Post Ganesh temple : ಭಾರತವು ಅನಾದಿ ಕಾಲದಿಂದಲೂ ಸಂಸ್ಕೃತಿ ಮತ್ತು ಸಂಪ್ರದಾಯದ ಪ್ರತೀಕವಾಗಿ ನಿಂತಿರುವ ಅದ್ಭುತ ದೇಶ. ವೇದಗಳು ಹುಟ್ಟಿದ ಈ ಭೂಮಿ ಅನೇಕ ಪುರಾತನ ದೇವಾಲಯಗಳಿಗೂ ಹೆಸರುವಾಸಿಯಾಗಿದೆ. ಅಂತಹ ಒಂದು ಭವ್ಯವಾದ ದೇವಾಲಯದಲ್ಲಿ ರಣಥಂಬೋರ್‌ನಲ್ಲಿರುವ ತ್ರಿನೇತ್ರ ಗಣಪತಿ ದೇವಾಲಯ ವಿಸ್ಮಯಕಾರಿ ಸಂಪ್ರದಾಯದ ಮೂಲಕ ಅಚ್ಚರಿ ಸೃಷ್ಟಿಸುತ್ತಿದೆ..
ಹೌದು.. ನಮಗೆ ಯಾವುದೇ ಸಮಸ್ಯೆ ಎದುರಾದರೂ ಪೋಷಕರಿಗೆ, ಸ್ನೇಹಿತರಿಗೆ ಕರೆ ಮಾಡಿ ಮಾತನಾಡುತ್ತೇವೆ, ಪತ್ರವನ್ನು ಸಹ ಬರೆಯುತ್ತೇವೆ. ಅಲ್ಲದೆ ದೇಗುಲಕ್ಕೆ ಹೋಗಿ ದೇವರ ಮುಂದೆ ಪ್ರಾರ್ಥನೆ ಮಾಡಿಕೊಂಡು ಕಷ್ಟ ಪರಿಹಾರ ಮಾಡು ಅಂತ ಬೇಡಿಕೊಳ್ಳುತ್ತೇವೆ. ಆದ್ರೆ ದೇವರಿಗೊಂದು ಪತ್ರ ಬರೆದು ನಿಮ್ಮ ಸಮಸ್ಯೆಗಳಿಗೆ ಮುಕ್ತಿ ಪಡೆಯಬಹದು ಅಂತ ನಿಮ್ಗೆ ಗೊತ್ತಾ..? ನಾವ್ ಹೇಳ್ತೇವೆ ಕೇಳಿ..
ಇದನ್ನೂ ಓದಿ:ಚಾಣಕ್ಯ ನೀತಿ: ಈ ಅಭ್ಯಾಸವಿರುವವರು ಎಷ್ಟು ಸಂಪಾದಿಸಿದರೂ ಏನೂ ಉಳಿಯುವುದಿಲ್ಲ
ತ್ರಿನೇತ್ರ ಗಣೇಶ ದೇವಾಲಯ, ಈ ದೇಗುಲ ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯ ರಣಥಂಬೋರ್‌ನಲ್ಲಿದೆ. ಅರಾವಳಿ ಮತ್ತು ವಿಂಧ್ಯ ಪರ್ವತಗಳ ಸಂಗಮದಲ್ಲಿ ಭವ್ಯವಾಗಿ ನಿಂತಿರುವ ಈ ಪವಿತ್ರ ದೇವಾಲಯವನ್ನು ನೋಡಲು ಎರಡು ಕಣ್ಣುಗಳು ಸಾಕಾಗುವುದಿಲ್ಲ.
ಮೇಲಾಗಿ ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ಉತ್ತರ ಸಿಗದೇ ಹೋದಾಗ ಸ್ವಾಮಿಯನ್ನು ಸ್ಮರಿಸಿದರೆ ತಕ್ಷಣ ಫಲ ಸಿಗುತ್ತದೆ ಎಂಬುದು ಹಲವರ ನಂಬಿಕೆ. ಇಲ್ಲಿನ ಭಕ್ತರು ಯಾವುದೇ ಸಣ್ಣ ಸಮಸ್ಯೆ ಎದುರಾದರೂ ಸ್ವಾಮಿಯ ಮೇಲೆ ಅಪಾರ ನಂಬಿಕೆಯಿಂದ ಗಣೇಶನಿಗೆ ಪತ್ರ ಬರೆಯುತ್ತಾರೆ. ತಮ್ಮ ಸಮಸ್ಯೆಗಳನ್ನು ಬರವಣಿಗೆ ಮೂಲಕ ವಿಘ್ನವಿನಾಶಕನಲ್ಲಿ ಬೇಡಿಕೊಂಡರೆ ಶಿವಸುತನೇ ಬಂದು ಪರಿಹರಿಸುತ್ತಾರೆ ಎಂಬುದು ಇಲ್ಲಿನ ಭಕ್ತರ ನಂಬಿಕೆ.
ಇದನ್ನೂ ಓದಿ: ನವರಾತ್ರಿಯಂದು ಹುಟ್ಟಿದ ಹೆಣ್ಣುಮಕ್ಕಳು ಅದೃಷ್ಟವಂತರೇ? ಇಲ್ಲಿದೆ ಕುತೂಹಲಕಾರಿ ರಹಸ್ಯ..!!
