Gray Hair Home Remedies: ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತಿವೆಯಾ?ಆಹಾರದಲ್ಲಿರಲಿ ಈ 4 ಪದಾರ್ಥಗಳು!

Gray Hair Tips: ಅಕಾಲಿಕವಾಗಿ ಕೂದಲು ಬಿಳಿಯಾಗುವಿಕೆಯಿಂದ ನೀವೂ ತೊಂದರೆಗೊಳಗಾಗಿದ್ದೀರಾ, ಈ ಸಮಸ್ಯೆಯನ್ನು ಪರಿಹರಿಸಲು ನಾವು ನಿಮಗೆ ಕೆಲ ಉತ್ತಮ ಪರಿಹಾರಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಅವುಗಳಿಂದ ನೀವು ಕಪ್ಪು, ದಟ್ಟ ಮತ್ತು ನೀಳವಾದ ಕೇಶರಾಶಿಯನ್ನು ಹೊಂದಬಹುದು(Lifestyle News In Kannada)  

Written by - Nitin Tabib | Last Updated : Feb 14, 2024, 10:55 PM IST
  • ಸೋಯಾಬೀನ್, ಸಸ್ಯ ಆಧಾರಿತ ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ, ಇದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
  • ನಿಮ್ಮ ಕೂದಲು ಆರೋಗ್ಯಕರವಾಗಿರಲು ನೀವು ಇದನ್ನು ಸೇವಿಸಬಹುದು. ನಿಮ್ಮ ಕೂದಲು ಅಕಾಲಿಕವಾಗಿ ಬಿಳಿಯುತ್ತಿದ್ದರೆ,
  • ಪ್ರತಿದಿನ ಸೋಯಾಬೀನ್ ಅನ್ನು ಸೇವಿಸಲು ಪ್ರಾರಂಭಿಸಿ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಕೂದಲಿಗೆ ವಿಶೇಷವಾಗಿ ಉತ್ತಮವಾಗಿದೆ.
Gray Hair Home Remedies: ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತಿವೆಯಾ?ಆಹಾರದಲ್ಲಿರಲಿ ಈ 4 ಪದಾರ್ಥಗಳು! title=

White Hair Home Remedies: ಒಂದು ನಿರ್ಧಿಷ್ಟ ವಯಸ್ಸಿನ ನಂತರ ಕೂದಲು ಬಿಳಿಯಾಗುವುದು ಒಂದು ಸಾಮಾನ್ಯ ಸಮಸ್ಯೆಯಾಯಾಗಿದೆ. ಆದರೆ, ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೂದುಬಣ್ಣಕ್ಕೆ ತಿರುಗಲು ಅಥವಾ ಕಾಣಿಸಿಕೊಳ್ಳಲು ಪ್ರಾರಂಭಿಸಿದಾಗ ಏನಾಗುತ್ತದೆ. ಹೌದು, ಇಂದು ಯುವಜನರು ಕೂಡ ಬೂದು ಕೂದಲಿನ ಸಮಸ್ಯೆಯಿಂದ ತೊಂದರೆಗೀಡಾಗಿದ್ದಾರೆ. ಇದರ ಹಿಂದೆ ಒತ್ತಡ, ಮಾಲಿನ್ಯ ಇತ್ಯಾದಿ ಹಲವು ಕಾರಣಗಳಿವೆ. ಬೂದು ಕೂದಲನ್ನು ತಪ್ಪಿಸಲು ಜನರು ಅನೇಕ ಪರಿಹಾರಗಳನ್ನು ಅನುಸರಿಸುತ್ತಾರೆ. ಆದರೆ ಇಂದು ನಾವು ನಿಮಗೆ ನಿಮ್ಮ ಕೂದಲನ್ನು ಕಪ್ಪಾಗಿಸಲು ಕೆಲ ಮನೆಮದ್ದುಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಅವು ನಿಮ್ಮ ಕೂದಲನ್ನು ಅತ್ಯಂತ ವೇಗವಾಗಿ ಕಪ್ಪಾಗಿಸುತ್ತವೆ.  ಕೂದಲನ್ನು ಕಪ್ಪಾಗಿಸಲು ಏನೆಲ್ಲಾ ವಸ್ತುಗಳನ್ನು ಬಳಸಬಹುದು ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ, (Lifestyle News In Kannada)

