ಕರ್ನಾಟಕದಾದ್ಯಂತ ತೀವ್ರ ಸದ್ದು ಮಾಡುತ್ತಿರುವ ವಕ್ಫ್ ಬೋರ್ಡ್ ಆಸ್ತಿ ವಿಚಾರ ಇದೀಗ ಜಿಲ್ಲೆ ಜಿಲ್ಲೆಗೂ ಹಬ್ಬುತ್ತಿದೆ. ವಿಜಯಪುರ, ಧಾರವಾಡ, ಗದಗ ಬಳಿಕ ಇಂದೂ ಮಂಡ್ಯ ಬೆಳಗಾವಿ, ಕಲಬುರಗಿಯಲ್ಲೂ ವಕ್ಫ್ ಸದ್ದು ಮಾಡಿದೆ. ನೊಟೀಸ್ ನೋಡಿದ ರೈತರು ಸಿಡಿದೆದ್ದಿದ್ದು ಪ್ರತಿಭಟನೆಗೆ ಮುಂದಾಗಿದ್ದಾರೆ.. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ
ಹಾವೇರಿ ಜಿಲ್ಲೆಗೂ ತಟ್ಟಿದ ವಕ್ಫ್ ಆಸ್ತಿ ವಿವಾದದ ಬಿಸಿ
ಸವಣೂರಿನ ಕಡಕೋಳ ಗ್ರಾಮದಲ್ಲಿ ಕಲ್ಲು ತೂರಾಟ
ವಕ್ಫ್ ಬೋರ್ಡ್ ಹೆಸರಲ್ಲಿ ಖಾತೆ ಇಂದೀಕರಣಕ್ಕೆ ವಿರೋಧ
ವಾಸವಿದ್ಧ ಮನೆಗಳನ್ನ ಖಾಲಿ ಮಾಡಿಸಬಹುದೆಂಬ ಆತಂಕ
ಮುಸ್ಲಿಂ ಸಮುದಾಯ ಮನೆಗಳ ಮೇಲೆ ಕಲ್ಲು ತೂರಾಟ
ವಕ್ಫ್ ಹೆಸರು ಸೇರಿಸಿ ಮನೆ ಖಾಲಿ ಮಾಡಿಸೋ ಆತಂಕದಲ್ಲಿ ಗಲಾಟೆ
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸಮರ ಸಾರಿದೆ.. ವಕ್ಫ್ ಜಮೀನು ಅಂತಾ ರೈತರಿಗೆ ನೀಡಿರೋ ನೋಟಿಸ್ ವಾಪಸ್ಗೆ ಬಿಜೆಪಿ ಆಗ್ರಹಿಸಿದ್ದು, ನವೆಂಬರ್ 4ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿದೆ.. ಈ ಮಧ್ಯೆ ವಕ್ಫ್ ವಿಚಾರದಲ್ಲಿ ರಾಜಕೀಯ ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರಿದೆ..
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೂನ್ 11 ರಂದು ಬಂಧನಕ್ಕೆ ಒಳಗಾಗಿದ್ದ ನಟ ದರ್ಶನ್ ಸುಮಾರು ಐದು ತಿಂಗಳಗಳ ಕಾಲ ಜೈಲಿನ ಕಂಬಿ ಎಣಿಸಿದ್ರು. ಇದೀಗ ಕೊನೆಗೂ ದೀಪಾವಳಿಗೆ ನಟ ದರ್ಶನ್ಗೆ ಸಿಹಿ ದೊರೆತಿದೆ. ಕರ್ನಾಟಕ ರಾಜ್ಯ ಹೈಕೋರ್ಟ್ ದರ್ಶನ್ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದು, ಅವರ ಅಭಿಮಾನಿಗಳಿಗೆ ಸಂತಸಕ್ಕೆ ಪಾರವೆ ಇಲ್ಲದಂತಾಗಿದೆ. ಈ ಕುರಿತು ಒಂದು ವರಿದಿ ಇಲ್ಲಿದೆ.....!