ಈ ನಂಬಿಕೆ ನಿಜವಾಗಿ ಹೇಗೆ ಬಂತು ಗೊತ್ತಾ? ಆ ಸಮಯದಲ್ಲಿ ಅಂದರೆ 1299 - 1301 ರ ನಡುವೆ.. ಸ್ಥಳೀಯವಾಗಿ ಈ ಪ್ರಾಂತ್ಯವನ್ನು ಆಳುತ್ತಿದ್ದ ಮಹಾರಾಜ ಹಮೀರ್ ದೇವ್ ಚೌಹಾನ್ ದೆಹಲಿಯ ದೊರೆ ಅಲ್ಲಾವುದ್ದೀನ್ ಖಿಲ್ಜಿಯೊಂದಿಗೆ ಸಂಘರ್ಷವನ್ನು ಹೊಂದಿದ್ದನು. ಖಿಲ್ಜಿ ತನ್ನ ಬೃಹತ್ ಸೈನ್ಯದೊಂದಿಗೆ ಬಂದು ರಣಥಂಬೋರ್ ಕೋಟೆಯನ್ನು ಮುತ್ತಿದನು. ಕೆಲವು ದಿನಗಳಿಂದ ಬೆಟ್ಟದ ಮೇಲಿನ ಕೋಟೆಗಳು ಮೂಲಭೂತ ಸೌಕರ್ಯಗಳಿಂದಲೂ ವಂಚಿತವಾಗಿದ್ದವು. ಹೀಗೆಯೇ ಮುಂದುವರಿದರೆ ಶತ್ರುವಿನ ದಾಳಿಗಿಂತ ಹಸಿವಿನಿಂದಲೇ ಸಾಯುವವರೇ ಹೆಚ್ಚಾಗುತ್ತಿದ್ದರು. ಇದರಿಂದ ದಿಕ್ಕು ತಪ್ಪಿದ ರಾಜನಿಗೆ ಕನಸಿನಲ್ಲಿ ಕಾಣಿಸಿಕೊಂಡ ಗಣನಾಯಕನು ಕೋಟೆಯ ಗೋಡೆಯಲ್ಲಿ ಅಡಗಿರುವ ತನ್ನ ವಿಗ್ರಹವನ್ನು ಹೊರತೆಗೆದು ಪೂಜಿಸುವಂತೆ ಆದೇಶಿಸಿದನು.
ಮರುದಿನ ರಾಜನು ಆ ಸ್ಥಳವನ್ನು ಕಂಡುಹಿಡಿದನು ಮತ್ತು ಕೋಟೆಯನ್ನು ಒಡೆದು ಗಣೇಶನ ವಿಗ್ರಹವನ್ನು ಹೊರತೆಗೆದನು. ಬಳಿಕ ಭಗವಂತನನ್ನು ಪೂರ್ಣ ಭಕ್ತಿಯಿಂದ ಪೂಜಿಸಿದರು. ಆಶ್ಚರ್ಯಕರವಾಗಿ, ಮರುದಿನ ಖಿಲ್ಜಿಯ ಪಡೆಗಳು ಸ್ವಯಂಪ್ರೇರಣೆಯಿಂದ ಆ ಸ್ಥಳದಿಂದ ಹಿಮ್ಮೆಟ್ಟಿದವು. ಅಂದಿನಿಂದ ಈ ಗಣೇಶನು ಕಷ್ಟಗಳನ್ನು ಪರಿಹರಿಸುವ ಗಣಪಯ್ಯ ಎಂದೇ ಪ್ರಸಿದ್ಧನಾದನು.
ಇದನ್ನೂ ಓದಿ:ಮಹಿಳೆಯರು ತೆಂಗಿನಕಾಯಿ ಒಡೆಯಬಾರದು; ಯಾಕೆ ಗೊತ್ತಾ? ಇಲ್ಲಿದೆ ವಿಶೇಷ ಕಾರಣ!
ಆದರೆ ಈಗ ಈ ದೇವಾಲಯ ರಣಥಂಬೋರ್ ಹುಲಿ ಸಂರಕ್ಷಿತ ಪ್ರದೇಶದ ಕೇಂದ್ರ ಪ್ರದೇಶದಲ್ಲಿದೆ. ಈ ದೇವಾಲಯವನ್ನು ತಲುಪಬೇಕು ಎಂದರೆ ನೀವು ರೈಲಿನಲ್ಲಿ ಸವಾಯಿ ಮಾಧೋಪುರ್ ನಿಲ್ದಾಣವನ್ನು ತಲುಪಬೇಕು. ಅಲ್ಲಿಂದ ಈ ದೇವಾಲಯವು ಕೇವಲ ಹತ್ತು ಕಿಲೋಮೀಟರ್ ದೂರ. ನಿಮ್ಮ ಸಮಸ್ಯೆಯನ್ನು ಪತ್ರದ ಮೂಲಕವೂ ಬರೆದು ಕಳುಹಿಸಬಹುದು.. ವಿಳಾಸ ಇಲ್ಲಿದೆ.. ರಣಥಂಬೋರ್ ತ್ರಿನೇತ್ರ ಗಣೇಶ ದೇವಸ್ಥಾನ, ಸವಾಯಿ ಮಾಧೋಪುರ್, ರಾಜಸ್ಥಾನ - 322021.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.