ಕಲ್ಲಂಗಡಿ ಹಣ್ಣು ಕೆಂಪಗೆ ಮತ್ತು ಸಿಹಿಯಾಗಿದೆಯೇ ಎಂದು ಸುಲಭವಾಗಿ ಹೀಗೆ ಕಂಡುಕೊಳ್ಳಿ ..!

ಬೇಸಿಗೆ ಕಾಲದಲ್ಲಿ ಕೆಂಪು ಮತ್ತು ಸಿಹಿ ಕಲ್ಲಂಗಡಿ ಸಿಕ್ಕಿದರೆ ಅದ್ಭುತವಾಗಿರುತ್ತದೆ. ಸಾಮಾನ್ಯವಾಗಿ ಜನರು ಕಲ್ಲಂಗಡಿ ಹಣ್ಣನ್ನು ಬ್ಲಾಕ್ ಸಾಲ್ಟ್  ಅಥವಾ ಸಕ್ಕರೆಯೊಂದಿಗೆ ತಿನ್ನಲು ಇಷ್ಟಪಡುತ್ತಾರೆ. ಕಲ್ಲಂಗಡಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಕಂಡುಬರುತ್ತವೆ, ಇದು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ.  

Written by - Ranjitha R K | Last Updated : May 13, 2022, 08:22 AM IST
  • ದಿನೇ ದಿನೇ ಸೂರ್ಯನ ಶಾಖ ಏರುತ್ತಲೇ ಇದೆ.
  • ನೀರಿನ ಅಂಶ ಹೆಚ್ಚಾಗಿರುವ ಹಣ್ಣುಗಳನ್ನು ಬೇಸಿಗೆ ಕಾಲದಲ್ಲಿ ಸೇವಿಸಿದರೆ ಒಳ್ಳೆಯದು.
  • ಕಲ್ಲಂಗಡಿ ದೇಹದಲ್ಲಿನ ನೀರಿನ ಕೊರತೆಯನ್ನು ಪೂರೈಸುವ ಹಣ್ಣು
ಕಲ್ಲಂಗಡಿ ಹಣ್ಣು ಕೆಂಪಗೆ ಮತ್ತು ಸಿಹಿಯಾಗಿದೆಯೇ ಎಂದು ಸುಲಭವಾಗಿ ಹೀಗೆ ಕಂಡುಕೊಳ್ಳಿ ..! title=
water melon benefist (file photo)

ಬೆಂಗಳೂರು : ದಿನೇ ದಿನೇ ಸೂರ್ಯನ ಶಾಖ ಏರುತ್ತಲೇ ಇದೆ. ಬಿಸಿಲ ಧಗೆಗೆ ತಿನ್ನುವ ಆಹಾರದತ್ತಲು ಗಮನ ವಹಿಸಬೇಕು, ಬೇಸಿಗೆಯಲ್ಲಿ ಹೆಚ್ಚು ಹಣ್ಣುಗಳನ್ನೇ ತಿನ್ನುವಂತೆ ಸಲಹೆ ನೀಡಲಾಗುತ್ತದೆ. ಅದರಲ್ಲೂ ನೀರಿನ ಅಂಶ ಹೆಚ್ಚಾಗಿರುವ ಹಣ್ಣುಗಳನ್ನು ಬೇಸಿಗೆ ಕಾಲದಲ್ಲಿ ಸೇವಿಸಿದರೆ ಒಳ್ಳೆಯದು. ಕಲ್ಲಂಗಡಿ ದೇಹದಲ್ಲಿನ ನೀರಿನ ಕೊರತೆಯನ್ನು ಪೂರೈಸುವ ಹಣ್ಣು. ಈ ಹಣ್ಣಿನ  ಸೇವನೆಯಿಂದ ದೇಹವು ಒಳಗಿನಿಂದ ತಂಪಾಗಿರುತ್ತದೆ. ಮಾತ್ರವಲ್ಲ ಈ ಹಣ್ಣು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ. ಸಾಮಾನ್ಯವಾಗಿ ಜನರು ಕಲ್ಲಂಗಡಿ ಹಣ್ಣನ್ನು ಬ್ಲಾಕ್ ಸಾಲ್ಟ್ ಅಥವಾ ಸಕ್ಕರೆಯೊಂದಿಗೆ ತಿನ್ನಲು ಇಷ್ಟಪಡುತ್ತಾರೆ. ಕಲ್ಲಂಗಡಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಕಂಡುಬರುತ್ತವೆ.  ಇದು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ.

