ಬೆಂಗಳೂರು: ಬಿಜೆಪಿ ಮತ್ತು ಆರೆಸ್ಸೆಸ್ಗಳೆರಡು ಭಯೋತ್ಪಾದಕ ಸಂಘಟನೆಗಳು ಎಂದು ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಆ ಹೇಳಿಕೆಯ ಹಿನ್ನಲೆಗೆ ಸ್ಪಷ್ಟನೆ ನೀಡಿದ್ದಾರೆ.
ಪತ್ರಕರ್ತರೊಂದಿಗೆ ಮಲೆಮಹದೇಶ್ವರ ಬೆಟ್ಟದಲ್ಲಿ ಮಾತನಾಡುತ್ತಾ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ "ನಾನು ಹೇಳಿದ್ದು ಆರೆಸ್ಸೆಸ್ ಮತ್ತು ಬಿಜೆಪಿ ಎರಡು ರಾಜಕೀಯ ಲಾಭಕ್ಕಾಗಿ ಹಿಂದೂ ಭಯೋತ್ಪಾದನೆ ಹರಡುತ್ತಿದೆ. ಯಾರು ದ್ವೇಷ ಮತ್ತು ಹಿಂಸೆಗೆ ಪ್ರಚೋದನೆ ನಿಡುತ್ತಾರೋ ಅವರೆಲ್ಲರು ಭಯೋತ್ಪಾದಕರು "ಎಂದರು.
ಇದೆ ಸಂದರ್ಭದಲ್ಲಿ ರಾಜ್ಯದಲ್ಲಿ ಆರೆಸ್ಸಸ್ ಸಂಘಟನೆಯನ್ನು ನಿಷೇದ ಮಾಡುವುಯಕ್ಕೆ ಪ್ರತಿಕ್ರಯಿಸಿರುವ ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಪಿಎಫ್ಐ,ಎಸ್ಡಿಪಿಐ ಮತ್ತು ಭಜರಂಗ ದಳ ಸಂಘಟನೆಗಳನ್ನು ನಿಷೇದ ಮಾಡುವುದು ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ ಅವರಿಗೆ ಈ ಕುರಿತಾದ ವಿಷಯಕ್ಕೆ ಸಂಬಂಧಿಸಿದಂತೆ ಯಾವುದಾದರು ಮಾಹಿತಿ ಇದ್ದರೆ ಯಾವುದೇ ಸಂಘಟನೆಯನ್ನು ನಿಷೇಧ ಮಾಡಬಹುದು ಎಂದು ತಿಳಿಸಿದ್ದಾರೆ.
ಇನ್ನು ಮುಂದುವರೆದು ನಾವು ಹಿಂದೂ ಫಾಸ್ಸಿಸ್ಟ್ ಸಿದ್ದಾಂತವನ್ನು ವಿರೋಧಿಸುತ್ತೇವೆ ಎಂದ ತಕ್ಷಣ ನಾವು ಹಿಂದುವಲ್ಲ ಅಂತ ಅಲ್ಲ, ನಾವು ನಿಜವಾಗಿ ಬಿಜೆಪಿ ಆರೆಸ್ಸಿಸಿಗಿಂತ ಹೆಚ್ಚಿನ ಹಿಂದೂಗಳು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮಾತನಾಡಿ ಬಿಜೆಪಿ ಮತ್ತು ಆರೆಸ್ಸಸ್ ಸಂಘಟನೆಗಳುಜನರನ್ನು ಒಡೆಯುವ ಕೆಲಸ ಮಾಡುತ್ತಿವೆ. ಆದ್ದರಿಂದ ಯಾವುದೇ ಸಂಘಟನೆಯಾಗಿದ್ದರು ಅಂತಹ ಕೋಮು ಆಧಾರಿತ ಸಂಗತಿಗಳನ್ನು ಸಹಿಸುವುದಿಲ್ಲ ಎಂದು ತಿಳಿಸಿದರು.