ನವದೆಹಲಿ : ಹಿರಿಯರ ಪ್ರಕಾರ, ಕೆಲವೊಂದು ಘಟನೆಗಳು ನಡೆಯಲೇ ಬಾರದು. ಯಾಕೆಂದರೆ ಅದು ಅಪಶಕುನ. ಎಲ್ಲಾ ಘಟನೆಗಳನ್ನು ಶಕುನಗಳಲ್ಲಿ ನೋಡುವವರು ಇದ್ದಾರೆ. ಕೆಲವೊಂದು ಕೆಲಸಗಳಿರುತ್ತವೆ ಅವುಗಳನ್ನು ಮಾಡಿದರೆ ಎಂಥ ಕೆಲಸಗಳು ಕೂಡ ಕೈಗೂಡುತ್ತವೆ. ಅವುಗಳನ್ನು ಶುಭ ಶಕುನ ಎನ್ನುತ್ತೇವೆ. ಆದರೆ ಅದೇ ಕೆಲವು ಕೆಲಸಗಳಿರುತ್ತವೆ. ಅವು ಕೆಲಸಗಳೆಲ್ಲವನ್ನೂ ಕೆಡಿಸಿ ಬಿಡುತ್ತವೆ .
ಸಣ್ಣ ಮಕ್ಕಳು ಇರುವ ಮನೆಗಳಲ್ಲಿ ನಕಾರಾತ್ಮಕ ಶಕ್ತಿಗಳು (Negetive energy) ಬೇಗನೆ ಪ್ರಾಬಲ್ಯ ಸಾಧಿಸುತ್ತವೆ ಎಂದು ನಂಬಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ತಮ್ಮ ಹಾಸಿಗೆಯ ತಲೆಯ ಬಳಿ ಇಟ್ಟುಕೊಂಡರೆ ನಕಾರಾತ್ಮಕ ಶಕ್ತಿಗಳು ನಮ್ಮ ಬಳಿ ಸುಳಿಯುವುದಿಲ್ಲವಂತೆ. ಆದರೆ ಅದೇ ತುಕ್ಕು ಹಿಡಿದ ಕಬ್ಬಿಣದ ವಸ್ತುಗಳನ್ನು ಮನೆಯಲ್ಲಿ ಇಡುವುದು ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ : Dream Sign: ಈ ರೀತಿಯ ಕನಸುಗಳು ಮೃತ್ಯುವಿನ ಸಂಕೇತವಂತೆ
ನಲ್ಲಿಯಿಂದ ನೀರು (Water) ತೊಟ್ಟಿಕ್ಕುತ್ತಿದ್ದರೆ ಮನೆಗಳಲ್ಲಿ, ಹಣದ ನಷ್ಟ (Money problem) ಸಂಭವಿಸುತ್ತದೆಯಂತೆ. ಇನ್ನು ಮುಂಜಾನೆ ಎದ್ದ ಕೂಡಲೇ ಸನಾದ ಮನೆಯಲ್ಲಿ ಖಾಲಿ ಬಕೆಟ್ ಅನ್ನು ನೋಡುವುದು ಸಹ ಅಶುಭ ಎಂದು ಪರಿಗಣಿಸಲಾಗಿದೆ. ಖಾಲಿ ಬಕೆಟ್ ನೋಡುವುದರಿಂದ ಆರ್ಥಿಕ ಮತ್ತು ಮಾನಸಿಕ ಸಮಸ್ಯೆಗಳು ಎದುರಾಗುತ್ತವೆಯಂತೆ.
ಪೊರಕೆಯನ್ನು (Broom) ಲಕ್ಷ್ಮಿ ದೇವಿಯ (Godess Lakshmi) ಸಂಕೇತ ಎನ್ನಲಾಗಿದೆ. ಪೊರಕೆಗೆ ಕಾಲು ತಾಗಿಸುವುದು ಒಳ್ಳೆಯದಲ್ಲ ಎನ್ನಲಾಗಿದೆ. ಅಲ್ಲದೆ, ಸಂಜೆ ಮೇಲೆ ಕಸ ಗುಡಿಸುವುದು ಕೂಡಾ ತಪ್ಪು ಎಂದು ನಂಬಲಾಗಿದೆ.
ಇದನ್ನೂ ಓದಿ : July Born People: ಜುಲೈನಲ್ಲಿ ಜನಿಸಿದ ವ್ಯಕ್ತಿಯ ಸ್ವಭಾವ ಹೇಗಿರುತ್ತೆ? ಇಲ್ಲಿದೆ ಕೆಲವು ಆಸಕ್ತಿದಾಯಕ ಮಾಹಿತಿ
ವಾಸ್ತು ಶಾಸ್ತ್ರದಲ್ಲಿ, ಗಾಜು ಅಥವಾ ಗಾಜಿನ ವಸ್ತುಗಳು ಒಡೆಯುವುದೆಂದರೆ ಕೆಟ್ಟ ಶಕುನ ಎನ್ನಲಾಗಿದೆ. ಒಡೆದ ಕನ್ನಡಿಯಲ್ಲಿ ಯಾವತ್ತೂ ಮುಖ ನೋಡ ಬಾರದಂತೆ. ಇನ್ನು ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕನ್ನಡಿ ತೋರಿಸಬಾರದಂತೆ. ಒಡೆದ ಗಾಜಿನ ತುಂಡುಗಳನ್ನು ಮನೆಯ ಮೂಲೆಗಳಲ್ಲಿ ಇಡುವುಡು ಕೂಡಾ ಅಶುಭ.
ನಾಯಿ ಮತ್ತು ಬೆಕ್ಕುಗಳು ಮನೆಯಲ್ಲಿ ಕೂಗುವುದು ಅಥವಾ ಪರಸ್ಪರ ಜಗಳವಾಡುವುದು ಒಳ್ಳೆಯ ಸಂಕೇತವಲ್ಲ.
ಇದನ್ನೂ ಓದಿ : ಬೇಡಿದ್ದನ್ನು ಈಡೇರಿಸುತ್ತಾಳೆ ಮನೆಯಂಗಳದ ತುಳಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.