ನವದೆಹಲಿ: ಹೋಳಿಕಾ ದಹನ(Holika Dahan)ದ ಜೊತೆಗೆ ಇಂದು(ಮಾರ್ಚ್ 18) ಬಣ್ಣಗಳೊಂದಿಗೆ ಹೋಳಿ(Holi Festival 2022) ಆಡಲಾಗುತ್ತದೆ. ಜನರು ಪರಸ್ಪರ ಆಲಂಗಿಸಿಕೊಂಡು, ಬಣ್ಣಗಳಲ್ಲಿ ಮುಳುಗಿ ಸಂಭ್ರಮದಿಂದ ಹೋಳಿ ಆಚರಿಸುತ್ತಾರೆ. ಚೈತ್ರ ಮಾಸದ ಕೃಷ್ಣ ಪಕ್ಷ ಪ್ರತಿಪದ(Pratipada)ದಂದು ಬಣ್ಣದ ಹೋಳಿಯನ್ನು ಆಚರಿಸಲಾಗುತ್ತದೆ. ಹಿಂದೂ ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಈ ದಿನವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಈ ದಿನ ರಾಶಿಚಕ್ರದ ಪ್ರಕಾರ ವಿಶೇಷ ಮಂತ್ರಗಳನ್ನು ಜಪಿಸಿದರೆ(Chanting Mantras) ನಂತರ ಅದೃಷ್ಟ ಖುಲಾಯಿಸುತ್ತದೆ ಎಂದು ನಂಬಲಾಗಿದೆ. ರಾಶಿಚಕ್ರದ ಪ್ರಕಾರ ಯಾವ ಮಂತ್ರವನ್ನು ಜಪಿಸಬೇಕೆಂದು ತಿಳಿದುಕೊಳ್ಳಿರಿ.
ರಾಶಿಚಕ್ರದ ಪ್ರಕಾರ ಮಂತ್ರವನ್ನು ಪಠಿಸಿ
ಮಂತ್ರ ಪಠಿಸುವ ಮೊದಲು ದೇವರಿಗೆ ಗುಲಾಲ್(Gulal) ಅಂದರೆ ಬಣ್ಣವನ್ನು ಅರ್ಪಿಸಿ. ಇದಕ್ಕಾಗಿ ನಿಮ್ಮ ಇಚ್ಛೆಗೆ ಅನುಗುಣವಾಗಿ ಬಣ್ಣವನ್ನು ಆರಿಸಿ. ಉದಾಹರಣೆಗೆ ಸಂಪತ್ತಿಗೆ ಗುಲಾಬಿ ಬಣ್ಣ, ಆರೋಗ್ಯಕ್ಕಾಗಿ ಕೆಂಪು ಬಣ್ಣ, ಅಧ್ಯಯನಕ್ಕಾಗಿ ಹಳದಿ ಅಥವಾ ಶ್ರೀಗಂಧವನ್ನು ನೀಡಿ ಮತ್ತು ಅದರೊಂದಿಗೆ ಹೋಳಿಯನ್ನು ಆಡಿ(Holi Celebrations). ಶೀಘ್ರದಲ್ಲೇ ಮದುವೆಯಾಗಲು ದೇವರಿಗೆ ಗುಲಾಬಿ ಮತ್ತು ಹಸಿರು ಬಣ್ಣಗಳನ್ನು ಅರ್ಪಿಸಿ. ತಿಳಿ ನೀಲಿ ಬಣ್ಣವು ವೃತ್ತಿಜೀವನಕ್ಕೆ ಉತ್ತಮವಾಗಿರುತ್ತದೆ.
ಇದನ್ನೂ ಓದಿ: ಜೀವನದ ಎಲ್ಲಾ ಕಷ್ಟಗಳಿಂದಲೂ ಮೇಲೆದ್ದು ಬರಲು ಸಹಾಯ ಮಾಡುತ್ತದೆ ಈ ಮೂರು ವಿಷಯಗಳು..!
ಮೇಷ ರಾಶಿ: ಈ ರಾಶಿಯ ಜನರು ‘ಓಂ ನಮಃ ಭಗವತೇ ವಾಸುದೇವಾಯ’ ಎಂಬ ಮಂತ್ರವನ್ನು ಜಪಿಸಬೇಕು. ಗುಲಾಬಿ ಮತ್ತು ಹಳದಿ ಬಣ್ಣಗಳೊಂದಿಗೆ ಹೋಳಿಯನ್ನು ಆಡಬೇಕು.
ವೃಷಭ ರಾಶಿ: ವೃಷಭ ರಾಶಿಯ ಜನರು ಗಾಯತ್ರಿ ಮಂತ್ರವನ್ನು ಪಠಿಸಬೇಕು(Chanting Mantras) ಮತ್ತು ಆಕಾಶ ಮತ್ತು ತಿಳಿ ನೀಲಿ ಬಣ್ಣಗಳೊಂದಿಗೆ ಹೋಳಿ ಆಡಬೇಕು.
ಮಿಥುನ ರಾಶಿ: ಮಿಥುನ ರಾಶಿಯ ಜನರು ‘ಓಂ ಶ್ರೀ ಕ್ಷಿಂ ಕ್ಲೀಂ’ ಎಂಬ ಮಂತ್ರವನ್ನು ಪಠಿಸಬೇಕು. ಹಾಗೆಯೇ ತಿಳಿ ಹಸಿರು, ಗುಲಾಬಿ, ಹಳದಿ, ಕಿತ್ತಳೆ, ಆಕಾಶ ಬಣ್ಣಗಳೊಂದಿಗೆ ಹೋಳಿಯನ್ನು ಆಡಬೇಕು.