ಕಲ್ಲಂಗಡಿ ದೇಹಕ್ಕೆ ಪ್ರಯೋಜನಕಾರಿಯಾಗಿದೆ : 
ಕಲ್ಲಂಗಡಿಯಲ್ಲಿ ಶೇ.95 ರಷ್ಟು ನೀರು ಇದೆ ಎಂದು ತಜ್ಞರು ಹೇಳುತ್ತಾರೆ. ಈ ಕಾರಣದಿಂದಾಗಿ ಬೇಸಿಗೆಯಲ್ಲಿ ಈ ಹಣ್ಣನ್ನು ತಿಂದರೆ ದೇಹದಲ್ಲಿ ನೀರಿನ ಕೊರತೆ ಇರುವುದಿಲ್ಲ . ಈ ಕಾರಣಕ್ಕಾಗಿಯೇ  ಜನರು ಬೇಸಿಗೆಯಲ್ಲಿ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಅನೇಕ ಬಾರಿ ಈ ಹಣ್ಣು ಸಿಹಿಯಾಗಿಯಾಗಿರುವುದಿಲ್ಲ. ಮಾತ್ರವಲ್ಲ ಅದರ ಬಣ್ಣ ಕೂಡಾ ಮಾಸಿದಂತಿರುತ್ತದೆ. ಹೀಗಿದ್ದಾಗ ಹಣ್ಣು ತಿನ್ನಲು ಇಷ್ಟವಾಗುವುದಿಲ್ಲ.   

ಇದನ್ನೂ ಓದಿ : Healthy vegetables : ತಪ್ಪದೆ ಸೇವಿಸಿ ಈ 3 ತರಕಾರಿಗಳನ್ನು : ಆರೋಗ್ಯಕ್ಕಿದೆ ತುಂಬಾ ಪ್ರಯೋಜನಗಳು!

ಸಿಹಿ ಮತ್ತು ಕೆಂಪು ಕಲ್ಲಂಗಡಿ ಗುರುತಿಸುವುದು ಹೇಗೆ? 
ಹಣ್ಣು ಖರೀದಿಸುವಾಗ ಕೆಲವೊಂದು ಅಂಶಗಳನ್ನು ಗಮನಿಸಿದರೆ ಸಿಹಿ ಕಲ್ಲಂಗಡಿ ಹಣ್ಣನ್ನು ಗುರುತಿಸಬಹುದು. ಮಾತ್ರವಲ್ಲ ರುಚಿಕರ ಹಣ್ಣನ್ನೇ ಮನೆಗೆ ಕೊಂಡೊಯ್ಯಬಹುದು.  

ಹಣ್ಣು  ಹಳದಿಯಾಗಿರಬೇಕು : ಅನೇಕ ಜನರು ಹಸಿರು ಕಲ್ಲಂಗಡಿ ಖರೀದಿಸುತ್ತಾರೆ.  ಆದರೆ ತಿಳಿ ಹಳದಿ ಕಲ್ಲಂಗಡಿ ಸಿಹಿ ಮತ್ತು ಕೆಂಪು ಬಣ್ಣದಲ್ಲಿರುತ್ತದೆ. ಕಲ್ಲಂಗಡಿ ಕೆಳಭಾಗದಲ್ಲಿ ಹೆಚ್ಚು ಹಳದಿ ಕಲೆಗಳು ಇದ್ದರೆ, ಅಂಥಹ  ಕಲ್ಲಂಗಡಿ ಸಿಹಿಯಾಗಿರುತ್ತದೆ.

