ಫ್ರಿಡ್ಜ್ ಇಲ್ಲದೆಯೇ ಹೆಚ್ಚಿದಿನಗಳವರೆಗೆ ಟೊಮಾಟೊ ಫ್ರೆಶ್ ಆಗಿರಬೇಕೆ? ಈ ರೀತಿ ಇಟ್ಟು ನೋಡಿ...!

How to store tomato: ಭಾರತೀಯ ಖಾದ್ಯಗಳಲ್ಲಿ ಬಳಸಲ್ಪಡುವ ಪ್ರಮುಖ ತರಕಾರಿಗಳಲ್ಲಿ ಟೊಮಾಟೊ ಸಹ ಒಂದು. ಆಹಾರದ ಸ್ವಾದವನ್ನು ಹೆಚ್ಚಿಸುವ ಟೊಮಾಟೊವನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸದಿದ್ದರೆ ಅದು ಬೇಗ ಹಾಳಾಗುತ್ತದೆ. 

Written by - Yashaswini V | Last Updated : Oct 30, 2024, 12:35 PM IST
  • ಮಾಗಿದ ಟೊಮ್ಯಾಟೊ ಹಣ್ಣುಗಳು ಒಂದೆರಡು ದಿನಗಳಲ್ಲಿ ಹಾಳಾಗುತ್ತವೆ.
  • ಸ್ವಲ್ಪ ಕಚ್ಚಾ ಟೋಮ್ಯಾಟೊ ಖರೀದಿಸಿದರೂ ಕೂಡ ವಾರದೊಳಗೆ ಅವು ಕೆಟ್ಟು ಹೋಗುತ್ತವೆ.
  • ಈ ಬ್ಯುಸಿ ಜೀವನಶೈಲಿಯಲ್ಲಿ ದಿನನಿತ್ಯ ಹೊರಹೋಗಿ ಟೊಮಾಟೊ ತರುವುದು ಕಷ್ಟವಾಗಬಹುದು.
ಫ್ರಿಡ್ಜ್ ಇಲ್ಲದೆಯೇ ಹೆಚ್ಚಿದಿನಗಳವರೆಗೆ ಟೊಮಾಟೊ ಫ್ರೆಶ್ ಆಗಿರಬೇಕೆ? ಈ ರೀತಿ ಇಟ್ಟು ನೋಡಿ...! title=

How to store tomato: ಎಷ್ಟೇ ತರಕಾರಿಗಳನ್ನು ಬಳಸಿ ಎಂತದ್ದೆ ಭಕ್ಷ್ಯವನ್ನು ತಯಾರಿಸಿದರೂ ಕೂಡ ಟೊಮಾಟೊ ಇಲ್ಲದೆ ಆಹಾರ ಪರಿಪೂರ್ಣ ಎಂದೆನಿಸುವುದಿಲ್ಲ. ಹಾಗಾಗಿಯೇ, ಇದೊಂದು ಬಲು ಬೇಡಿಕೆಯ ತರಕಾರಿಯೂ ಆಗಿದೆ. ಮೊದಲೇ ತಿಳಿಸಿದಂತೆ ಟೋಮ್ಯಾಟೊ ಆಹಾರದ ರುಚಿಯನ್ನು ಹೆಚ್ಚಿಸುತ್ತವೆ. ಅಷ್ಟೇ ಅಲ್ಲ, ಇದು ಆರೋಗ್ಯಕ್ಕೂ ತುಂಬಾ ಲಾಭದಾಯಕವಾಗಿದೆ. 