1. ಪ್ರತಿದಿನ ಮೊಟ್ಟೆ ತಿನ್ನಿ
ಸಂಡೆ ಹೊ ಯಾ ಮಂಡೆ, ರೋಜ್ ಖಾವೋ ಅಂಡೆ,  ಈ ಮಾತನ್ನು ನೀವು ಆಗಾಗ್ಗೆ ಕೇಳಿರಬೇಕು. ಹೌದು, ಇದನ್ನು ಸಹ ಹೇಳಲಾಗುತ್ತದೆ ಏಕೆಂದರೆ ಮೊಟ್ಟೆಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಹಾರ ಪದಾರ್ಥವಾಗಿದೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಮೊಟ್ಟೆಗಳು ನಮ್ಮ ಕೂದಲು ಬೂದು ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ. ನೈಸರ್ಗಿಕವಾಗಿ ಬೂದು ಕೂದಲನ್ನು ಕಪ್ಪಾಗಿಸಲು ಇದು ಸಹಾಯ ಮಾಡುತ್ತದೆ.

2. ಮೊಸರು ಬಳಸಿ
ಮೊಸರು ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನೀವು ಆಗಾಗ್ಗೆ ಕೇಳಿರಬಹುದು, ಆದರೆ ಮೊಸರು ಕೂದಲಿಗೆ ಪರಿಣಾಮಕಾರಿ ಎಂಬುದನ್ನು ನೀವು ಅಪರೂಪವಾಗಿ ಕೇಳಿರಬಹುದು. ಆದರೆ ಮೊಸರಿನ ಬಳಕೆಯು ಬಿಳಿ ಕೂದಲಿಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುತಾಗುತ್ತದೆ. ವಾಸ್ತವದಲ್ಲಿ, ವಿಟಮಿನ್ ಬಿ 12 ಸಮೃದ್ಧವಾಗಿರುವ ಮೊಸರು ನಮ್ಮ ಕೂದಲು ಅಕಾಲಿಕವಾಗಿ ಬೂದು ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ.

3. ಮೆಂತ್ಯ ಸೇವನೆ
ಮೆಂತ್ಯ, ಕಬ್ಬಿಣ ಮತ್ತು ಫೈಬರ್‌ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ, ಇದು ನಮ್ಮ ಬೂದು ಕೂದಲಿಗೆ ರಾಮಬಾಣವಾಗಿದೆ. ಮೆಂತ್ಯವನ್ನು ನಿಯಮಿತವಾಗಿ ಬಳಸುವುದರಿಂದ ಕಪ್ಪು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುತ್ತದೆ. ಮೆಂತ್ಯವು ಕೂದಲಿನಲ್ಲಿ ಮೆಲನಿನ್ ಎಂಬ ಅಂಶವನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಕಾರಣ ಮೆಲನಿನ್ ಕೊರತೆಯಿಂದ ನಮ್ಮ ಕೂದಲು ಬೇಗ ಬೆಳ್ಳಗಾಗುತ್ತದೆ.

ಇದನ್ನೂ ಓದಿ-Weight Loss Home Remedies: ಈ ಆಯುರ್ವೇದ ಕಷಾಯ ಸೇವಿಸಿ ತಿಂಗಳಲ್ಲಿ 7-8 ಕೆಜಿ ತೂಕ ಇಳಿಕೆ ಮಾಡಿಕೊಳ್ಳಿ!

4. ಸೋಯಾಬೀನ್ ತಿನ್ನಿರಿ
ಸೋಯಾಬೀನ್, ಸಸ್ಯ ಆಧಾರಿತ ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ, ಇದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ನಿಮ್ಮ ಕೂದಲು ಆರೋಗ್ಯಕರವಾಗಿರಲು ನೀವು ಇದನ್ನು ಸೇವಿಸಬಹುದು. ನಿಮ್ಮ ಕೂದಲು ಅಕಾಲಿಕವಾಗಿ ಬಿಳಿಯುತ್ತಿದ್ದರೆ, ಪ್ರತಿದಿನ ಸೋಯಾಬೀನ್ ಅನ್ನು ಸೇವಿಸಲು ಪ್ರಾರಂಭಿಸಿ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಕೂದಲಿಗೆ ವಿಶೇಷವಾಗಿ ಉತ್ತಮವಾಗಿದೆ.

ಇದನ್ನೂ ಓದಿ-Taming Diabetes: ಕೇವಲ ಮಸಾಲೆ ಅಷ್ಟೇ ಅಲ್ಲ, ಆಯುರ್ವೇದ ಔಷಧಿಯೂ ಹೌದು ಈ ಚಕ್ಕೆ, ಮಧುಮೆಹಿಗಳಿಗೆ ರಾಮಬಾಣ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News