ಬೆಂಗಳೂರು : ಜ್ಯೋತಿಷ್ಯದ (Astrology) ಪ್ರಕಾರ ಮನುಷ್ಯ ಜನಿಸಿದ ಸಮಯಕ್ಕೆ (Birth time) ಸರಿಯಾಗಿ ಸಾಕಷ್ಟು ಉತ್ತಮ ಯೋಗ ಹಾಗೂ ಕೆಟ್ಟ ಯೋಗಗಳು ಪ್ರಾಪ್ತವಾಗುತ್ತದೆ. ಅವು ನಮ್ಮ ಜಾತಕ ಸ್ಥಾನದಲ್ಲಿರುವ ಗ್ರಹಗಳ ಸ್ಥಾನ ಹಾಗೂ ಚಲನೆಯಿಂದಲೂ ನಿರ್ಧರಿತವಾಗುತ್ತವೆ. ಉತ್ತಮ ಯೋಗಬಲವಿದ್ದರೆ ವ್ಯಕ್ತಿಗೆ ಉತ್ತಮ ಫಲಗಳು ಲಭ್ಯವಾಗುತ್ತದೆ.
ಏನಿದು ಗಜಕೇಸರಿ ಯೋಗ..?
ನೀವು ಗಮನಿಸಿರಬಹುದು. ಏನೂ ಇಲ್ಲದ ವ್ಯಕ್ತಿ ಏಕಾಏಕಿ ಶ್ರೀಮಂತ ಆಗಿ ಬಿಡುತ್ತಾನೆ. ಏನೂ ಇಲ್ಲದೇ ಹೋದಾಗ, ಒಮ್ಮೆಲೆ ಧನ, ಕನಕ, ವಾಹನ, ಆಸ್ತಿ ಸಂಪಾದನೆಯಾಗಿ ಬಿಡುತ್ತದೆ. ಅದಕ್ಕೆ ಕಾರಣ ಗಜಕೇಸರೀ ಯೋಗ (Gajakesari Yoga). ಈ ಯೋಗ ಬಂದಾಗ ದಿಢೀರ್ ಸಂಪತ್ತು (Wealth), ಕೀರ್ತಿ (fame)ಕೂಡಿ ಬರುತ್ತದೆ.
ಇದೊಂದು ಅದೃಷ್ಟದಾಯಕವಾದ ಯೋಗ. ಗಜಕೇಸರಿ ಯೋಗವು ಅತ್ಯಂತ ಶಕ್ತಿಶಾಲಿ ಮತ್ತು ಪ್ರಶಂಸನೀಯ ಯೋಗ ಎಂದು ಪರಿಗಣಿಸಲಾಗಿದೆ. ಚಂದ್ರನ ಕೇಂದ್ರ ಸ್ಥಾನದಲ್ಲಿ ಗುರುವು ಆಕ್ರಮಿಸಿಕೊಂಡಾಗ ಗಜಕೇಸರಿ ಯೋಗವು ಪ್ರಾಪ್ತವಾಗುತ್ತದೆ.
ಇದನ್ನೂ ಓದಿ : Vastu Tips: ವ್ಯಾಲೆಟ್ ನಲ್ಲಿ ಈ ವಸ್ತುಗಳನ್ನು ಎಂದಿಗೂ ಇಡಬೇಡಿ, ಆರ್ಥಿಕ ಪ್ರಗತಿ ನಿಂತುಹೋಗುತ್ತದೆ
ಗುರು ಸಮೃದ್ದಿಯ ಗ್ರಹ :
ಗುರುವು ಅಪಾರ ಸಮೃದ್ಧಿಯ ಗ್ರಹ. ಜಾತಕದಲ್ಲಿ ಗುರು ಬಲದ ಯೋಗ ಉತ್ತಮವಾಗಿರುವಾಗ, ಅಂತವರಿಗೆ ಭೌತಿಕ ಸಂಪತ್ತು ಮತ್ತು ಆಧ್ಯಾತ್ಮಿಕ ಬುದ್ದಿವಂತಿಕೆ ಸಮೃದ್ದವಾಗಿ ಸಿಗುತ್ತದೆ. ಗುರು ಗ್ರಹವು ಸಂಪತ್ತು, ಸಂತಾನ ಮತ್ತು ಸಂತೋಷವನ್ನು ಸೂಚಿಸುತ್ತದೆ. ಚಂದ್ರನು (Moon) ದಯೆ, ಸಂತೋಷ, ಮತ್ತು ಸಮೃದ್ಧಿ ಸಂಕೇತ . ಈ ಎರಡೂ ಗ್ರಹಗಳು ಸೇರಿದಾಗ ಗಜಕೇಸರೀ ಯೋಗವು ರೂಪುಗೊಳ್ಳುತ್ತದೆ. ಈ ಯೋಗವು ಬಲಗೊಳ್ಳಬೇಕು ಎಂದರೆ ಚಂದ್ರನು ಕೇಂದ್ರದ ಮನೆಯಲ್ಲಿ ಇರಬೇಕು. ಆಗ ಗುರುವು ಆ ಮನೆಯನ್ನು ಆಕ್ರಮಿಸಿದರೆ ಗಜಕೇಸರಿ (Gajakesari Yoga) ಯೋಗ ಉಂಟಾಗುವುದು. ಅದೇ ಚಂದ್ರನು ಕೇಂದ್ರದಲ್ಲಿ ಇದ್ದು, ಗುರುವು (Jupiter) ಶತ್ರು ಮನೆಯಲ್ಲಿ ಇದ್ದರೆ ಯೋಗವು ಅಶುಭವನ್ನು ಸೂಚಿಸುತ್ತದೆ
ಗಜಕೇಸರಿ ಯೋಗ ಅತ್ಯಂತ ಶುಭಕರ :
ಈ ಯೋಗವು ವ್ಯಕ್ತಿಗೆ ಅತ್ಯಂತ ಶುಭಕರವಾದ ಯೋಗ. ಇದು ವ್ಯಕ್ತಿಯ ಜೀವನದಲ್ಲಿ ತೀಕ್ಷ್ಣವಾದ ಬೌದ್ಧಿಕ ಸಾಮರ್ಥ್ಯ ಮತ್ತು ಅಪಾರ ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುವುದು. ಈ ಯೋಗ ಹೊಂದಿರುವ ವ್ಯಕ್ತಿಗಳು ತನ್ನ ಸುತ್ತಲಿನ ಜನರಿಂದ ಅಪಾರವಾದ ಪ್ರೀತಿ ಹಾಗೂ ಗೌರವವನ್ನು ಪಡೆದುಕೊಳ್ಳುತ್ತಾರೆ ಎನ್ನುವ ನಂಬಿಕೆಯಿದೆ.
