ರಾತ್ರಿ ಮಲಗುವ ಮುನ್ನ ಇದನ್ನು ಕುಡಿಯಿರಿ... ಒಂದೇ ವಾರದಲ್ಲಿ ಅಧಿಕ ತೂಕ ಕಡಿಮೆಯಾಗಿ ಹೊಟ್ಟೆ ಬೊಜ್ಜು ಕರಗುವುದು!

Fat cutter Drink: ಇದರಿಂದ ಹೃದ್ರೋಗ ಮತ್ತು ಮಧುಮೇಹದ ಅಪಾಯ ಕಡಿಮೆಯಾಗುತ್ತದೆ ಜೊತೆಗೆ ನಿಮ್ಮ ತೂಕ ಕೂಡ ವೇಗವಾಗಿ ಇಳಿಯುತ್ತದೆ. 

Written by - Chetana Devarmani | Last Updated : Nov 4, 2024, 05:22 PM IST
  • ತೂಕ ಇಳಿಕೆಗೆ ನೈಸರ್ಗಿಕ ವಿಧಾನ
  • ಬೊಜ್ಜು ಕಡಿಮೆ ಮಾಡಲು ಮನೆಮದ್ದು
  • ತೂಕ ಇಳಿಕೆಗೆ ಸಹಾಯಕವಾದ ಪಾನೀಯ
ರಾತ್ರಿ ಮಲಗುವ ಮುನ್ನ ಇದನ್ನು ಕುಡಿಯಿರಿ... ಒಂದೇ ವಾರದಲ್ಲಿ ಅಧಿಕ ತೂಕ ಕಡಿಮೆಯಾಗಿ ಹೊಟ್ಟೆ ಬೊಜ್ಜು ಕರಗುವುದು!   title=

Weight Loss Drinks: ತೂಕ ಸಮಸ್ಯೆ ಇತ್ತಿಚೆಗೆ ಅನೇಕರನ್ನು ಕಾಡುತ್ತಿದೆ. ಮಲಗುವ ಮುನ್ನ ಕೆಲವು ಪಾನೀಯಗಳನ್ನು ಕುಡಿಯುವುದರಿಂದ ಸುಲಭವಾಗಿ ತೂಕ ಇಳಿಸಬಹುದಾಗಿದೆ. ರಾತ್ರಿಯ ಮಲಗುವ ಮೊದಲು ಈ ಪಾನೀಯಗಳನ್ನು ಕುಡಿಯುವುದರಿಂದ ಹೆಚ್ಚುವರಿ ಕ್ಯಾಲೊರಿಗಳನ್ನು ಸುಡುತ್ತದೆ. ರಾತ್ರಿ ಮಲಗುವ ಎರಡು ಗಂಟೆಗಳ ಮೊದಲು ಊಟ ಮಾಡಬೇಕು. ನಂತರ ಮಲಗುವ ಅರ್ಧ ಗಂಟೆ ಮುನ್ನ ಈ ಪಾನೀಯ ಸೇವಿಸಬೇಕು. ಇದರಿಂದ ಹೃದ್ರೋಗ ಮತ್ತು ಮಧುಮೇಹದ ಅಪಾಯ ಕಡಿಮೆಯಾಗುತ್ತದೆ ಜೊತೆಗೆ ನಿಮ್ಮ ತೂಕ ಕೂಡ ವೇಗವಾಗಿ ಇಳಿಯುತ್ತದೆ.  

ಮೆಂತ್ಯ ನೀರು 

ಮೆಂತ್ಯ ಕಾಳುಗಳನ್ನು ನೀರಿನಲ್ಲಿ ನೆನೆಸಿ. ಈ ನೀರಿಗೆ ಜೇನುತುಪ್ಪ ಬೆರೆಸಿ ಮಲಗುವ ಮುನ್ನ ಕುಡಿಯಿರಿ. ಇದು ತೂಕ ನಷ್ಟಕ್ಕೆ ಸಹಕಾರಿಯಾಗಿದೆ. ಮೆಂತ್ಯ ಕಾಳಿನಲ್ಲಿ ನಾರಿನಂಶ ಹೆಚ್ಚಿದ್ದು, ಹಸಿವನ್ನು ತಡೆಯಲು ಸಹಾಯ ಮಾಡುತ್ತದೆ. ಹೊಟ್ಟೆಯ ಬೊಜ್ಜನ್ನು ಸುಡುತ್ತದೆ. 