ಲಘುವಾಗಿ ಟ್ಯಾಪ್ ಮಾಡುವ ಮೂಲಕ ಪರಿಶೀಲಿಸಿ : ಕಲ್ಲಂಗಡಿ ಖರೀದಿಸಲು ಹೋದರೆ, ಅದನ್ನು ನಿಮ್ಮ ಕೈಯಲ್ಲಿ ಎತ್ತಿಕೊಳ್ಳಿ. ಹೀಗೆ ಎತ್ತಿಕೊಂಡ ಮೇಲೆ ಅದರ ಮೇಲೆ ಬೆರಳುಗಳ ಸಹಾಯದಿಂದ ಸಣ್ಣದಾಗಿ ಟ್ಯಾಪ್ ಮಾಡಿ.  ಕಲ್ಲಂಗಡಿ ಸಿಹಿಯಾಗಿದ್ದರೆ ಹಣ್ಣಿನಿಂದ ಢಕ್ ಢಕ್ ಎನ್ನುವ ಶಬ್ದ ಕೇಳಿಸುತ್ತದೆ. 

ಇದನ್ನೂ ಓದಿ : High BP Control Tips: ಯಾವುದೇ ಔಷಧಿ ಇಲ್ಲದೆ ಈ ರೀತಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಿ

ಎಲ್ಲೂ ಕೂಡಾ ಸಣ್ಣ ರಂಧ್ರ ಕೂಡಾ ಇಲ್ಲ ಎನ್ನುವುದನ್ನು ಪರಿಶೀಲಿಸಿಕೊಳ್ಳಿ : ಕಲ್ಲಂಗಡಿ ಹಣ್ಣನ್ನು ಕೊಳ್ಳುವಾಗ ಆ ಹಣ್ಣಿನಲ್ಲಿ ಸಣ್ಣ ರಂಧ್ರ ಕೂಡಾ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಹಣ್ಣು ಬೇಗ ಬೆಳೆಯಲಿ ಎನ್ನುವ ಕಾರಣಕ್ಕಾಗಿ ಹಾನಿಕಾರಕ ಹಾರ್ಮೋನ್ ಗಳ ಚುಚ್ಚುಮದ್ದುಗಳನ್ನು ಹಾಕಿ ಬಿಡುತ್ತಾರೆ. 

ತೂಕ ನೋಡಿ ಖರೀದಿಸಿ : ಕಲ್ಲಂಗಡಿ ಹಣ್ಣಿನ ತೂಕವನ್ನು ಸರಿಯಾಗಿ ಚೆಕ್ ಮಾಡಿಕೊಳ್ಳಿ. ಕಲ್ಲಂಗಡಿ ಹಣ್ಣು ಎತ್ತಲು ಬಹಳ ಭಾರವಾಗಿದ್ದರೆ ಅದು ತಿನ್ನಳು ಖಂಡಿತಾ ರುಚಿಯಾಗಿರುವುದಿಲ್ಲ. ಹಣ್ಣು ಎತ್ತಿಕೊಳ್ಳಲು ಹಗುರವಾಗಿದ್ದರೆ ಆ ಹಣ್ಣು ಬಹಳ ರುಚಿಯಾಗಿರುತ್ತದೆ.

ಆಕಾರವನ್ನು ನೋಡಿ : ಮೊಟ್ಟೆಯ ಆಕಾರದ ಕಲ್ಲಂಗಡಿಗಳು ಹೆಚ್ಚಾಗಿ ಸಿಹಿಯಾಗಿರುತ್ತವೆ. ವೃತ್ತಾಕಾರದಲ್ಲಿರುವ ಕಲ್ಲಂಗಡಿ ರುಚಿಯಾಗಿರುವುದಿಲ್ಲ.  

 

(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News