Benefits of Guava Leaves: ಸೊಂಪಾದ ಕೇಶರಾಶಿಯನ್ನು ಪಡೆಯಲು ಹರಸಾಹಸ ಪಡುತ್ತಿರುವ ಹಲವಾರು ಜನರಿದ್ದಾರೆ. ಅಲ್ಲದೇ ಉದ್ದ ಬಲಶಾಲಿ ಕೂದಲು ಹೊಂದಿರುವವರು ಹಲವಾರು ಕಾರಣಗಳಿಂದ ಕೂದನ್ನು ಕಳೆದುಕೊಳ್ಳುತ್ತಿದ್ದಾರೆ. ಅವರೆಲ್ಲರಿಗೂ ಒಂದೇ ಪರಿಹಾರ ನೈಸರ್ಗಿಕ ಪದಾರ್ಥಗಳನ್ನು ಬಳಸುವುದು.
ಹೌದು ನೈಸರ್ಗಿಕ ಪರಿಹಾರ ಅಥವಾ ಮನೆಮದ್ದುಗಳನ್ನು ಬಳಸುವುದು ನಿಮ್ಮ ಕೂದಲನ್ನು ಹಾನಿಯಿಂದ ರಕ್ಷಿಸುತ್ತದೆ ಮತ್ತು ಇದನ್ನು ಅನುಸರಿವುದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಹಾಗಾದರೆ ಕೂದಲುದುರುವುದನ್ನು ತಡೆಯಲು ಸೀಬೆ ಹಣ್ಣಿನ ಎಲೆಯನ್ನು ಬಳಸುವುದು ಉತ್ತಮ.
ಹೌದು ಈ ಅತಿ ವಿಶೇಷಾಗಿರುವ ಸೀಬೆ ಎಲೆಯನ್ನು ಹೀಗೆ ಬಳಸಿದರೆ ನಿಮ್ಮ ಕೂದಲಿನ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದಾಗಿದೆ.
ಸೀಬೆ ಎಲೆಯ ಪೇಸ್ಟ್ ತಯಾರಿಸಲು ಬೇಕಾಗುವ ಸಾಮಗ್ರಿಗಳು:
*ನಿಮಗೆ ಅಗತ್ಯವಿದ್ದಷ್ಟು ಸೀಬೆ ಎಲೆಗಳು
*ಅದಕ್ಕೆ ಬೇಕಾಗುವಷ್ಟು ನೀರು
*ಪಾತ್ರೆ
*ಜರಡಿ
ತಯಾರಿಸುವ ವಿಧಾನ:
*ಪಾತ್ರೆಯಲ್ಲಿ ನೀರನ್ನು ಕುದಿಸಿ
*ಕುದಿಯುವಾಗಲೇ ಸೀಬೆ ಎಲೆಯನ್ನು ಹಾಕಿ
*20 ನಿಮಿಷಗಳ ಕಾಲ ಕುದಿಯಲು ಬಿಡಿ
*ನಂತರ ತಣ್ಣಗಾಗಲು ಬಿಡಿ.
ಹೀಗೆ ಬಳಸಿ
*ಕೂದಲನ್ನು ಶಾಂಪೂವಿನಿಂದ ತೊಳೆಯಿರಿ
*ಕೂದಲು ಒಣಗಿದ ಮೇಲೆ ಈ ಪೇಸ್ಟ್‌ನ್ನು ನೆತ್ತಿಗೆ ಹಚ್ಚಿ
*ಸ್ವಲ್ಪ ಹೊತ್ತು ಮಸಾಜ್ ಮಾಡಿ
*2 ಗಂಟೆಗಳ ಕಾಲ ಬಿಟ್ಟು ತಣ್ಣೀರಿನಿಂದ ತೊಳೆಯಿರಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.