ಆರೋಪಿ ದರ್ಶನ್ಗೆ 6 ವಾರ ಮಧ್ಯಂತರ ಜಾಮೀನು
ನಿನ್ನೆರಾತ್ರಿ ಬಳ್ಳಾರಿಯಿಂದ ಬೆಂಗಳೂರಿಗೆ ಬಂದ ದರ್ಶನ್
ಪತ್ನಿ ವಿಜಯಲಕ್ಷ್ಮಿ ನಿವಾಸದಲ್ಲಿರೋ ಆರೋಪಿ ದರ್ಶನ್
ಹೊಸಕೆರೆಹಳ್ಳಿ ಅಪಾರ್ಟ್ಮೆಂಟ್ಗೆ ಆಗಮಿಸಿದ ದರ್ಶನ್
ದರ್ಶನ್ ಬರ್ತಿದ್ದಂತೆ ಮನೆ ಮುಂದೆ ಅಭಿಮಾನಿಗಳ ಗಲಾಟೆ
ನಟ ದರ್ಶನ್ ನೋಡಲು ಜಮಾಯಿಸಿದ ಅಭಿಮಾನಿಗಳು
ರಸ್ತೆಯುದ್ಧಕ್ಕೂ ದರ್ಶನ್ ಅಭಿಮಾನಿಗಳ ಜೈಕಾರ
ಇಂದು ಚಿಕಿತ್ಸೆಗೆಗಾಗಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ
140 ದಿನ ಕಾಲ ಜೈಲು ವಾಸ ಅನುಭವಿಸಿದ್ದ ಕಾಟೇರನಿಗೆ ಇದೀಗ ಬಿಗ್ ರಿಲೀಫ್ ಸಿಕ್ಕಂತಾಗಿದೆ,ಚಿಕಿತ್ಸೆ ಹಿನ್ನಲೆ ನ್ಯಾಯಾಲಯದಿಂದ ಷರತ್ತು ಬದ್ದ ಮಧ್ಯಂತರ ಜಾಮೀನು ಮಂಜೂರಾಗಿದೆ..ಇತ್ತ ದರ್ಶನ್ ಗೆ ಜಾಮೀನು ಮಂಜೂರಾಗ್ತ ಇದ್ದಂತೆ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ....
ದರ್ಶನ್ಗೆ ಮಧ್ಯಂತರ ಜಾಮೀನು ಮಂಜೂರು ಹಿನ್ನೆಲೆ
ಇದು ನ್ಯಾಯಾಂಗದ ವಿಚಾರ, ಈ ಕುರಿತು ಪ್ರತಿಕ್ರಿಯೆ ನೀಡಲ್ಲ
ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಅನ್ನೋದೆ ನಮ್ಮ ಆಗ್ರಹ
ನಮ್ಮ ಮಗನ ಆತ್ಮಕ್ಕೆ ಶಾಂತಿ ಸಿಗಲಿ ಎಂಬುದು ನಮ್ಮ ಉದ್ದೇಶ
ಸರ್ಕಾರ, ನ್ಯಾಯಾಂಗದ ಬಗ್ಗೆ ನಮಗೆ ನಂಬಿಕೆಯಿದೆ
ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ತಂದೆ ಕಾಶೀನಾಥ ಶಿವನಗೌಡ್ರ ಹೇಳಿಕೆ
ವಕ್ಫ್ ಆಸ್ತಿಗಳಿಂದ ಸಂಗ್ರಹವಾಗುವ ಆದಾಯವನ್ನು ಧಾರ್ಮಿಕ ಚಟುವಟಿಕೆಗಳಿಗೆ, ಬಡವರಿಗೆ ಸಹಾಯ ಮಾಡಲು, ಮುಸ್ಲಿಂ ಮಕ್ಕಳಿಗೆ ಶಿಕ್ಷಣ ಕೊಡಿಸಲು ಬಳಕೆಯಾಗುತ್ತದೆ. ಇದೇ ರೀತಿಯ ಕೆಲಸಗಳನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ನಿಯಂತ್ರಣದಲ್ಲಿ ಹಿಂದೂ ದೇವಾಲಯಗಳೂ ಮಾಡುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.