Kerebete: 'ಕೆರೆಬೇಟೆ', ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸದ್ದು ಮಾಡುತ್ತಿರುವ ಸಿನಿಮಾ. ಇತ್ತೀಚಿಗಷ್ಟೇ ರಿಲೀಸ್ ಆಗಿರುವ 'ಕೆರೆಬೇಟೆ' ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ಯಾಂಡಲ್ ವುಡ್ ನಲ್ಲಿ ಉತ್ತಮ ಸಿನಿಮಾಗಳ ಕೊರತೆ ಇದೆ, ಕಂಟೆಂಟ್ ಓರಿಯೆಂಟ್ ಸಿನಿಮಾಗಳು ಬರ್ತಾ ಇಲ್ಲ ಎನ್ನುವ ಕೊರಗಿಗೆ ಈಗ ಮದ್ದು ನೀಡಿದೆ 'ಕೆರೆಬೇಟೆ' ಸಿನಿಮಾ.
Kerebete : ರಾಜ್ಗುರು ಅವರ ನಿರ್ದೇಶನದಲ್ಲಿ ಮಾರ್ಚ್ ೧೫ ರಂದು ತೆರೆ ಕಂಡಿದ್ದು, ನೋಡುಗರಿಂದ ವಿಭಿನ್ನ ಅಭಿಪ್ರಾಯಗಳನ್ನು ಪಡೆದುಕೊಂಡಿದೆ. ಸಿನಿಮಾ ಯಾವ ರೀತಿಯ ಕಥಾ ಹಂದರವನ್ನು ಬಿಡಿಸಿಡುತ್ತದೆ ಎಂದು ವಿಮರ್ಶೆ ಓದಿ.
ಈ ಹಾಡನ್ನು ಶಾಸಕ ಹಾಗೂ ಮಾಜಿ ಹೋಂ ಮಿನಿಸ್ಟರ್ ಆರಗ ಜ್ಞಾನೇಂದ್ರ ಹಾಗೂ ಸಂಸದರಾದ ಬಿ ವೈ ರಾಘವೇಂದ್ರ ರಿಲೀಸ್ ಮಾಡಿದ್ದಾರೆ. ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ ಟೈಟಲ್ ಟ್ರ್ಯಾಕ್ ರಿಲೀಸ್ ಕಾರ್ಯಕ್ರಮದಲ್ಲಿ ಕೆರೆಬೇಟೆ ಚಿತ್ರದ ಹಾಡು ಅದ್ದೂರಿಯಾಗಿ ಬಿಡುಗಡೆಯಾಯಿತು.
Kerebete Official Trailer: 'ಕೆರೆಬೇಟೆ' ಫಸ್ಟ್ ಲುಕ್ ಮತ್ತು ಟೀಸರ್ ಮೂಲಕವೇ ಸ್ಯಾಂಡಲ್ವುಡ್ನಲ್ಲಿ ಭಾರಿ ಕುತೂಹಲ ಮೂಡಿಸಿರುವ ಸಿನಿಮಾ. ಇದೀಗ ಸಿನಿಮಾತಂಡ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. ಭಾರಿ ನಿರೀಕ್ಷೆಯ ಟ್ರೈಲರ್ ರಿಲೀಸ್ ಆಗಿದೆ.
Bindu Sivaram: ಸ್ಯಾಂಡಲ್ ವುಡ್ ಗೆ ಅನೇಕ ನಟಿಯರು ಎಂಟ್ರಿ ಕೊಡುತ್ತಿರುತ್ತಾರೆ. ಆದರೆ ಕೆಲವರು ಮಾತ್ರ ಗಟ್ಟಿಯಾಗಿ ಬೇರೂರುತ್ತಾರೆ ಮತ್ತು ಸ್ಟಾರ್ ಆಗಿ ಮೆರೆಯುತ್ತಾರೆ. ಇನ್ನು ಕೆಲವರು ಒಂದೆರಡು ಸಿನಿಮಾ ಮಾಡಿ ಮಾಯಾಗುತ್ತಾರೆ. ಇದೀಗ' ಕೆರೆ ಬೇಟೆ' ಸಿನಿಮಾ ಮೂಲಕ ಮತ್ತೋರ್ವ ನಟಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.
