peony flowers: ಶೀಘ್ರ ಕಂಕಣ ಭಾಗ್ಯ ಕೂಡಿಬರಲು ಮನೆ ಈ ದಿಕ್ಕಿನಲ್ಲಿ ಈ ಹೂವಿನ ಗಿಡ ನೆಡಿ

ಮನೆಯಲ್ಲಿ ಗಿಡಗಳನ್ನು ನೆಡುವುದು ಆರೋಗ್ಯಕ್ಕೆ ಮತ್ತು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ಅದರಲ್ಲೂ ಕೆಲ ಗಿಡಗಳು ಜಾತಕಕ್ಕೆ ಮತ್ತು ಮನೆಯ ವಾಸ್ತುವಿಗೆ ಸಂಬಂಧಿಸಿದ್ದಾಗಿದೆ. ಇನ್ನು ಮದುವೆಗಳು ನಡೆಯುವುದಕ್ಕೆ ಅಡೆತಡೆ ಉಂಟಾದರೆ ಮನೆಯ ಮುಂಭಾಗದಲ್ಲಿ ಪಿಯೋನಿಯಾ ಎಂಬ ಗಿಡವನ್ನು ನೆಟ್ಟು ನೋಡಿ. ಇದು ವಿವಾಹದ ಅಡೆತಡೆಯನ್ನು ತೆಗೆದುಹಾಕುತ್ತೆ

Written by - Bhavishya Shetty | Last Updated : Sep 24, 2022, 07:23 PM IST
    • ಮನೆಯಲ್ಲಿ ಗಿಡಗಳನ್ನು ನೆಡುವುದು ಆರೋಗ್ಯಕ್ಕೆ ಮತ್ತು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ
    • ಕೆಲ ಗಿಡಗಳು ಜಾತಕಕ್ಕೆ ಮತ್ತು ಮನೆಯ ವಾಸ್ತುವಿಗೆ ಸಂಬಂಧಿಸಿದ್ದಾಗಿದೆ
    • ಮನೆಯಲ್ಲಿ ಪಿಯೋನಿಯಾ ಹೂವಿನ ಗಿಡ ನೆಟ್ಟರೆ ಶೀಘ್ರ ಪರಿಹಾರವನ್ನು ಸಿಗುತ್ತದೆ
peony flowers: ಶೀಘ್ರ ಕಂಕಣ ಭಾಗ್ಯ ಕೂಡಿಬರಲು ಮನೆ ಈ ದಿಕ್ಕಿನಲ್ಲಿ ಈ ಹೂವಿನ ಗಿಡ ನೆಡಿ title=
peony Flower

ಪ್ರಕೃತಿ ಎಂದರೆ ನೆಮ್ಮದಿ ಅಂತಾ ಅನೇಕರು ಹೇಳುತ್ತಾರೆ. ಈ ಮಾತು ನಿಜ. ಏಕೆಂದರೆ ಹಿಂದೂ ಪುರಾಣದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಉಲ್ಲೇಖಗಳನ್ನು ನೀಡಲಾಗಿದೆ. ಹಿಂದೂಗಳ ಮನೆ ಮುಂದೆ ತುಳಸಿ ಗಿಡಗಳನ್ನು ನೆಡಲಾಗುತ್ತದೆ. ಇದು ಸಮೃದ್ಧಿಯ ಸಂಕೇತವಾಗಿದೆ. ಅದೇ ರೀತಿ ಕಂಕಣ ಕೂಡಿ ಬರಲೆಂದು ಒಂದು ಗಿಡವನ್ನು ಮನೆಯ ಮುಂದೆ ನೆಡಬೇಕು ಎಂದು ಕೆಲ ಉಲ್ಲೇಖಗಳು ತಿಳಿಸುತ್ತವೆ. 

ಇದನ್ನೂ ಓದಿ: UPA ಸರ್ಕಾರದ ಅವಧಿಯಲ್ಲಿ ಭಾರತದ ಆರ್ಥಿಕತೆಗೆ ಬ್ರೇಕ್ ಬಿದ್ದಿತ್ತು, ನಾರಾಯಣ್ ಮೂರ್ತಿ ಹೇಳಿದ್ದೇನು?

