Janmashtami 2021: ಪಂಚಾಂಗದ ಪ್ರಕಾರ, 30 ಆಗಸ್ಟ್ 2021 ರಂದು ಜನ್ಮಾಷ್ಟಮಿಯ ಹಬ್ಬವನ್ನು ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ದಿನಾಂಕದಂದು ಸೋಮವಾರ ಆಚರಿಸಲಾಗುತ್ತಿದೆ. ಈ ದಿನವನ್ನು ದೇಶಾದ್ಯಂತ ಶ್ರೀಕೃಷ್ಣನ (Lord Krishna) ಜನ್ಮದಿನವಾಗಿ ಆಚರಿಸಲಾಗುತ್ತದೆ. ಜನ್ಮಾಷ್ಟಮಿಯ (Shri Krishna Janmasthami 2021) ಹಬ್ಬವನ್ನು ಭಾರತದಲ್ಲಿ ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.
ಜನ್ಮಾಷ್ಟಮಿಯ ದಿನ ಶ್ರೀಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಶ್ರೀಕೃಷ್ಣನನ್ನು ಪೂಜಿಸುವುದರಿಂದ ಎಲ್ಲಾ ರೀತಿಯ ದುಃಖಗಳಿಂದ ಮುಕ್ತಿ ಪಡೆಯಬಹುದು ಮತ್ತು ಜೀವನದಲ್ಲಿ ಸಂದೋಷ ಮತ್ತು ಸಮೃದ್ಧಿ ಪ್ರಾಪ್ತಿಯಾಗಲಿದೆ ಎಂಬುದು ಧಾರ್ಮಿಕ ನಂಬಿಕೆ. ಈ ದಿನ ನೀವೂ ಕೂಡ ನಿಮ್ಮ ನಿಮ್ಮ ರಾಶಿಗೆ (Zodiac Sign) ಅನುಗುಣವಾಗಿ ಶ್ರೀಕೃಷ್ಣನನ್ನು ಪ್ರಸನ್ನಗೊಳಿಸಿ.
ಮೇಷ ರಾಶಿ - ಜನ್ಮಾಷ್ಟಮಿಯ ಹಬ್ಬದಂದು, ಮೇಷ ರಾಶಿಯ ಜನರು ಶ್ರೀಕೃಷ್ಣನಿಗೆ ಹಾಲು ಮತ್ತು ಬಾದಾಮಿಯನ್ನು ಅರ್ಪಿಸಬೇಕು. ಇದು ಜೀವನದ ಅಡೆತಡೆಗಳನ್ನು ನಿವಾರಿಸುತ್ತದೆ.
ವೃಷಭ ರಾಶಿ - ಜನ್ಮಾಷ್ಟಮಿಯಂದು ಶ್ರೀಕೃಷ್ಣನಿಗೆ ಕಲ್ಲುಸಕ್ಕರೆ ನೀಡುವ ಸಂಪ್ರದಾಯವಿದೆ. ಕಲ್ಲುಸಕ್ಕರೆ ಶ್ರೀಕೃಷ್ಣನಿಗೆ ಪ್ರಿಯ. ಈ ದಿನ, ವೃಷಭ ರಾಶಿಯ ಜನರು ಕೃಷ್ಣನಿಗೆ ಕಲ್ಲು ಸಕ್ಕರಿ ಅರ್ಪಿಸಬೇಕು
ಮಿಥುನ ರಾಶಿ - ಜನ್ಮಾಷ್ಟಮಿಯಂದು ಶ್ರೀಕೃಷ್ಣನನ್ನು ಮೆಚ್ಚಿಸಲು, ಶ್ರೀ ಗೋಪಾಲ ಸಹಸ್ರನಾಮವನ್ನು ಪಠಿಸಿ.
ಕರ್ಕ ರಾಶಿ - ಬಿಳಿ ಬಣ್ಣದ ಹೂವುಗಳನ್ನು ಅರ್ಪಿಸಿ ಮತ್ತು ರಾಧಾಷ್ಟಕವನ್ನು ಪಠಿಸಿ. ಇದನ್ನು ಮಾಡುವುದರಿಂದ, ಶ್ರೀಕೃಷ್ಣನ ಅನುಗ್ರಹ ನಿಮ್ಮ ಮೇಲೆ ಉಳಿಯಲಿದೆ.
