Success Tips: ಸೂರ್ಯೋದಯದ ವೇಳೆ ಈ ಕೆಲಸ ಮಾಡಿ, ಜೀವನದಲ್ಲಿ ಯಾವುದೇ ಕೊರತೆ ಎದುರಾಗುವುದಿಲ್ಲ

Money Earning Tips - ನಿಮ್ಮ ಮೇಲೆ ಸೂರ್ಯನ ಕೃಪೆ ಇದ್ದರೆ, ಜೀವನದಲ್ಲಿ ಯಾವುದೇ ರೀತಿಯ ಕೊರತೆ ಎದುರಾಗುವುದಿಲ್ಲ. ಹೀಗಾಗಿ ಸೂರ್ಯದೇವನನ್ನು ಮೆಚ್ಚಿಸಲು ದಿನನಿತ್ಯ ಕೆಲ ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕು.

Written by - Nitin Tabib | Last Updated : Jan 28, 2022, 06:22 PM IST
  • ಸೂರ್ಯನನ್ನು ಪ್ರಸನ್ನಗೊಳಿಸಿ
  • ಸಿಗಲಿದೆ ಅಪಾರ ಯಶಸ್ಸು ಹಾಗೂ ಹಣ
  • ಸೂರ್ಯನಿಗೆ ಅರ್ಘ್ಯ ನೀಡುವಾಗ ಅರ್ಘ್ಯದಲ್ಲಿ ಈ ವಿಶೇಷ ಸಂಗತಿ ಇರಲಿ
Success Tips: ಸೂರ್ಯೋದಯದ ವೇಳೆ ಈ ಕೆಲಸ ಮಾಡಿ, ಜೀವನದಲ್ಲಿ ಯಾವುದೇ ಕೊರತೆ ಎದುರಾಗುವುದಿಲ್ಲ title=
Money Earning Tips (File Photo)

ನವದೆಹಲಿ: Way To Shine Luck - ಸೂರ್ಯ ಶಕ್ತಿಯ ಮೂಲ. ಅದಿಂದಲೇ ನಮಗೆ ಜೀವನ ಸಿಗುತ್ತದೆ ಮತ್ತು ಮುಂದಕ್ಕೆ ಸಾಗುತ್ತದೆ. ಆದ್ದರಿಂದಲೇ ಹಿಂದೂ ಧರ್ಮದಲ್ಲಿ ಸೂರ್ಯನಿಗೆ ಅತ್ಯಂತ ಉನ್ನತ ಸ್ಥಾನವನ್ನು ನೀಡಲಾಗಿದೆ. ಸೂರ್ಯನನ್ನು ದೇವ (Surya Dev) ಎಂದು ಪರಿಗಣಿಸಲಾಗುತ್ತದೆ. ಅನೇಕ ಜನರು ಪ್ರತಿದಿನ ಬೆಳಗ್ಗೆ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುತ್ತಾರೆ (Arghya To Surya Dev). ಅವನ ಅನುಗ್ರಹದಿಂದ ಜೀವನದಲ್ಲಿ ಯಶಸ್ಸು, ಆರೋಗ್ಯ ಮತ್ತು ಸಂತೋಷ ಲಭಿಸುತ್ತದೆ. ಜ್ಯೋತಿಷ್ಯದಲ್ಲಿಯೂ (Astrology) ಸೂರ್ಯನನ್ನು ಗ್ರಹಗಳ ರಾಜ ಎಂದು ಪರಿಗಣಿಸಲಾಗುತ್ತದೆ. ಸೂರ್ಯನಿಗೆ ಸಂಬಂಧಿಸಿದ ಪರಿಹಾರಗಳನ್ನು ಬಹಳ ಮುಖ್ಯ ಮತ್ತು ಶಕ್ತಿಯುತವೆಂದು ಪರಿಗಣಿಸಲಾಗುತ್ತದೆ, ಅವುಗಳನ್ನು ಮಾಡುವುದರಿಂದ ಜೀವನದ ಎಲ್ಲಾ ದೋಷಗಳು ದೂರವಾಗುತ್ತವೆ. ಇಂದು ನಾವು ಸೂರ್ಯನಿಗೆ ಸಂಬಂಧಿಸಿದ ಅಂತಹ ಶಕ್ತಿಯುತ ಪರಿಹಾರಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. 

