾರ ನೀವು ಹಾಕಬೇಡಿ ಎಂದರು. ಇದೇ ವೇಳೆ, ನಾನು ಯಾರನ್ನು ಹೊಗಳುವುದು ಇಲ್ಲಾ- ತೆಗಳುವುದು ಇಲ್ಲಾ ಎಂದು ಮಾರ್ಮಿಕವಾಗಿ ನುಡಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.