ಮನೆಯಲ್ಲಿ ಗಿಡಗಳನ್ನು ನೆಡುವುದು ಆರೋಗ್ಯಕ್ಕೆ ಮತ್ತು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ಅದರಲ್ಲೂ ಕೆಲ ಗಿಡಗಳು ಜಾತಕಕ್ಕೆ ಮತ್ತು ಮನೆಯ ವಾಸ್ತುವಿಗೆ ಸಂಬಂಧಿಸಿದ್ದಾಗಿದೆ. ಇನ್ನು ಮದುವೆಗಳು ನಡೆಯುವುದಕ್ಕೆ ಅಡೆತಡೆ ಉಂಟಾದರೆ ಮನೆಯ ಮುಂಭಾಗದಲ್ಲಿ ಪಿಯೋನಿಯಾ ಎಂಬ ಗಿಡವನ್ನು ನೆಟ್ಟು ನೋಡಿ. ಇದು ವಿವಾಹದ ಅಡೆತಡೆಯನ್ನು ತೆಗೆದುಹಾಕುತ್ತೆ.

ಇನ್ನು ಪಿಯೋನಿಯಾ ಸಸ್ಯದ ಬಗ್ಗೆ ಹೇಳುವುದಾದರೆ ಇದು ನೋಡಲು ಗುಲಾಬಿ ಥರಹವೇ ಇದೆ. ಪಿಯೋನಿಯಾದ ಹೂವನ್ನು ಹೂವುಗಳ ರಾಣಿ ಎಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲದೆ, ಈ ಹೂವುಗಳನ್ನು ಸೌಂದರ್ಯ, ಪ್ರಣಯದ ಸಂಕೇತ ಎಂದು ಪರಿಗಣಿಸಲಾಗುತ್ತದೆ.  

ವಾಸ್ತು ಶಾಸ್ತ್ರದ ಪ್ರಕಾರ  ಕೆಲವು ಕಾರಣಗಳಿಂದಾಗಿ ಮದುವೆ ವಿನಾಕಾರಣ ಮುಂದೆ ಹೋಗುತ್ತಿರಬಹುದು. ಈ ಸಂದರ್ಭದಲ್ಲಿ ಮನೆಯಲ್ಲಿ ಪಿಯೋನಿಯಾ ಹೂವಿನ ಗಿಡ ನೆಡಬೇಕು. ಇದು ಸಮಸ್ಯೆಗಳಿಗೆ ಶೀಘ್ರ ಪರಿಹಾರವನ್ನು ನೀಡುತ್ತದೆ.

ಇನ್ನು ಕೆಲವೊಂದು ಬಾರಿ ವಾಸ್ತು ದೋಷಗಳಿಂದಾಗಿ ಮನೆಯ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಈ ಸಂದರ್ಭದಲ್ಲಿ ಪಿಯೋನಿಯಾ ಅಥವಾ ಅದರ ಫೋಟೋಗಳನ್ನು ಮನೆಯಲ್ಲಿ ಇರಿಸಿ. 

ಇನ್ನು ಈ ಸಸ್ಯವನ್ನು ನೈಋತ್ಯ ದಿಕ್ಕಿಗೆ ನೆಟ್ಟರೆ ಒಳ್ಳೆಯದು. ಕೆಲವೊಂದು ಬಾರಿ ಉಂಟಾಗುವ ದಿಕ್ಕಿನ ಸಮಸ್ಯೆಯೂ ಇದರಿಂದ ನಿವಾರಣೆಯಾಗುತ್ತದೆ 

ಇದನ್ನೂ ಓದಿ: Juice for Skin: ಒಂದು ವಾರದಲ್ಲಿ ಮುಖದ ಕಾಂತಿ ಹೆಚ್ಚಾಗುತ್ತೆ: ಈ ಜ್ಯೂಸ್ ಕುಡಿದು ನೋಡಿ

ಜಾತಕದ ದೋಷದಿಂದ ಹುಡುಗ ಅಥವಾ ಹುಡುಗಿಯ ಮದುವೆಯಲ್ಲಿ ವಿಳಂಬವಾದರೆ, ಡ್ರಾಯಿಂಗ್ ರೂಮಿನಲ್ಲಿ ಪಿಯೋನಿಯಾ ಹೂವಿನ ಗಿಡ ಅಥವಾ ಅದರ ವರ್ಣಚಿತ್ರವನ್ನು ಇರಿಸಿ. ಹೀಗೆ ಮಾಡಿದರೆ ಶೀಘ್ರವೇ ಮದುವೆ ಸಂಬಂಧ ಕೂಡಿಬರುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News