ಟೊಮಾಟೊ ಬಹುತೇಕ ಆಹಾರಗಳಲ್ಲಿ ಬಳಸಲ್ಪಡುವ ಪ್ರಧಾನ ತರಕಾರಿ. ಆದೇ, ಬೇರೆ ತರಕಾರಿಗಳಂತೆ ಇದನ್ನು ಮೂರ್ನಾಲ್ಕು ದಿನಗಳವರೆಗೆ ಕೆಡದಂತೆ ಇಡುವುದು ಕಷ್ಟ. ಆದರೆ, ಕೆಲವು ಸಿಂಪಲ್ ಟಿಪ್ಸ್ ಅನುಸರಿಸಿದರೆ ನಿಮ್ಮ ಮನೆಯಲ್ಲಿ ಫ್ರಿಡ್ಜ್ ಇಲ್ಲದಿದ್ದರೂ ಕೂಡ ಟೊಮಾಟೊ ಕೆಡದಂತೆ ಇಡಬಹುದು.   

ವಾಸ್ತವವಾಗಿ, ಮಾಗಿದ ಟೊಮ್ಯಾಟೊ ಹಣ್ಣುಗಳು ಒಂದೆರಡು ದಿನಗಳಲ್ಲಿ ಹಾಳಾಗುತ್ತವೆ. ಸ್ವಲ್ಪ ಕಚ್ಚಾ ಟೋಮ್ಯಾಟೊ ಖರೀದಿಸಿದರೂ ಕೂಡ ವಾರದೊಳಗೆ ಅವು ಕೆಟ್ಟು ಹೋಗುತ್ತವೆ. ಈ ಬ್ಯುಸಿ ಜೀವನಶೈಲಿಯಲ್ಲಿ ದಿನನಿತ್ಯ ಹೊರಹೋಗಿ ಟೊಮಾಟೊ ತರುವುದು ಕಷ್ಟವಾಗಬಹುದು.  ಆದರೆ, ಮಾರುಕಟ್ಟೆಯಿಂದ ತರುವ ಟೊಮಾಟೊವನ್ನು ಸರಿಯಾದ ರೀತಿಯಲ್ಲಿ ಇಡುವುದರಿಂದ ಹೆಚ್ಚು ದಿನಗಳವರೆಗೆ ಟೊಮಾಟೊ ತಾಜಾ ಆಗಿರುವಂತೆ ರಕ್ಷಿಸಬಹುದು. ಅಂತಹ ಕೆಲವು ಸಲಹೆಗಳು ಇಲ್ಲಿವೆ... 

ಇದನ್ನೂ ಓದಿ- ಅಡುಗೆ ಮನೆಯಲ್ಲಿರುವ ಈ ಪದಾರ್ಥ ಸಾಕು.. ಮೂಲೆ ಮೂಲೆಯಲ್ಲಿರುವ ಸೊಳ್ಳೆಗಳನ್ನು ಕ್ಷಣಾರ್ಧದಲ್ಲಿ ಓಡಿಸೋಕೆ!! ಟ್ರೈ ಮಾಡಿ ನೋಡಿ

ಕಾಯಿ ಟೊಮಾಟೊವನ್ನು ಈ ರೀತಿ ಇಡಿ: 
ನೀವು ಒಂದೆರಡು ದಿನ ಇಟ್ಟು ಬಳಸುವ ಉದ್ದೇಶ ಹೊಂದಿದ್ದಾರೆ ಖರೀದಿಸುವಾಗಲೇ ಇನ್ನೂ ಪೂರ್ತಿ ಮಾಗಿರದ ಟೊಮಾಟೊ ಖರೀದಿಸಿ. ಇದನ್ನು ಕೋಣೆಯ ಉಷ್ಣಾಂಶದಲ್ಲಿ ಇಟ್ಟರೂ ಕೂಡ ಅವು ಕೆಡುವುದಿಲ್ಲ. ಆದರೆ, ಇಡುವಾಗ ಕಾಂಡದ ಕಡೆಗೆ ಕೆಲಮುಖವಾಗಿ ಟೊಮಾಟೊ ಹರಡಿ ಇಡುವುದರಿಂದ ಇದು ಬೇಗ ಕೊಳೆಯುವುದಿಲ್ಲ. ಆದರೆ, ನೇರವಾಗಿ ಬಿಸಿಲಿರುವ ಜಾಗದಲ್ಲಿ ಟೊಮಾಟೊ ಇಡಬಾರದು ಎಂಬುದನ್ನು ನೆನಪಿನಲ್ಲಿಡಿ. 

