Calendar 2022: ಕ್ಯಾಲೆಂಡರ್ ವಿಚಾರದಲ್ಲಿ ನೀವೂ ಈ ತಪ್ಪನ್ನು ಮಾಡುತ್ತಿದ್ದೀರಾ? ಈಗಲೇ ಎಚ್ಚೆತ್ತುಕೊಳ್ಳಿ

Calendar 2022: ಮನೆಯಲ್ಲಿ ವರ್ಷ ಬದಲಾದಂತೆ ಕ್ಯಾಲೆಂಡರ್ ಕೂಡ ಬದಲಾಗುತ್ತಾ ಹೋಗುತ್ತದೆ. ಆದರೆ ಕ್ಯಾಲೆಂಡರ್ ಬದಲಾಯಿಸುವಾಗ ಕೆಲವು ವಿಷಯಗಳ ಬಗ್ಗೆ ನಾವು ಸಾಮಾನ್ಯವಾಗಿ ಗಮನಹರಿಸುವುದೇ ಇಲ್ಲ. ಆದರೆ, ಅಂತಹ ಕೆಲವು ವಿಷಯಗಳು ಕುಟುಂಬದಲ್ಲಿ ಹಲವು ಸಮಸ್ಯೆಗಳನ್ನು ಸೃಷ್ಟಿಸಬಹುದು ಎಂದು ಹೇಳಲಾಗುತ್ತದೆ.

Written by - Yashaswini V | Last Updated : Jan 6, 2022, 12:43 PM IST
  • ಕ್ಯಾಲೆಂಡರ್ ಇನ್ನೂ ಬದಲಾಗಿಲ್ಲವೇ, ಅದನ್ನು ಕೂಡಲೇ ಬದಲಾಯಿಸಿ
  • ಹಳೆಯ ಕ್ಯಾಲೆಂಡರ್ ಪ್ರಗತಿಯನ್ನು ನಿಲ್ಲಿಸುತ್ತದೆ
  • ಕ್ಯಾಲೆಂಡರ್ ಅನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿ
Calendar 2022: ಕ್ಯಾಲೆಂಡರ್ ವಿಚಾರದಲ್ಲಿ ನೀವೂ ಈ ತಪ್ಪನ್ನು ಮಾಡುತ್ತಿದ್ದೀರಾ? ಈಗಲೇ ಎಚ್ಚೆತ್ತುಕೊಳ್ಳಿ title=
Calendar Vastu

Calendar 2022: ವರ್ಷ ಬದಲಾದಂತೆ ಅನೇಕ ವಿಷಯಗಳು ಬದಲಾಗುತ್ತವೆ. ಅನೇಕ ಹೊಸ ನಿಯಮಗಳು ಮತ್ತು ನಿಬಂಧನೆಗಳು ಜಾರಿಗೆ ಬರುತ್ತವೆ. ಜನರು ತಮಗಾಗಿ ಹೊಸ ಗುರಿಗಳನ್ನು ಹಾಕಿಕೊಳ್ಳುತ್ತಾರೆ. ಇದಲ್ಲದೆ, ಪ್ರತಿ ಮನೆಯಲ್ಲಿಯೂ ಸಹ ಒಂದು ಪ್ರಮುಖ ಬದಲಾವಣೆ ಇರುತ್ತದೆ, ಅದು ಕ್ಯಾಲೆಂಡರ್ (Calendar). ವರ್ಷ ಬದಲಾಗುವುದರೊಂದಿಗೆ, ಕ್ಯಾಲೆಂಡರ್ ಅನ್ನು ಕೂಡ ತಕ್ಷಣವೇ ಬದಲಾಯಿಸಬೇಕು. ಇಂದು ನಾವು ಪ್ರಗತಿ ಮತ್ತು ಹಣಕ್ಕೆ ಸಂಬಂಧಿಸಿದ ವಾಸ್ತು ಶಾಸ್ತ್ರದಲ್ಲಿ (Vastu Shastra) ಉಲ್ಲೇಖಿಸಲಾದ ಕ್ಯಾಲೆಂಡರ್‌ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಕ್ಯಾಲೆಂಡರ್ ವಿಚಾರದಲ್ಲಿ ನೀವೂ ಈ ತಪ್ಪನ್ನು ಮಾಡುತ್ತಿದ್ದೀರಾ? ಈಗಲೇ ಎಚ್ಚೆತ್ತುಕೊಳ್ಳಿ: 
ಹೊಸ ವರ್ಷ ಬಂದ ತಕ್ಷಣ ಕ್ಯಾಲೆಂಡರ್ (Calendar) ಬದಲಿಸಿ. ಮನೆಯಲ್ಲಿ ಹಳೆಯ ಕ್ಯಾಲೆಂಡರ್ ಅನ್ನು ಹಾಕುವುದರಿಂದ ಪ್ರಗತಿಗೆ ಕುಂಟಿತವಾಗುತ್ತದೆ. ಆದ್ದರಿಂದ, ಹೊಸ ವರ್ಷದಲ್ಲಿ ಸುವರ್ಣ ಅವಕಾಶಗಳನ್ನು ಪಡೆಯಲು, ಹೊಸ ವರ್ಷ ಬರುತ್ತಿದ್ದಂತೆ ನಿಮ್ಮ ಮನೆಯಲ್ಲಿ ಹೊಸ ಕ್ಯಾಲೆಂಡರ್ ಅನ್ನು ಇರಿಸಿ ಮತ್ತು ಹಳೆಯದನ್ನು ತೆಗೆದುಹಾಕಿ.