ಇದನ್ನೂ ಓದಿ: ಬೇಯುತ್ತಿರುವ ಅನ್ನಕ್ಕೆ ಇದನ್ನು ಬೆರೆಸಿ ತಿಂದರೆ 5 ದಿನದಲ್ಲೇ ಸೊಂಟ ಮತ್ತು ಹೊಟ್ಟೆಯ ಕೊಬ್ಬು ಕರಗುತ್ತೆ! ಬ್ಲಡ್‌ ಶುಗರ್‌ ಕಂಟ್ರೋಲ್‌ ತರಲು ಕೂಡ ಇದು ಸಹಾಯಕ

ದಾಲ್ಚಿನ್ನಿ ಟೀ 

ನೀವು ಆದಷ್ಟು ಬೇಗ ತೂಕ ಇಳಿಸಿಕೊಳ್ಳಲು ಬಯಸಿದರೆ ದಾಲ್ಚಿನ್ನಿ ಚಹಾವನ್ನು ಸೇವಿಸಲು ಪ್ರಾರಂಭಿಸಿ. ತೂಕವನ್ನು ನಿಯಂತ್ರಿಸಲು ದಾಲ್ಚಿನ್ನಿ ಚಹಾ ಉತ್ತಮ ನೈಸರ್ಗಿಕ ಪಾನೀಯವಾಗಿದೆ. ಇದು ಚಯಾಪಚಯವನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಆ್ಯಂಟಿಬಯೋಟಿಕ್‌ಗಳು ಡಿಟಾಕ್ಸ್ ಪಾನೀಯವನ್ನಾಗಿ ಮಾಡುತ್ತದೆ. ಇದು ಕೊಬ್ಬನ್ನು ಸುಡುವಲ್ಲಿ ಸಹಾಯಕವಾಗಿದೆ .

ಅರಿಶಿನ ಹಾಲು

ಅರಿಶಿನವು ಆಹಾರಕ್ಕೆ ಬಣ್ಣ ಮತ್ತು ರುಚಿಯನ್ನು ನೀಡುವುದಲ್ಲದೆ, ಇದು ಹಲವಾರು ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ಶೀತ, ಕೆಮ್ಮು, ಜ್ವರ ಅಥವಾ ಗಾಯವನ್ನು ಕ್ಷಣಾರ್ಧದಲ್ಲಿ ಗುಣಪಡಿಸುವುದರ ಜೊತೆಗೆ, ತೂಕವನ್ನು ಕಡಿಮೆ ಮಾಡುವಲ್ಲಿ ಇದು ಪರಿಣಾಮಕಾರಿ. ಅರಿಶಿನವು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ, ಇದು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ತಜ್ಞರ ಪ್ರಕಾರ, ಪ್ರತಿದಿನ ರಾತ್ರಿ ಮಲಗುವ ಮುನ್ನ ಅರಿಶಿನದ ಹಾಲನ್ನು ಕುಡಿಯಬೇಕು. ಕೆಲವೇ ದಿನಗಳಲ್ಲಿ ನೀವು ಕಡಿಮೆ ತೂಕವನ್ನು ಅನುಭವಿಸುವಿರಿ.

ನಿಂಬೆ ನೀರಿನ ಜೊತೆ ಬ್ಲಾಕ್‌ ಸಾಲ್ಟ್‌ 

ಒಂದು ಲೋಟ ಉಗುರುಬೆಚ್ಚಗಿನ ನೀರಿಗೆ ಲಿಂಬೆ ಹಣ್ಣು ಹಿಂಡಿ ಅದರಲ್ಲಿ ಬ್ಲಾಕ್‌ ಸಾಲ್ಟ್‌ ಬೆರೆಸಿ ಕುಡಿಯಿರಿ, ತೂಕ ವೇಗವಾಗಿ ಕಡಿಮೆಯಾಗುತ್ತದೆ. ಇದರಿಂದ ದೇಹದಲ್ಲಿರುವ ವಿಷಕಾರಿ ಅಂಶ ಸುಲಭವಾಗಿ ಹೊರಹಾಕಲಾಗುತ್ತದೆ. ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಮತ್ತು ಕ್ಯಾಲೊರಿಗಳನ್ನು ಸುಡುವಲ್ಲಿ ಹೆಚ್ಚು ಸಹಾಯ ಮಾಡುತ್ತದೆ.

ಇದನ್ನೂ ಓದಿ:ಈರುಳ್ಳಿ ರಸವನ್ನು ಇದರಲ್ಲಿ ಬೆರೆಸಿ ಹಚ್ಚಿ.. ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುವುದರ ಜೊತೆ ದಪ್ಪವಾಗಿ ಮಾರುದ್ದ ಬೆಳೆಯುವುದು!

ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News