ಸಿಂಹ ರಾಶಿ - ಸಿಂಹ ರಾಶಿಯ ಅಧಿಪತಿ ಸೂರ್ಯ. ಸೂರ್ಯನನ್ನು ಎಲ್ಲಾ ಗ್ರಹಗಳ ಅಧಿಪತಿ ಎಂದು ಪರಿಗಣಿಸಲಾಗಿದೆ. ನೀವು ಜನ್ಮಾಷ್ಟಮಿಯಂದು ವಿಷ್ಣು ಸಹಸ್ರನಾಮವನ್ನು ಪಠಿಸುವುದು ಉತ್ತಮ.
ಇದನ್ನೂ ಓದಿ-Janmasthami 2021: ಶ್ರೀ ಕೃಷ್ಣ ಜನ್ಮಾಷ್ಟಮಿಯ ಸರಿಯಾದ ಪೂಜಾ ವಿಧಿ ಹಾಗೂ ಶುಭ ಮುಹೂರ್ತ
ಕನ್ಯಾ ರಾಶಿ - ಈ ರಾಶಿ ಚಕ್ರದ ಜನರು ಓಂ ದೇವಕಿನಂದನಾಯ ನಮಃ ಮಂತ್ರವನ್ನು ಪಠಿಸಿ.
ತುಲಾ ರಾಶಿ - ತುಳಸಿ ಮತ್ತು ಮೊಸರನ್ನು ಅರ್ಪಿಸಿ ಮತ್ತು ಓಂ ಲೀಲಾಧರಾಯೈ ನಮಃ ಮಂತ್ರವನ್ನು ಪಠಿಸಿ.
ವೃಶ್ಚಿಕ ರಾಶಿ - ಪ್ರಸ್ತುತ ಕೇತು ವೃಶ್ಚಿಕ ರಾಶಿಯಲ್ಲಿ ಗೋಚರಿಸುತ್ತಿದ್ದಾನೆ. ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ಜನ್ಮಾಷ್ಟಮಿಯಂದು ಶ್ರೀಕೃಷ್ಣನಿಗೆ ಜೇನುತುಪ್ಪವನ್ನು ಅರ್ಪಿಸಿ.
ಧನು ರಾಶಿ - ನಿಮಗೆ ಓಂ ನಮೋ ಭಗವತೇ ವಾಸುದೇವಾಯ ನಮಃ, ಮಂತ್ರವನ್ನು ಪಠಿಸುವುದರಿಂದ ಪ್ರಯೋಜನಗಳು ಸಿಗಲಿವೆ.
ಇದನ್ನೂ ಓದಿ-Swapna Shastra: ಅದೃಷ್ಟವಂತರ ಕನಸಿನಲ್ಲಷ್ಟೇ ಕಾಣುತ್ತದೆಯಂತೆ ಈ ಜೀವಿಗಳು..! ನೀವು ಆ ಭಾಗ್ಯಶಾಲಿಗಳೇ?
ಮಕರ ರಾಶಿ - ಜನ್ಮಾಷ್ಟಮಿಯಂದು ನೀವು ಶ್ರೀಕೃಷ್ಣನ 108 ನಾಮಗಳನ್ನು ಜಪಿಸಿ ಮತ್ತು ಹೂವುಗಳು ಮತ್ತು ಸಿಹಿತಿಂಡಿಗಳನ್ನು ಅರ್ಪಿಸಿ.
ಕುಂಭ ರಾಶಿ - ದೇವರಿಗೆ ಹಳದಿ ಹೂವುಗಳನ್ನು ಅರ್ಪಿಸಿ ಮತ್ತು ಓಂ ನಮೋ ಕೃಷ್ಣ ವಲ್ಲಭಾಯೈ ನಮಃ ಮಂತ್ರವನ್ನು ಪಠಿಸಿ.
ಮೀನ ರಾಶಿ - ಜನ್ಮಾಷ್ಟಮಿಯಂದು, ಶ್ರೀಕೃಷ್ಣನಿಗೆ ಅಭಿಷೇಕ ಮಾಡಿ ಮತ್ತು ಓಂ ನಮೋ ಭಗವತೇ ವಾಸುದೇವಾಯ ನಮಃ ಈ ಮಂತ್ರವನ್ನು ಪಠಿಸಿ.
ಇದನ್ನೂ ಓದಿ-Shani Rashi Parivartan:ಶನಿಯ ರಾಶಿಯ ಬದಲಾವಣೆಯಿಂದ ಈ ರಾಶಿಗಳಿಗೆ ಲಾಭ, ಜೀವನದಲ್ಲಿ ದೊಡ್ಡ ಬದಲಾವಣೆ ಸಾಧ್ಯತೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