ಇದನ್ನೂ ಓದಿ : Religious Beliefs: ದೇವಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಗುರುವಾರ ಈ ಕೆಲಸ ತಪ್ಪದೆ ಮಾಡಿ
ಜನ್ಮ ಕುಂಡಲಿಯಲ್ಲಿ ಗುರು ಹಾಗೂ ಚಂದ್ರನ ಸ್ಥಾನ ಅನುಕೂಲಕರವಾಗಿ ಅಥವಾ ಫಲದಾಯಕ ರೀತಿಯಲ್ಲಿ ಇವೆಯಾ ಎನ್ನುವುದನ್ನು ಪರಿಗಣಿಸಬೇಕು. ಉತ್ತಮ ಸ್ಥಾನ ಹಾಗೂ ಪ್ರಭಾವವನ್ನು ಬೀರುವ ಮನೆಯಲ್ಲಿ ಇದ್ದರೆ ವ್ಯಕ್ತಿ ಗಜಕೇಸರಿ ಯೋಗದ ಸಂಪೂರ್ಣ ಬಲ ಮತ್ತು ಲಾಭವನ್ನು ಪಡೆದುಕೊಳ್ಳುವನು. ಅಂತಹ ವ್ಯಕ್ತಿಗಳು ಜೀವನದಲ್ಲಿ ಹೇರಳವಾದ ಸಂಪತ್ತು ಮತ್ತು ಖ್ಯಾತಿಯನ್ನು ಪಡೆದುಕೊಳ್ಳುವರು.
ಎಲ್ಲಾ ಸಮಯದಲ್ಲಿ ಇದು ಪರಿಣಾಮಕಾರಿ ಅಲ್ಲ..!
ದೆಸೆಯ ಸಮಯದಲ್ಲಿ ಈ ಯೋಗವು ಹೆಚ್ಚು ಪರಿಣಾಮ ಬೀರುವುದು. ಗುರು ಮತ್ತು ಚಂದ್ರ ದೆಸೆಯಲ್ಲಿ ಹೆಚ್ಚು ಪ್ರಭಾವವನ್ನು ಬೀರುವುದು. ದೆಸೆಯ ಪ್ರಭಾವ ಉತ್ತಮವಾಗಿಲ್ಲದೆ ಇದ್ದರೂ ಯೋಗದಿಂದ ಯಾವುದೇ ಧನಾತ್ಮಕ ಫಲವನ್ನು ಪಡೆದುಕೊಳ್ಳಲು ಸಧ್ಯವಾಗದು. ಕರ್ಕ ರಾಶಿಯಲ್ಲಿ (Cancer) ಗುರು, ಮಂಗಳ, ಚಂದ್ರನ ವಾಸವಿದ್ದು, ಗಜಕೇಸರಿ ಯೋಗವಿದ್ದರೆ ವ್ಯಕ್ತಿ ಸಾಮಾನ್ಯವಾಗಿ ದೈವ ಆಶೀರ್ವಾದದಿಂದ ಸಾಕಷ್ಟು ಶ್ರೀಮಂತರಾಗಿ ಬೆಳೆಯುತ್ತಾರೆ. ಅವರ ಶ್ರೀಮಂತಿಕೆ ಹಾಗೂ ಸಮೃದ್ಧಿಗೆ ಯಾವುದೇ ಪಾರವಿರುವುದಿಲ್ಲ..
ಇದನ್ನೂ ಓದಿ : ವಿಸ್ಮಯ..! ಪಾರ್ವತಿ, ಪರಮೇಶ್ವರರ ಕಲ್ಯಾಣ ನಡೆದ ಈ ಪವಿತ್ರ ನೆಲದಲ್ಲಿ ಈಗಲೂ ಉರಿಯುತ್ತಿದೆ ಹವನಕುಂಡ.!
ನೆನಪಿರಲಿ, ಈ ಯೋಗ ತುಂಬಾ ದಿನವೂ ಇರೋದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
Android Link - https://bit.ly/3hDyh4G
Apple Link - https://apple.co/3hEw2hy