ಪೇಪರ್ ಟವಲ್: 
ಟೊಮಾಟೊವನ್ನು ಫ್ರೀಜ್ದ್ ನಲ್ಲಿ ಇಡಬಾರದು. ಒಂದೊಮ್ಮೆ ನೀವು ಇವನ್ನು ಫ್ರಿಡ್ಜ್ ನಲ್ಲಿ ಇಡುವುದೇ ಆದರೆ ಶೇಖರಣಾ ಪಾತ್ರೆಯಲ್ಲಿ ಪೇಪರ್ ಟವಲ್ ಹಾಕಿ ಅದರ ಮೇಲೆ ಟೊಮಾಟೊ ಸಂಗ್ರಹಿಸಿ. ಇದು ಆರಂಭಿಕ ಕೊಳೆತವನ್ನು ತಪ್ಪಿಸುತ್ತದೆ. 

ಪ್ಲಾಸ್ಟಿಕ್ ಚೀಲಗಳನ್ನು ತಪ್ಪಿಸಿ: 
ಟೊಮೆಟೊಗಳನ್ನು ಎಂದಿಗೂ ಪ್ಲಾಸ್ಟಿಕ್ ಚೀಲಗಳಲ್ಲಿ ಸಂಗ್ರಹಿಸಬಾರದು. ಏಕೆಂದರೆ ಅವು ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತವೆ. ಇದರಿಂದಾಗಿ ಟೊಮಾಟೊ ತ್ವರಿತವಾಗಿ ಕೊಳೆಯಲು ಕಾರಣವಾಗುತ್ತದೆ. ಆದ್ದರಿಂದ ಟೊಮಾಟೊಗಳನ್ನು ಪ್ಲಾಸ್ಟಿಕ್ ಚೀಲದ ಬದಲಿಗೆ ಗಾಳಿಯಾಡದ ಪಾತ್ರೆಗಳಲ್ಲಿ ಅಥವಾ ಬುಟ್ಟಿಯಲ್ಲಿ ಇರಿಸಿ.  

ಇದನ್ನೂ ಓದಿ- ದೀಪಾವಳಿ ಹಬ್ಬದಂದು ಎಷ್ಟು ದೀಪಗಳನ್ನು ಬೆಳಗಿಸಬೇಕು ಗೊತ್ತಾ? ಇದಕ್ಕಿಂತ ಹೆಚ್ಚು ಅಥವಾ ಕಮ್ಮಿ ಹಣತೆ ಹಚ್ಚಿದರೂ ಲಕ್ಷ್ಮಿ ದೇವಿ ಮುನಿಸಿಕೊಳ್ಳುತ್ತಾಳೆ..!

ಈ ತರಕಾರಿಗಳೊಂದಿಗೆ ಟೊಮಾಟೊ ಇಡಬೇಡಿ: 
ಎಥಿಲೀನ್ ಅನಿಲವನ್ನು ಹೊರಸೂಸುವ ಹಣ್ಣುಗಳಾದ ಬಾಳೆಹಣ್ಣುಗಳು, ಸೇಬುಗಳು, ಆವಕಾಡೊಗಳಂತಹ ಹಣ್ಣುಗಳಿಂದ ಟೊಮೆಟೊಗಳನ್ನು ದೂರವಿಡಿ. 

ಈ ರೀತಿ ಮೇಲೆ ಉಲ್ಲೇಖಿಸಿದ ರೀತಿಯಲ್ಲಿ ಟೊಮಾಟೊ ಇಡುವುದರಿಂದ ಅವು ದೀರ್ಘಕಾಲದವರೆಗೆ ತಾಜಾವಾಗಿರುತ್ತವೆ. ಜೊತೆಗೆ ತ್ವರಿತವಾಗಿ ಕೊಳೆಯುವುದನ್ನು ತಡೆಯುತ್ತದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News