Kerebete Motion Poster Release: ನಿರ್ದೇಶಕ ರಾಜ್ಗುರು ಅವರಿಗೆ ಇದು ಚೊಚ್ಚಲ ಸಿನಿಮಾ. ಈ ಮೊದಲು ನಿರ್ದೇಶಕ ಪವನ್ ಒಡೆಯರ್ ಜೊತೆ ಗೂಗ್ಲಿ, ರಣವಿಕ್ರಮ, ನಟಸಾರ್ವಭೌಮ, ಜೆಸ್ಸಿ, ರೆಮೋ ಹಾಗೂ ಇನ್ನು ಅನೇಕ ಸಿನಿಮಾಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ಹೊಂದ್ದು ಇದೀಗ ಕೆರೆಬೇಟೆ ಮೂಲಕ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ ರಾಜ್ಗುರು.
ಕೆರೆಬೇಟೆ ಗೌರಿ ಶಂಕರ್ ಎಸ್ಆರ್ಜಿ ನಾಯಕನಾಗಿ ನಟಿಸಿರುವ ಸಿನಿಮಾ. ಈ ಚಿತ್ರಕ್ಕೆ ರಾಜ್ ಗುರು ಆಕ್ಷನ್ ಕಟ್ ಹೇಳಿದ್ದಾರೆ. ನಟ ಗೌರಿ ಶಂಕರ್ ಈ ಮೊದಲು ಜೋಕಾಲಿ ಮತ್ತು ರಾಜಹಂಸ ಸಿನಿಮಾಗಳಲ್ಲಿ ಹೀರೋ ಆಗಿ ಮಿಂಚಿದ್ದರು. ರಾಜಹಂಸ ಸಿನಿಮಾ ರಿಲೀಸ್ ಆಗಿ 5 ವರ್ಷಗಳ ಮೇಲಾಗಿದೆ. ಇದೀಗ ಗೌರಿ ಶಂಕರ್ ಕೆರೆಬೇಟೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.
ಸುತ್ತಮುತ್ತಲಿನ ಹಳ್ಳಿಗರು ಒಂದೇ ಸಮಯಕ್ಕೆ ಸೇರಿ ಹಿಡಿಯುವ ಸಂಪ್ರದಾಯವಿದು. ಒಂದು ಬದಿಗೆ ಬಾಯ್ತೆರೆದಿರುವ ಬೆತ್ತದ ಬುಗುರಿ ಆಕಾರದ ಕೂಣಿಯನ್ನು ಕೈಯಲ್ಲಿ ಹಿಡಿದು ಒಂದೇ ಸಮಯಕ್ಕೆ ಕೆರೆಯ ಒಂದು ಕಡೆಯಿಂದ ಕೂಣಿಯನ್ನು ನೀರಲ್ಲಿ ಒತ್ತುತ್ತಾ, ಕೇ ಕೇ ಹಾಕುತ್ತಾ, ಪೈಪೊಟಿಯಲ್ಲಿ ಸಾಗುತ್ತಾರೆ.
'ಕೆರೆಬೇಟೆ' ಅನ್ನೋದು ನಿಜಕ್ಕೂ ಮಲೆನಾಡಿನಲ್ಲಿ ವಿಶೇಷವಾಗಿಯೇ ನಡೆಯುತ್ತದೆ. ಕೆರೆ ಬತ್ತಿ ಶೇ.70ರಷ್ಟು ನೀರು ಬತ್ತಿದಾಗ ಮೀನು ಹಿಡಿಯೋದನ್ನೇ ಇಲ್ಲಿ 'ಕೆರೆಬೇಟೆ' ಅಂತಲೇ ಕರೆಯುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.