ಇದನ್ನು ಓದಿ- Auspicious Plants: ಹಣಕಾಸಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಈ ಸಸ್ಯಗಳು, ಪಿತೃದೋಷದಿಂದಲೂ ಕೂಡ ಮುಕ್ತಿ ಸಿಗುತ್ತದೆ

ಕ್ಯಾಲೆಂಡರ್ ಅನ್ನು ಉತ್ತರ, ಪಶ್ಚಿಮ ಅಥವಾ ಪೂರ್ವ ಗೋಡೆಯ ಮೇಲೆ ಇರಿಸಿ. ಉತ್ತರ ದಿಕ್ಕು ಕುಬೇರನ ದಿಕ್ಕು. ಈ ದಿಕ್ಕಿನಲ್ಲಿ ಹೊಸ ಕ್ಯಾಲೆಂಡರ್ ಹಾಕುವುದರಿಂದ ನಿಮಗೆ ಸಂಪತ್ತು ಹೆಚ್ಚಾಗುತ್ತದೆ. ಮತ್ತೊಂದೆಡೆ, ಕ್ಯಾಲೆಂಡರ್ ಅನ್ನು ಪಶ್ಚಿಮ ದಿಕ್ಕಿನಲ್ಲಿ ಇರಿಸುವ ಮೂಲಕ, ಕೆಲಸವು ವೇಗವಾಗಿ ನಡೆಯುತ್ತದೆ. ವ್ಯಕ್ತಿಯ ಶಕ್ತಿಯು ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ. 

ದಕ್ಷಿಣ ದಿಕ್ಕಿಗೆ ಪಂಚಾಂಗವನ್ನು ಹಾಕುವುದು ಅನೇಕ ತೊಂದರೆಗಳನ್ನು ತರುತ್ತದೆ. ಇದು ಪ್ರಗತಿಯ ಹಾದಿಯಲ್ಲಿ ಅಡೆತಡೆಗಳನ್ನು ಉಂಟುಮಾಡುತ್ತದೆ. ವಾಸ್ತವವಾಗಿ, ದಕ್ಷಿಣ ದಿಕ್ಕು ನಿಶ್ಚಲತೆಯ ದಿಕ್ಕು. ಇಲ್ಲಿ ಕ್ಯಾಲೆಂಡರ್ (Calendar Vastu) ಅಥವಾ ಗಡಿಯಾರವನ್ನು ಹಾಕುವುದು ನಿಮ್ಮ ಜೀವನದಲ್ಲಿ ಎಲ್ಲವನ್ನೂ ನಿಲ್ಲಿಸುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೇ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವಿಶೇಷವಾಗಿ ಇದು ಮನೆಯ ಮುಖ್ಯಸ್ಥರ ಆರೋಗ್ಯಕ್ಕೆ ಅಪಾಯಕಾರಿ. 

ಇದನ್ನೂ ಓದಿ- Zodiac Sign: ಈ 4 ರಾಶಿಯ ಜನರು ಕಡಿಮೆ ಗಳಿಸಿದರೂ ಶ್ರೀಮಂತರಾಗುತ್ತಾರೆ, ಬ್ಯಾಂಕ್ ಬ್ಯಾಲೆನ್ಸ್ ಅನ್ನು ಹೆಚ್ಚಿಸುತ್ತದೆ ಈ ಅಭ್ಯಾಸ

ಕ್ಯಾಲೆಂಡರ್ ಪರಭಕ್ಷಕ ಪ್ರಾಣಿಗಳು, ದುರಂತಗಳು ಅಥವಾ ಮುಳ್ಳಿನ ಸಸ್ಯಗಳ ಫೋಟೋಗಳನ್ನು ಹೊಂದಿರಬಾರದು ಎಂಬುದನ್ನು ನೆನಪಿನಲ್ಲಿಡಿ. ಕ್ಯಾಲೆಂಡರ್‌ನ ಫೋಟೋಗಳು ಮನಸ್ಸಿಗೆ ಶಾಂತಿಯನ್ನು ನೀಡುವಂತಿರಬೇಕು. ವರ್ಣರಂಜಿತ ಹೂವುಗಳು ಅಥವಾ ಸಂತರು ಮತ್ತು ಮಹಾನ್ ಪುರುಷರ ಫೋಟೋಗಳಿದ್ದರೆ ಶುಭ.

ಕ್ಯಾಲೆಂಡರ್ ಅನ್ನು ಮನೆಯ ಮುಖ್ಯ ಬಾಗಿಲಿನ ಮುಂದೆ ಇಡಬೇಡಿ. ವಾಸ್ತು ಶಾಸ್ತ್ರದಲ್ಲಿ ಇದನ್ನು ಅಶುಭವೆಂದು ಪರಿಗಣಿಸಲಾಗಿದೆ. 

ಸೂಚನೆ- ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News