ಕರ್ಕ ರಾಶಿ: ಕರ್ಕಾಟಕ ರಾಶಿಯ ಜನರು ‘ಓಂ ಐಂ ಹ್ರೀಂ ಕ್ಲೀಂ ಚಾಮುಂಡಾಯ ನಮಃ’ ಎಂಬ ಮಂತ್ರವನ್ನು ಜಪಿಸಬೇಕು. ಅವರು ಈ ಹಬ್ಬವನ್ನು ಸರಳವಾಗಿ ಆಚರಿಸಬೇಕು.
ಸಿಂಹ ರಾಶಿ: ಸಿಂಹ ರಾಶಿಯ ಜನರು ಹನುಮಾನ್ ಚಾಲೀಸಾ ಓದಬೇಕು ಅಥವಾ ಗಾಯತ್ರಿ ಮಂತ್ರವನ್ನು ಪಠಿಸಬೇಕು. ಇವರು ಗುಲಾಬಿ, ತಿಳಿ ಹಸಿರು, ಕಿತ್ತಳೆ, ಹಳದಿ ಇತ್ಯಾದಿ ಬಣ್ಣಗಳೊಂದಿಗೆ ಹೋಳಿ ಆಡಬೇಕು.
ಕನ್ಯಾ ರಾಶಿ: ಈ ರಾಶಿಯ ಜನರು ‘ಓಂ ನಮಃ ನಾರಾಯಣಾಯ’ ಎಂಬ ಮಂತ್ರವನ್ನು ಪಠಿಸಬೇಕು. ತಿಳಿ ಹಸಿರು, ಗುಲಾಬಿ, ಹಳದಿ, ಕಿತ್ತಳೆ, ಆಕಾಶ ಬಣ್ಣಗಳನ್ನು ಬಳಸಿ ಹೋಳಿಯಾಡಬೇಕು.
ಇದನ್ನೂ ಓದಿ: Fate Line Palmistry: ಇಂತಹ ಜನರು ಅಪಾರ ಸಂಪತ್ತಿನ ಒಡೆಯರಾಗುತ್ತಾರೆ!
ತುಲಾ ರಾಶಿ: ಈ ರಾಶಿಯ ಜನರು ‘ಓಂ ಕ್ಲೀಂ ಕೃಷ್ಣಾಯ ನಮಃ’ ಎಂದು ಜಪಿಸಬೇಕು. ಇವರು ಬೆಳ್ಳಿಯ ಬಣ್ಣದಿಂದ ಹೋಳಿ ಆಡಬೇಕು.
ವೃಶ್ಚಿಕ ರಾಶಿ: ಈ ರಾಶಿಯವರು ಹನುಮಾನ್ ಚಾಲೀಸಾ ಓದಬೇಕು ಮತ್ತು ಸುಂದರಕಾಂಡವನ್ನು ಪಠಿಸಬೇಕು. ಇವರು ಗುಲಾಬಿ ಮತ್ತು ಹಳದಿ ಬಣ್ಣಗಳೊಂದಿಗೆ ಹೋಳಿ ಆಡಬೇಕು.
ಧನು ರಾಶಿ: ಧನು ರಾಶಿಯವರು ಗಾಯತ್ರಿ ಮಂತ್ರವನ್ನು ಪಠಿಸುವುದು ಉತ್ತಮ. ಹಳದಿ, ಕಿತ್ತಳೆ, ನೇರಳೆ ಬಣ್ಣಗಳೊಂದಿಗೆ ಹೋಳಿಯನ್ನು ಆಡಬೇಕು.
ಮಕರ ರಾಶಿ: ಮಕರ ರಾಶಿಯವರು ‘ಓಂ ನಮಃ ಶಿವಾಯ’ ಮತ್ತು ‘ಓಂ ನಮಃ ಭಗವತೇ ವಾಸುದೇವಾಯ’ ಎಂದು ಜಪಿಸಬೇಕು. ಆಕಾಶ ಮತ್ತು ನೀಲಿ ಬಣ್ಣಗಳೊಂದಿಗೆ ಹೋಳಿಯನ್ನು ಆಡುವುದು ಮಂಗಳಕರ.
ಕುಂಭ ರಾಶಿ: ಕುಂಭ ರಾಶಿಯವರು ‘ಓಂ ಗಂ ಗಣಪತೇ ನಮಃ’ ಮತ್ತು ‘ಓಂ ಏ ಹ್ರೀಂ ಶ್ರೀ ಲಕ್ಷ್ಮೀದೇವಾಯ ನಮಃ’ ಎಂದು ಜಪಿಸಬೇಕು. ಹಸಿರು ಬಣ್ಣದೊಂದಿಗೆ ಹೋಳಿಯನ್ನು ಆಡಬೇಕು.
ಮೀನ ರಾಶಿ: ಮೀನ ರಾಶಿಯ ಜನರು ಸುಂದರಕಾಂಡ ಮತ್ತು ಹನುಮಾನ್ ಚಾಲೀಸಾವನ್ನು ಓದಬೇಕು. ಇವರು ಸಹ ಹೋಳಿಯನ್ನು ಸರಳವಾಗಿ ಆಡಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.