ತುಂಬಾ ಪರಿಣಾಮಕಾರಿ ಈ ಉಪಾಯಗಳು
ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದಕ್ಕೆ ಸಂಬಂಧಿಸಿದ ಈ ಪರಿಹಾರಗಳು ಬಹಳ ಪರಿಣಾಮಕಾರಿಯಾಗಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವಾಗ ಅದರಲ್ಲಿ ಕೆಲವು ವಸ್ತುಗಳನ್ನು ಮಿಶ್ರಣ ಮಾಡುವುದರಿಂದ ಹಲವು ಇಷ್ಟಾರ್ಥಗಳು ನೆರವೇರುತ್ತವೆ ಮತ್ತು ಜೀವನದಲ್ಲಿ ಸಾಕಷ್ಟು ಯಶಸ್ಸಿನ ಜೊತೆಗೆ ಹಣ ಪ್ರಾಪ್ತಿಯಾಗುತ್ತದೆ

>> ಕುಂಕುಮ: ಕುಂಕುಮ ಮಿಶ್ರಿತ ನೀರಿನಿಂದ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದರಿಂದ ಸೂರ್ಯ ದೋಷ ನಿವಾರಣೆಯಾಗುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ ಮತ್ತು ಜೀವನದಲ್ಲಿ ಅಭಿವೃದ್ಧಿ ಇರುತ್ತದೆ. ಇದರೊಂದಿಗೆ ದೇಹದಲ್ಲಿ ರಕ್ತ ಸಂಚಾರ ಉತ್ತಮವಾಗಿರುತ್ತದೆ.

>> ಹೂವುಗಳು: ಹಿಂದೂ ಧರ್ಮದಲ್ಲಿ, ದೇವರು ಮತ್ತು ದೇವತೆಗಳ ಪೂಜೆಯಲ್ಲಿ ಹೂವುಗಳ ಬಳಕೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಸೂರ್ಯ ದೇವರಿಗೆ ಕೆಂಪು ಹೂವುಗಳಿಂದ ಕೂಡಿದ ನೀರನ್ನು ಅರ್ಪಿಸುವುದರಿಂದ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ.

>> ಅಕ್ಷತೆ: ಹಿಂದೂ ಧರ್ಮದಲ್ಲಿ ಅಕ್ಷತೆ (ಅಕ್ಕಿ) ಅನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಕ್ಷತೆಯನ್ನು ನೀರಿನಲ್ಲಿ ಬೆರೆಸಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದರಿಂದ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಪ್ರಾಪ್ತಿಯಾಗುತ್ತದೆ.

>> ಕಲ್ಲು ಸಕ್ಕರೆ: ಕಲ್ಲು ಸಕ್ಕರೆ ಮಿಶ್ರಿತ ನೀರನ್ನು ಅರ್ಪಿಸಿದರೂ ಸಹ, ಸೂರ್ಯ ದೇವರು ಪ್ರಸನ್ನನಾಗುತ್ತಾನೆ ಮತ್ತು ಜೀವನದಲ್ಲಿ ಸಂತೋಷ ತುಂಬುತ್ತಾನೆ.

ಇದನ್ನೂ ಓದಿ-Kitchen Tips : ಮನೆಯಲ್ಲಿ ಬಾಣಲೆ ಬಳಸುವಾಗ ಮಾಡದಿರಿ ಈ ತಪ್ಪುಗಳನ್ನ! ಇಲ್ಲದಿದ್ದರೆ ತಪ್ಪಿದಲ್ಲ ಆರ್ಥಿಕ ಸಮಸ್ಯೆ 

>> ಅರಿಶಿನ: ಅರಿಶಿನ ಮಿಶ್ರಿತ ನೀರನ್ನು ಸೂರ್ಯನಿಗೆ ಅರ್ಪಿಸುವುದರಿಂದ ಶೀಘ್ರವೇ ಕಂಕಣ ಬಲ ಕೂಡಿ ಬರುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಧನ ಲಾಭ ಪ್ರಾಪ್ತಿಯಾಗುತ್ತದೆ.

ಇದನ್ನೂ ಓದಿ-ಇವತ್ತಿನ ದಿನ ಮಾಡುವ ಈ ತಪ್ಪುಗಳಿಂದ ವಿಷ್ಣುವಿನ ಅವಕೃಪೆಗೆ ಪಾತ್ರರಾಗಬೇಕಾಗುತ್ತದೆ

(Disclaimer: ಈ ಲೇಖನನಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-Astrology: ಈ 4 ರಾಶಿಯವರ ಬುದ್ದಿವಂತಿಕೆ ಮುಂದೆ ಎಲ್ಲರೂ ತಲೆಬಾಗುತ್ತಾರೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News